ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ ಬೆರೆಸಿ ಬಳಸಿದರೆ ಕೆಲವೇ ವಾರದಲ್ಲಿ ಶಾಶ್ವತವಾಗಿ ಕಪ್ಪಾಗುತ್ತೆ ಬಿಳಿ ಕೂದಲು

Written ByYashaswini VUpdated byYashaswini V
Published: Jan 20, 2025, 10:43 AM IST|Updated: Jan 20, 2025, 10:43 AM IST

Coconut Oil For Gray Hair: ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಬಾಧಿಸುತ್ತಿರುವ ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. 

Gray Hair Problem1/8

ಬಿಳಿ ಕೂದಲು ಕೆಲವರಲ್ಲಿ ಆತ್ಮವಿಶ್ವಾಸವನ್ನೇ ಕುಗ್ಗಿಸಿಬಿಡುತ್ತದೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲಿ ಮೂಡುವ ನೆರೆ ಕೂದಲು ಕೆಲವರ ಮನಸ್ಸಿನಲ್ಲಿ ಕೀಳರಿಮೆಯನ್ನು ಮೂಡಿಸುತ್ತದೆ. 

Hair Dye For White Hair 2/8

ಬಿಳಿ ಕೂದಲನ್ನು ಮರೆಮಾಚಲು ಎಲ್ಲರಿಗೂ ತಕ್ಷಣ ಹೊಳೆಯುವ ಉಪಾಯವೆಂದರೆ ಹೇರ್ ಡೈ ಬಳಸುವುದು. 

Hair Dye Side effects 3/8

ಬಿಳಿ ಕೂದಲನ್ನು ಕಪ್ಪಾಗಿಸುವ ಭರದಲ್ಲಿ ಕೆಲವರು ಹೇರ್ ಡೈ ಬಳಕೆಯಿಂದ ಚರ್ಮ, ಕೂದಲಿನ ಮೇಲೆ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ಯೋಚಿಸುವುದೇ ಇಲ್ಲ. 

Coconut Oil 4/8

ಆದರೆ, ಯಾವುದೇ ಕೆಮಿಕಲ್ ಮಿಶ್ರಿಟ್ ಹೇರ್ ಡೈ ಬಳಸದೆ ಕೇವಲ ಕೊಬ್ಬರಿ ಎಣ್ಣೆಯ ಸಹಾಯದಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. ಆದರೆ, ಇದಕ್ಕಾಗಿ ಕೊಬ್ಬರಿ ಎಣ್ಣೆಯಲ್ಲಿ ಒಂದು ವಿಶೇಷ ಪುಡಿಯನ್ನು ಮಿಶ್ರಣ ಮಾಡಬೇಕಾಗುತ್ತದೆ. 

Gray Hair Home Remedy 5/8

ಬಿಳಿ ಕೂದಲನ್ನು ಕಪ್ಪಾಗಿಸಲು ಮೊದಲಿಗೆ ಚೆನ್ನಾಗಿ ಕಾದ ಹೆಂಚಿನಲ್ಲಿ 1 ಸ್ಪೂನ್ ಮೆಂತ್ಯ ಬೀಜಗಳು, 1 ಸ್ಪೂನ್ ಕಪ್ಪು ಎಳ್ಳು, 4-5 ಬಾದಾಮಿ, 1 ಸ್ಪೂನ್ ಆಮ್ಲಾ ಪುಡಿಯನ್ನು ಹಾಕಿ ಅದು ಕಪ್ಪಾಗುವವರೆಗೂ ಹುರಿದು ಬಳಿಕ ಪುಡಿ ಮಾಡಿ. 

Coconut Oil mix For Gray Hair 6/8

ಮೆಂತ್ಯ ಕಾಳುಗಳು, ಕಪ್ಪೆಳ್ಳು, ಬಾದಾಮಿ  ಹಾಗೂ ಆಮ್ಲಾ ಮಿಶ್ರಣವನ್ನು ಪುಡಿಮಾಡಿ ಒಂದು ಗಾಜಿನ ಸೀಸೆಯಲ್ಲಿ ಕೊಬ್ಬರಿ ಎಣ್ಣೆಯೊಂದಿಗೆ ಈ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಇಡಿ. 

Coconut Oil For White Hair 7/8

ಪುಡಿಯೊಂದಿಗೆ ಬೆರೆಸಿಟ್ಟ ಕೊಬ್ಬರಿ ಎಣ್ಣೆಯನ್ನು ವಾರಕ್ಕೆ ಎರಡು ಬಾರಿ ರಾತ್ರಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಮರುದಿನ ಹೇರ್ ವಾಶ್ ಮಾಡಿ. 

Coconut Oil Remedy For Gray Hair8/8

ಈ ರೀತಿಯಾಗಿ ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತಾ ಬಂದರೆ ಕೆಲವೇ ವಾರಗಳಲ್ಲಿ ಬಿಳಿ ಕೂದಲು ಬುಡದಿಂದ ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.