Saturn transit effect 2025 : ಬೆಳ್ಳಿ ಪಾದದ ಮೂಲಕ ಶನೀಶ್ವರನ ಸಂಚಾರ ಮೂರು ರಾಶಿಯವರ ಬದುಕನ್ನು ಬಂಗಾರವಾಗಿಸುತ್ತದೆ. ನಿಮ್ಮ ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಕಷ್ಟಗಳು ಕಳೆದು ನೆಮ್ಮದಿ, ಸಂತೋಷ ಹೆಚ್ಚುತ್ತದೆ.
ಬೆಂಗಳೂರು : ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಶನಿದೇವ ಮಾರ್ಚ್ 28 ಕ್ಕೆ ಮೀನ ರಾಶಿಗೆ ಪ್ರವೇಶಿಸುತ್ತಿದ್ದ ಹಾಗೆಯೇ ಬೆಳ್ಳಿ ನದಿಗೆ ಆರಂಭಿಸುತ್ತಾನೆ. ಅದರ ಸಕಾರಾತ್ಮಕ ಪರಿಣಾಮ ಕೆಲವು ರಾಶಿಯವರಿಗೆ ರಾತ್ರೋರಾತ್ರಿ ರಾಜಯೋಗ ತಂದು ಕೊಡಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಶನಿಗ್ರಹ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸಲು ತೆಗೆದುಕೊಳ್ಳುವುದು ಎರಡೂವರೆ ವರ್ಷ.
ಹಾಗಾಗಿ ಒಮ್ಮೆ ಒಂದು ರಾಶಿಗೆ ಪ್ರವೇಶಿಸಿದರೆ ಅದರ ಪ್ರಭಾವ ಎರಡೂವರೆ ವರ್ಷಗಳವರೆಗೆ ಇರುತ್ತದೆ. ಇದೀಗ 28 ನೇ ತಾರೀಕು ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಅದು ಕೂಡಾ ಬೆಳ್ಳಿ ಪಾದದ ಮೂಲಕ.
ಬೆಳ್ಳಿ ಪಾದದ ಮೂಲಕ ಶನೀಶ್ವರನ ಸಂಚಾರ ಮೂರು ರಾಶಿಯವರ ಬದುಕನ್ನು ಬಂಗಾರವಾಗಿಸುತ್ತದೆ. ನಿಮ್ಮ ಜೀವನದಲ್ಲಿ ಇಲ್ಲಿಯವರೆಗೆ ಇದ್ದ ಕಷ್ಟಗಳು ಕಳೆದು ನೆಮ್ಮದಿ, ಸಂತೋಷ ಹೆಚ್ಚುತ್ತದೆ.
ವೃಷಭ ರಾಶಿ : ವೃಷಭ ರಾಶಿಯವರ ಬಂಗಾರದ ದಿನಗಳು ಆರಂಭವಾಗಲಿವೆ. ಕಂಡ ಸೋಲುಗಳೆಲ್ಲಾ ಗೆಲುವಾಗಿ ಪರಿವರ್ತನೆಯಾಗುವ ಕಾಲ ಇದು. ವೃತ್ತಿಜೀವನದಲ್ಲಿ ಹೊಸ ಎತ್ತರವನ್ನು ತಲುಪುವಿರಿ. ಉದ್ಯೋಗದಲ್ಲಿ ಬಡ್ತಿ ಸಿಗುವುದು.
ಕನ್ಯಾರಾಶಿ : ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಮಾಡುವ ಪ್ರತಿ ಕೆಲಸವೂ ಫಲ ನೀಡುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ನಿಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಕೂಡಾ ಸುಧಾರಿಸುತ್ತದೆ. ಶುಭ ಕಾರ್ಯಗಳನ್ನು ಮಾಡಬಹುದು.
ಮಕರ ರಾಶಿ : ಶನಿ ದೆಸೆಯ ಕಾರಣದಿಂದಲೇ ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳು ಕಳೆಯುವುದು. ಇನ್ನು ಮುಂದೆ ಎಲ್ಲವೂ ಸುಗಮವೇ. ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗಬಹುದು. ವಿದೇಶಿ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿರುವ ಜನರು ಹೆಚ್ಚಿನ ಲಾಭವನ್ನು ಕಾಣುತ್ತಾರೆ. ಅವಿವಾಹಿತ ಯುವಕರ ವಿವಾಹ ನಿರ್ಧಾರವಾಗಬಹುದು.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಇದನ್ನು ಜೀ ನ್ಯೂಸ್ ಕನ್ನಡ ಅನುಮೋದಿಸುವುದಿಲ್ಲ.