Lakshmi Narayan Rajyog: ಲಕ್ಷ್ಮಿ ನಾರಾಯಣ ರಾಜಯೋಗ ನಿರ್ಮಾಣಕ್ಕೆ ಕೌಂಟ್ ಡೌನ್ ಆರಂಭ, ತಾಯಿ ಲಕ್ಷ್ಮಿಯ ಕೃಪೆಯಿಂದ 3 ರಾಶಿಗಳ ಮೇಲೆ ಅಪಾರ ಧನವೃಷ್ಟಿ!

Wed, 29 Mar 2023-5:19 pm,

ಮಿಥುನ ರಾಶಿ: ನಿಮ್ಮ ಪಾಲಿಗೆ ಮತ್ತು ನಿಮ್ಮ ಆರ್ಥಿಕ ದೃಷ್ಟಿಕೋನದ ಪಾಲಿಗೆ ಲಕ್ಷ್ಮಿ ನಾರಾಯಣ ರಾಜಯೋಗ ಅತ್ಯಂತ ಶುಭ ಸಾಬೀತಾಗಲಿದೆ. ಈ ಯೋಗ ನಿಮ್ಮ ಜಾತಕದ ಆದಾಯ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ವಿವಾಹಿತರ ದಾಂಪತ್ಯ ಜೀವನ ಉತ್ತಮವಾಗಿರಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ.  ವ್ಯಾಪಾರಸ್ಥರಿಗೆ ಮಾರುಕಟ್ಟೆಯ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಸಕಲ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ಷೇರು ಮಾರುಕಟ್ಟೆ ಅಥವಾ ಲಾಟರಿಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ದರೆ. ಈ ಸಮಯ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರವಾಗಿದೆ.   

ಕರ್ಕ ರಾಶಿ: ಲಕ್ಷ್ಮಿ ನಾರಾಯಣ ಯೋಗ ಕರ್ಕ ರಾಶಿಯ ಜಾತಕದವಾರ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಿಮಗೆ ಹೊಸ ಅವಕಾಶಗಳು ಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಹೊಸ ಕಾರ್ಯ ಆರಂಭಿಸಲು ಸಮಯ ಅತ್ಯುತ್ತಮವಾಗಿದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಅಥವಾ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ಸಮಯ ಸಾಧನೆಗಳಿಂದ ತುಂಬಿರಲಿದೆ. ವ್ಯಾಪಾರಿಗಳಿಗೆ ಉತ್ತಮ ಧನಲಾಭವಾಗಲಿದೆ. ಇದಲ್ಲದೆ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಸಮಯ ಉತ್ತಮವಾಗಿದೆ.  

ಸಿಂಹ ರಾಶಿ: ಲಕ್ಷ್ಮಿ ನಾರಾಯಣ ಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ನವಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ಅದೃಷ್ಟ ಹಾಗೂ ವಿಶೇಷ ಸ್ಥಾನ ಎಂದು ಭಾವಿಸಲಾಗುತ್ತದೆ. ಇದರಿಂದ ನಿಮಗೆ ಎಲ್ಲಾ ವಿಷಯಗಳಲ್ಲಿ ಅದೃಷ್ಟದ ಬೆಂಬಲ ಸಿಗಲಿದೆ. ಇದಲ್ಲದೆ ಕೆಲಸದ ನಿಮಿತ್ತ ನಿಮ್ಮ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ವರ್ತಮಾನದಲ್ಲಿ ನೀವು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ನಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ ಹಾಗೂ ಭವಿಷ್ಯದಲ್ಲಿ ಕೂಡ ನೀವು ಧನಾರ್ಜನೆಯನ್ನು ಮಾಡುವಲ್ಲಿ ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ಆಧ್ಯಾತ್ಮದತ್ತ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ವಿದ್ಯಾರ್ಥಿಗಳ ಪಾಲಿಗೆ ಈ ಅವಧಿ ಅತ್ಯುತ್ತಮ ಸಾಬೀತಾಗಲಿದೆ. ದಾರ್ಶನಿಕರು, ಲೇಖಕರು, ಸಲಹಾಕಾರರು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link