ಹಸಿವಿನಿಂದ ಬಳಲಿದ್ದ ಮಂಗಗಳಿಗೆ ತಾಯಿಯಾದ 'ಹಸು'

ಈ ಹಸುವಿನ ಮಾತೃ ಹೃದಯ ಇದೀಗ ಇಡೀ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ.  

Jun 10, 2019, 06:27 PM IST

ರಾಜಸ್ಥಾನದ ಸಿರೋಹಿ ಜಿಲ್ಲೆಯ ಪಿಂಡ್ವಾಲಾ ಪ್ರದೇಶದಲ್ಲಿ ವಿಪಿನ್ ಸಮೀಪದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ಒಂದು ಹಸು ಇದೆ. ಈ ಹಸು ಈ ದಿನಗಳಲ್ಲಿ ಇಡೀ ಜಿಲ್ಲೆಯಲ್ಲಿ ಚರ್ಚೆಯ ವಿಷಯವಾಗಿದೆ. ಈ ಹಸು ಹಸಿವಿನ ಬೇಗೆಯಲ್ಲಿ ಬಳಲಿದ್ದ ಮಂಗಗಳ ತಾಯಿಯಾಗಿ ಮಾರ್ಪಟ್ಟಿದೆ. ದೇವಸ್ಥಾನದಲ್ಲಿ ವಾಸಿಸುವ ಈ ಹಸುವಿನ ವೈಶಿಷ್ಟ್ಯವೆಂದರೆ ಇದು ಸಮೀಪದಲ್ಲಿರುವ ಕೋತಿಗಳಿಗೆ ಹಾಲು ನೀಡುತ್ತಿದೆ. 

ಸ್ಥಳೀಯರ ಪ್ರಕಾರ ನೀರು, ಆಹಾರವಿಲ್ಲದೆ ಬಳಲಿದ್ದ ಈ ಮಂಗಗಳಿಗೆ ಹಸು ಹಾಲು ನೀಡುತ್ತಿದೆ. ಇದೀಗ ಪ್ರತಿ ನಿತ್ಯ ಹಸು ಈ ಮಂಗಗಳಿಗೆ ಹಾಲು ನೀಡುತ್ತಿದೆ  ಎಂದು ತಿಳಿಸಿದ್ದಾರೆ.

1/3

ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲು

ರಾಜಸ್ಥಾನದ ಸಿರೊಹಿಯಲ್ಲಿ ಭಾರೀ ಬಿಸಿಲಿನಿಂದಾಗಿ ಜನಸಾಮಾನ್ಯರ ಜೊತೆಗೆ ಪ್ರಾಣಿಗಳು ತತ್ತರಿಸಿವೆ.

2/3

ಮಂಗಗಳ ತಾಯಿಯಾಗಿ ಮಾರ್ಪಟ್ಟ ಹಸು

ಹಸಿವಿನಿಂದ ಬಳಲಿದ್ದ ಮಂಗಗಳಿಗೆ ಹಾಲು ನೀಡಿದ ಹಸು ಮಂಗಗಳ ತಾಯಿಯಾಗಿ ಮಾರ್ಪಟ್ಟಿದೆ. ಇದನ್ನು ನೋಡಲು ಅಕ್ಕ-ಪಕ್ಕದ ಗ್ರಾಮದಿಂದ ಜನರು ಆಗಮಿಸುತ್ತಿದ್ದಾರೆ.

3/3

ಬಹಳ ವರ್ಷಗಳಿಂದ ದೇವಾಲಯದಲ್ಲಿ ವಾಸವಿರುವ ಹಸು

ಮಂಗಗಳಿಗೆ ಪ್ರತಿನಿತ್ಯ ಹಾಲು ನೀಡುತ್ತಿರುವ ಈ ಹಸು ಬಹಳ ವರ್ಷಗಳಿಂದ ರೋಹಿಡಾದ ಜಬೇಶ್ವರ ಮಹಾದೇವ್ ದೇವಾಲಯದಲ್ಲಿ ವಾಸಿಸುತ್ತಿದೆ.