ಟೀಮ್ ಇಂಡಿಯಾದ ಅನುಭವಿ ವೇಗಿ ಇಂಶಾಂತ್ ಶರ್ಮಾ ಅವರು ಇತ್ತೀಚೆಗೆ ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ದರ್ಶನ ಪಡೆದುಕೊಂಡಿದ್ದಾರೆ. ಈ ಸಂಬಂಧದ ವಿಡಿಯೋ ಇದೀಗ ರಿಲೀಸ್ ಆಗಿದೆ.
1/5ಭಾರತ ತಂಡದ ಹಾಗು ಗುಜರಾತ್ ಟೈಟನ್ಸ್ ತಂಡದ ಬೌಲರ್ ಇಶಾಂತ್ ಶರ್ಮಾ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಇರುವ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಇಂಶಾಂತ್‌ಗೆ ದೇವರು ಎಂದ್ರೆ ಅಪಾರ ನಂಬಿಕೆ.
2/5ಟೀಮ್ ಇಂಡಿಯಾದಿಂದ ಕೆಲವು ವರ್ಷಗಳಿಂದ ದೂರ ಇರುವ ಇಶಾಂತ್ ಶರ್ಮಾ ಅವರು ಬಿಡುವಿನ ಸಮಯದಲ್ಲಿ ಆಗಾಗಗ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅದರಂತೆ ಆಂಜನೇಯನ ದರ್ಶನ ಪಡೆದುಕೊಂಡಿದ್ದಾರೆ.
3/5ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಲರಾಮನ ಮಂದಿರ ನಿರ್ಮಾಣದ ನಂತರ ದಕ್ಷಿಣದ ಅಂಜನಾದ್ರಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಇಶಾಂತ್ ಅಂತವರು ಬೆಟ್ಟಕ್ಕೆ ವಿಸಿಟ್ ಕೊಡುವುದರಿಂದ ಪ್ರವಾಸೋದ್ಯಮಕ್ಕೆ ಪುಷ್ಟಿ ಕೊಡುತ್ತದೆ.
4/5ಇನ್ನೊಂದು ವಿಶೇಷ ಎಂದರೆ ಯಾವುದೇ ಅಡಂಭರ ಇಲ್ಲದೆ ದೇಗುಲಕ್ಕೆ ಆಗಮಿಸಿದ್ದ ಇಶಾಂತ್ ಶರ್ಮಾ ಅವರು, ಸಾಮಾನ್ಯ ಭಕ್ತರಂತೆ 575 ಮೆಟ್ಟಿಲುಗಳನ್ನು ಏರಿ ಹನುಮಂತನ ದರ್ಶನ ಪಡೆದುಕೊಂಡಿದ್ದಾರೆ.
5/5ಈ ವೇಳೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಇಶಾಂತ್ ಶರ್ಮಾರಿಗೆ ಅರ್ಚಕರು ಕೇಸರಿ ಶಾಲು ಹೊದಿಸಿ, ಹೂವಿನ ಹಾರ ಹಾಕಿದರು. ಬಳಿಕ ಕಾಣಿಕೆಯೊಂದನ್ನು ನೀಡಿದರು.