ರೋಹಿತ್ ಶರ್ಮಾ ಜೊತೆ ಶೇರ್‌ ಮಾಡಿಕೊಂಡಿದ್ದ ರೂಂ​ಗೆ ಗರ್ಲ್​​ಫ್ರೆಂಡ್​​ ಕಳ್ಳಸಾಗಾಣೆ! ಶಾಕಿಂಗ್‌ ವಿಚಾರ ಬಹಿರಂಗಪಡಿಸಿದ ಕ್ರಿಕೆಟಿಗ ಶಿಖರ್‌ ಧವನ್​

Published: Jun 28, 2025, 08:45 AM IST|Updated: Jun 28, 2025, 08:45 AM IST

shikhar dhawan: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ನಿರಾತಂಕದ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಮೈದಾನದ ಒಳಗೆ ಇರಲಿ ಅಥವಾ ಹೊರಗೆ ಇರಲಿ, ಅವರು ಸಂತೋಷದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಇತ್ತೀಚೆಗೆ, 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

shikhar dhawan girlfriend in rohit sharma room1/6

ಶಿಖರ್‌ ಧವನ್

ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ನಿರಾತಂಕದ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಮೈದಾನದ ಒಳಗೆ ಇರಲಿ ಅಥವಾ ಹೊರಗೆ ಇರಲಿ, ಅವರು ಸಂತೋಷದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಇತ್ತೀಚೆಗೆ, ತಮ್ಮ ಆತ್ಮಚರಿತ್ರೆಯಲ್ಲಿ, ಅವರು ತಮ್ಮ ಪ್ರೇಯಸಿಗೆ ಸಂಬಂಧಿಸಿದ ವರ್ಷಗಳ ಹಳೆಯ ಕಥೆಯನ್ನು ಹಂಚಿಕೊಂಡಿದ್ದಾರೆ. 

 

shikhar dhawan girlfriend in rohit sharma room2/6

ಶಿಖರ್‌ ಧವನ್

ಆಸ್ಟ್ರೇಲಿಯಾ ಪ್ರವಾಸದಲ್ಲಿ, ಅವರು ತಮ್ಮ ಗೆಳತಿಯನ್ನು ರೋಹಿತ್ ಶರ್ಮಾ ಅವರೊಂದಿಗೆ ಹಂಚಿಕೊಂಡ ಕೋಣೆಗೆ ಹೇಗೆ ರಹಸ್ಯವಾಗಿ ಕರೆದೊಯ್ದರು? ಆ ಬಳಿಕ ರೋಹಿತ್‌ ಮಾಡಿದ್ದೇನು? ಎಂಬೆಲ್ಲಾ ವಿಚಾರದ ಬಗ್ಗೆ ಮಾತನಾಡಿದ್ದರು. ಅದು 2006ರಲ್ಲಿ ಭಾರತ ಎ ತಂಡದ ಆಸ್ಟ್ರೇಲಿಯಾ ಪ್ರವಾಸವಾಗಿತ್ತು. ತಮ್ಮ ಆತ್ಮಚರಿತ್ರೆಯಲ್ಲಿ ಧವನ್ ತನ್ನ ಗೆಳತಿಯನ್ನು ತಂಡದ ಸಹ ಆಟಗಾರ ರೋಹಿತ್ ಶರ್ಮಾ ಅವರೊಂದಿಗೆ ತಂಗಿದ್ದ ಹೋಟೆಲ್ ಕೋಣೆಗೆ ಹೇಗೆ ರಹಸ್ಯವಾಗಿ ಕರೆತಂದರು? ಅದಾದ ನಂತರ ಅವರ ಸಂಬಂಧದ ಸುದ್ದಿ ತಂಡದಾದ್ಯಂತ ಹೇಗೆ ಹರಡಿತು? ಎಂಬುದನ್ನು ವಿವರಿಸಿದ್ದಾರೆ.

 

shikhar dhawan girlfriend in rohit sharma room3/6

ಶಿಖರ್‌ ಧವನ್

"ಅವಳು ತುಂಬಾ ಮುದ್ದಾಗಿದ್ದಳು. ಇದ್ದಕ್ಕಿದ್ದಂತೆ ನಾನು ಮತ್ತೆ ಪ್ರೀತಿಯಲ್ಲಿ ಬಿದ್ದೆ! ಆಕೆಯೇ ನನಗೆ ಸರಿ ಎಂದೆನಿಸಿದಳು. ಅಷ್ಟೇ ಅಲ್ಲ ನಾನು ಅವಳನ್ನು ಮದುವೆಯಾಗಲಿದ್ದೇನೆ ಎಂದು ನಾನು ನನ್ನೊಳಗೆ ಭಾವಿಸಿದೆ" ಎಂದು ಬರೆದುಕೊಂಡಿದ್ದಾರೆ.

 

shikhar dhawan girlfriend in rohit sharma room4/6

ಶಿಖರ್‌ ಧವನ್

ಧವನ್‌ಗೆ ಆ ಪ್ರವಾಸವು ಚೆನ್ನಾಗಿ ಪ್ರಾರಂಭವಾಯಿತು. ಮೈದಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು. ಆದರೆ ಎಲೆನ್ (ಆಕೆಯ ಹೆಸರು ಬದಲಾಯಿಸಲಾಗಿದೆ) ಎಂದು ಕರೆಯುವ ತನ್ನ ಗೆಳತಿಯೊಂದಿಗೆ ಹೆಚ್ಚು ಸಮಯ ಕಳೆದಂತೆ ತನ್ನ ಗಮನವು ವಿಚಲಿತವಾಯಿತು ಎಂದು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.

 

shikhar dhawan girlfriend in rohit sharma room5/6

ಶಿಖರ್‌ ಧವನ್

"ನಾನು ಅಭ್ಯಾಸ ಪಂದ್ಯದಲ್ಲಿ ಅರ್ಧಶತಕದೊಂದಿಗೆ ಪ್ರಾರಂಭಿಸಿದೆ. ನನ್ನ ಪ್ರವಾಸವು ಉತ್ತಮವಾಗಿ ಸಾಗುತ್ತಿತ್ತು. ಪ್ರತಿ ಪಂದ್ಯದ ನಂತರ, ನಾನು ಎಲೆನ್ ಅವರನ್ನು ಭೇಟಿಯಾಗಲು ಹೋಗುತ್ತಿದ್ದೆ. ಶೀಘ್ರದಲ್ಲೇ ನಾನು ಅವಳನ್ನು ನನ್ನ ಹೋಟೆಲ್ ಕೋಣೆಗೆ ಕದ್ದು ಕರೆದೊಯ್ಯಲು ಪ್ರಾರಂಭಿಸಿದೆ. ಆ ರೂಂ ರೋಹಿತ್ ಶರ್ಮಾ ಜೊತೆ ಹಂಚಿಕೊಂಡಿದ್ದೆ. ಕೆಲವೊಮ್ಮೆ, ಅವರು ಹಿಂದಿಯಲ್ಲಿ 'ನನಗೆ ನಿದ್ದೆ ಮಾಡಲು ಬಿಡುತ್ತೀರಾ?' ಎಂದು ಗೊಣಗುತ್ತಿದ್ದರು" ಎಂದು ಗಬ್ಬರ್ ಬರೆದಿದ್ದಾರೆ.

 

shikhar dhawan girlfriend in rohit sharma room6/6

ಶಿಖರ್‌ ಧವನ್

, "ಒಂದು ಸಂಜೆ, ನಾನು ಎಲೆನ್ ಜೊತೆ ಊಟಕ್ಕೆ ಹೋದಾಗ, ಅವರ ಉಪಸ್ಥಿತಿಯ ಸುದ್ದಿ ತಂಡದಾದ್ಯಂತ ಕಾಡ್ಗಿಚ್ಚಿನಂತೆ ಹರಡಿತು. ನಮ್ಮೊಂದಿಗೆ ಪ್ರವಾಸದಲ್ಲಿದ್ದ ಹಿರಿಯ ರಾಷ್ಟ್ರೀಯ ಆಯ್ಕೆದಾರರು ನಾವು ಕೈಹಿಡಿದುಕೊಂಡು ಲಾಬಿಯಲ್ಲಿ ನಡೆಯುವುದನ್ನು ನೋಡಿದರು. ನನಗೆ ಅವರ ಕೈ ಬಿಡಬೇಕೆಂದು ಅನಿಸಲಿಲ್ಲ, ಏಕೆಂದರೆ ನನ್ನ ಪ್ರಕಾರ ನಾವು ಯಾವುದೇ ಅಪರಾಧ ಮಾಡುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾನು ಸ್ಥಿರವಾಗಿ ಉತ್ತಮವಾಗಿ ಪ್ರದರ್ಶನ ನೀಡಿದ್ದರೆ, ನಾನು ಹಿರಿಯ ಭಾರತೀಯ ತಂಡಕ್ಕೆ ಸೇರುತ್ತಿದ್ದೆ, ಆದರೆ ನನ್ನ ಪ್ರದರ್ಶನ ಕುಸಿಯುತ್ತಲೇ ಇತ್ತು" ಎಂದು ಬರೆದಿದ್ದಾರೆ.