ಯಾವುದೇ ಹೇರ್‌ ಕಲರ್‌ ಬೇಡ.. ಮೊಸರಿಗೆ ಇದೊಂದು ಪದಾರ್ಥ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ! ಮತ್ತೆಂದೂ ಬೆಳ್ಳಗಾಗಲ್ಲ..

Written BySavita M B
Published: Mar 30, 2025, 02:54 PM IST|Updated: Mar 30, 2025, 02:54 PM IST

Curd for White Hair: ಮೊಸರು ಆರೋಗ್ಯಕ್ಕೆ ಒಳ್ಳೆಯದು. ಆಯುರ್ವೇದದಲ್ಲಿ ಮೊಸರಿಗೆ ವಿಶೇಷ ಸ್ಥಾನವಿದೆ. ಯಾವುದೇ ರೋಗವನ್ನು ಕಡಿಮೆ ಮಾಡುವ ಸಾಮರ್ಥ್ಯ ಇದಕ್ಕಿದೆ. ಆದರೆ ಕೂದಲನ್ನು ಸಹ ಆರೋಗ್ಯಕರವಾಗಿಡುವಲ್ಲಿ ಮೊಸರು ಪ್ರಮುಖ ಪಾತ್ರವಹಿಸುತ್ತದೆ..
 

1/7

ಬೇಸಿಗೆಯಲ್ಲಿ, ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಹುಳಿ ಮೊಸರು ತಿನ್ನುವುದರಿಂದ ದೇಹವು ತಂಪಾಗಿರುತ್ತದೆ. ದೀರ್ಘಕಾಲದವರೆಗೆ ಪೆಪ್ಟಿಕ್ ಅಲ್ಸರ್ ಕಾಯಿಲೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಸರು ತಿನ್ನುವುದರಿಂದ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು.  

2/7

ಇನ್ನು ಮೊಸರು ದೇಹಕ್ಕೆ ಮಾತ್ರವಲ್ಲ.. ಚರ್ಮ ಮತ್ತು ಕೂದಲಿಗೆ ಸಹ ಒಳ್ಳೆಯದು. ತ್ವರಿತ ಫಲಿತಾಂಶಗಳನ್ನು ಪಡೆಯಲು, ಕೂದಲಿಗೆ ಮೊಸರನ್ನು ಸೂಕ್ತವಾಗಿ ಬಳಸಬೇಕು. ಇದೀಗ ಕೂದಲ ರಕ್ಷಣೆಯಲ್ಲಿ ಹುಳಿ ಮೊಸರನ್ನು ಹೇಗೆ ಬಳಸಬೇಕೆಂದು ತಿಳಿಯಿರಿ.    

3/7

ನೀವು ಹುಳಿ ಮೊಸರನ್ನು ಕೂದಲು ಕ್ಲೆನ್ಸರ್ ಆಗಿ ಬಳಸಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಹುಳಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಕರ್ಪೂರ ಬೆರೆಸಿ ಕೂದಲಿಗೆ ಹಚ್ಚಿ ಇದರಿಂದ ಬಿಳಿಕೂದಲು ಕಪ್ಪಾಗುತ್ತವೆ..   

4/7

ಇನ್ನೊಂದು ವಿಧಾನವೆಂದರೇ ಒಂದು ಬಟ್ಟಲಿನಲ್ಲಿ ಮೊಟ್ಟೆಯ ಹಳದಿ ಭಾಗ ಮತ್ತು ಹುಳಿ ಮೊಸರನ್ನು ತೆಗೆದುಕೊಂಡು ಈ ಮಿಶ್ರಣವನ್ನು ಚೆನ್ನಾಗಿ ಮಿಶ್ರಣ ಮಾಡಿ. ಕೂದಲಿಗೆ ಹಚ್ಚಿ. 30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಳಿಕ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.    

5/7

ಅಲೋವೆರಾವನ್ನು ಹುಳಿ ಮೊಸರಿನೊಂದಿಗೆ ಕೂಡ ಬೆರೆಸಬಹುದು. ಇದಕ್ಕಾಗಿ, ಒಂದು ಪಾತ್ರೆಯನ್ನು ತೆಗೆದುಕೊಂಡು, ಅಲೋವೆರಾ ತಿರುಳನ್ನು ಹಾಕಿ ಅದಕ್ಕೆ ಮೊಸರು ಸೇರಿಸಿ. ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಸಿಲ್ಕ್‌ ಆಗುತ್ತವೆ..     

6/7

ಮೊಸರು, ವಿಟಮಿನ್ ಇ ಕ್ಯಾಪ್ಸುಲ್‌ಗಳು ಮತ್ತು ಕ್ಯಾಸ್ಟರ್ ಆಯಿಲ್ ಮಿಶ್ರಣ ಮಾಡಿ ಹೇರ್ ಪ್ಯಾಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ನಂತರ ಶಾಂಪೂ ಬಳಸಿ ತೊಳೆಯಿರಿ. ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ.    

7/7

 ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.