ಕುಜ-ಕೇತುವಿನಿಂದ ಅಪಾಯಕಾರಿ ಯೋಗ: ಮುಂದಿನ 51 ದಿನಗಳವರೆಗೆ ಈ ಐದು ರಾಶಿಯವರಿಗೆ ಕಾದಿದೆ ಸಂಕಷ್ಟ!!

ಜೂನ್ 7ರ ಶನಿವಾರ ಮಂಗಳನು ಸಿಂಹ ರಾಶಿಯಲ್ಲಿ ಸಂಚಾರ ನಡೆಸಿದ್ದಾನೆ. ಮಂಗಳವನ್ನು ಅಗ್ನಿಯ ಅಂಶದ ಗ್ರಹವೆಂದು ಪರಿಗಣಿಸಲಾಗುತ್ತದೆ. ಈ ರಾಶಿಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗವಿರುತ್ತದೆ. ಈ ಎರಡೂ ಗ್ರಹಗಳು ಉಗ್ರ ಸ್ವಭಾವ ಹೊಂದಿದ್ದು, ಇವುಗಳ ಸಂಯೋಗವು ಕುಜಕೇತು ಯೋಗವನ್ನ ರೂಪಿಸುತ್ತದೆ. ಇದನ್ನು ಜ್ಯೋತಿಷ್ಯದಲ್ಲಿ ಅಶುಭ ಯೋಗವೆಂದು ಪರಿಗಣಿಸಲಾಗುತ್ತದೆ. 

ಯುದ್ಧ, ಶೌರ್ಯ ಮತ್ತು ಉಗ್ರ ಸ್ವಭಾವದ ಮಂಗಳ ಗ್ರಹವು ಜೂನ್ 7ರ ಮಧ್ಯಾಹ್ನ 2.10ಕ್ಕೆ ಸೂರ್ಯದೇವನ ರಾಶಿ ಸಿಂಹವನ್ನು ಪ್ರವೇಶಿಸಿದೆ. ಶಕ್ತಿಯ ಗ್ರಹವಾದ ಸೂರ್ಯನಲ್ಲಿ ಮಂಗಳನ ಉಗ್ರತೆಯು ಮತ್ತಷ್ಟು ಹೆಚ್ಚಾಗಲಿದೆ. ಏಕೆಂದರೆ ಕೇತು ಈಗಾಗಲೇ ಸಿಂಹದಲ್ಲಿ ಇರುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಸಿಂಹದಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗವು ಅಪಾಯಕಾರಿ ಕುಜಕೇತು ಯೋಗವನ್ನ ಸೃಷ್ಟಿಸುತ್ತದೆ. ಜುಲೈ 28ರವರೆಗೆ ಮಂಗಳ ಸಿಂಹ ರಾಶಿಯಲ್ಲಿರುವುದರಿಂದ ಈ 51 ದಿನಗಳಲ್ಲಿ ಐದು ರಾಶಿಯ ಜನರು ತುಂಬಾ ಜಾಗರೂಕರಾಗಿರಬೇಕು. ಈ ಸಮಯವು ಈ ರಾಶಿಯವರ ತಾಳ್ಮೆ ಮತ್ತು ವಿವೇಕವನ್ನ ಪರೀಕ್ಷಿಸುತ್ತದೆ. ಈ ಸಮಯದಲ್ಲಿ ದೊಡ್ಡ ನಷ್ಟ ಅನುಭವಿಸಬಹುದು. ಯಾವ 5 ರಾಶಿಯವರಿಗೆ ಮಂಗಳ ಸಂಚಾರ ಸಂಕಷ್ಟವನ್ನು ತರಲಿದೆ ಎಂಬುದರ ಬಗ್ಗೆ ತಿಳಿಯಿರಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

1 /6

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

2 /6

ಕನ್ಯಾ ರಾಶಿಯವರು ಮಂಗಳ ಸಂಚಾರದಿಂದ ಅನಗತ್ಯ ಪ್ರಯಾಣಗಳನ್ನು ಕೈಗೊಳ್ಳಬೇಕಾಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳಿಗೆ ನೀವು ಕಷ್ಟಪಡಬೇಕಾಗಬಹುದು. ಹೀಗಾಗಿ ನೀವು ಹೆಚ್ಚಿನ ಜಾಗರೂಕತೆ ಹೊಂದಬೇಕು. ಉದ್ಯೋಗದಲ್ಲಿರುವವರು ಅಪೇಕ್ಷಿತ ಫಲಿತಾಂಶಕ್ಕಾಗಿ ಹೆಚ್ಚುವರಿ ಪ್ರಯತ್ನ ಮಾಡಬೇಕಾಗುತ್ತದೆ. ಕುಟುಂಬದಲ್ಲಿನ ನಿಮ್ಮ ಸಂಬಂಧಗಳು ಅನುಕೂಲಕರವಾಗಿರುವುದಿಲ್ಲ. ನಿಮ್ಮ ಆಲೋಚನೆಗಳು ವಿರೋಧಾತ್ಮಕವಾಗಿರಬಹುದು. ಬುದ್ಧಿವಂತಿಕೆಯಿಂದ ವರ್ತಿಸುವುದು ಉತ್ತಮ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಂಗಳ ಸಂಚಾರದ ಸಮಯದಲ್ಲಿ ಕನ್ಯಾ ರಾಶಿಯವರು ಹನುಮಾನ್ ದೇವಸ್ಥಾನದಲ್ಲಿ ಸಿಹಿ ಲಡ್ಡುಗಳನ್ನ ಅರ್ಪಿಸಿ. ಹೀಗೆ ಮಾಡಿದ್ರೆ ನಿಮ್ಮ ಸಂಕಷ್ಟಗಳು ಎಲ್ಲಾ ದೂರವಾಗುತ್ತವೆ. 

3 /6

​ಮಂಗಳ ಸಂಚಾರವು ವೃಷಭ ರಾಶಿಯವರಿಗೆ ಅಶುಭ ಫಲಿತಾಂಶಗಳನ್ನ ನೀಡಬಹುದು. ಈ ಅವಧಿಯಲ್ಲಿ ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ವ್ಯವಹಾರ ಮತ್ತು ಕುಟುಂಬದಲ್ಲಿ ಅಪೇಕ್ಷಿತ ಫಲಿತಾಂಶ ಸಾಧಿಸಲು ನೀವು ಸವಾಲುಗಳನ್ನ ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ನಿಮಗೆ ಹೆಚ್ಚಿನ  ಒತ್ತಡವಿರಬಹುದು. ನಿಮ್ಮ ಸಹೋದ್ಯೋಗಿಗಳಿಂದ ನಿರೀಕ್ಷಿತ ಬೆಂಬಲ ಸಿಗುವುದಿಲ್ಲ. ಸಂಬಂಧಗಳಲ್ಲಿ ಕಹಿ ಇರುತ್ತದೆ. ಕೌಟುಂಬಿಕ ಸಂತೋಷ ಕಡಿಮೆಯಾಗಬಹುದು. ಈ ಸಮಯದಲ್ಲಿ ಭೂಮಿ, ಆಸ್ತಿ ಮತ್ತು ವಾಹನಕ್ಕೆ ಸಂಬಂಧಿಸಿದ ವಿವಾದಗಳಿಂದ ದೂರವಿದ್ದರೆ ಉತ್ತಮ. ವೃಷಭ ರಾಶಿಯವರು ಪರಿಹಾರವಾಗಿ ಮಂಗಳ ಸಂಚಾರದ 51 ದಿನಗಳಲ್ಲಿ ಆಲದ ಮರಕ್ಕೆ ನಿಯಮಿತವಾಗಿ ಸಿಹಿ ಹಾಲನ್ನು ಅರ್ಪಿಸಬೇಕು. ಇದು ನಿಮಗೆ ಶುಭ ಪ್ರಯೋಜನವನ್ನ ನೀಡುತ್ತದೆ.

4 /6

ಮಂಗಳ ಸಂಚಾರವು ಮೀನ ರಾಶಿಯವರಿಗೆ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ಸಿಂಹ ರಾಶಿಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗವು ನಿಮ್ಮ ಸ್ವಭಾವವನ್ನ ಹೆಚ್ಚು ಆಕ್ರಮಣಕಾರಿಯನ್ನಾಗಿ ಮಾಡುತ್ತದೆ. ಹೀಗಾಗಿ ನೀವು ಕಠಿಣವಾಗಿ ಮಾತಾನಾಡುವುದನ್ನು ತಪ್ಪಿಸಬೇಕು. ಅನಗತ್ಯ ಖರ್ಚುಗಳು ನಿಮ್ಮ ಬಜೆಟ್ ಅನ್ನು ಹಾಳುಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ. ಅಪೇಕ್ಷಿತ ಫಲಿತಾಂಶ ಪಡೆಯಲು ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಯಶಸ್ಸು ಮತ್ತು ವೈಫಲ್ಯವು ನಿಮ್ಮ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ, ಆದರೆ ಅಸಡ್ಡೆ ಮಾಡಬಾಡರದು. ಋತುಮಾನದ ಬದಲಾವಣೆಗಳ ಬಗ್ಗೆ ಎಚ್ಚರವಿರಬೇಕು. ಮೀನ ರಾಶಿಯವರು ಅಗತ್ಯವಿರುವವರಿಗೆ ಆಹಾರ ನೀಡಬೇಕು. ಈ ಪರಿಹಾರವು ನಿಮ್ಮ ಕೆಲಸದಲ್ಲಿನ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

5 /6

​ಮಂಗಳ ಸಂಚಾರವು ಸಿಂಹ ರಾಶಿಯಲ್ಲಿಯೇ ಸಂಭವಿಸಲಿದೆ. ಈ ರಾಶಿಯಲ್ಲಿ ಈಗಾಗಲೇ ಕುಳಿತಿರುವ ಕೇತುವಿನೊಂದಿಗೆ ಮಂಗಳನ ಸಂಯೋಗ ಇರುತ್ತದೆ. ಕೇತುವಿನ ಪ್ರಭಾವದಿಂದ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಂಗಳ ಮತ್ತು ಕೇತುವಿನ ಸಂಯೋಗವು ನಿಮ್ಮನ್ನು ಆಕ್ರಮಣಕಾರಿಯನ್ನಾಗಿ ಮಾಡುತ್ತದೆ. ಆದರೆ ನಿಮ್ಮ ಕೋಪವು ದೊಡ್ಡಮಟ್ಟದ ಹಾನಿಯನ್ನುಂಟುಮಾಡುತ್ತದೆ. ಅಪಾಯ ತೆಗೆದುಕೊಳ್ಳುವುದು ನಿಮಗೆ ಹಾನಿಕಾರಕ. ಈ ಅವಧಿಯಲ್ಲಿ ಗರ್ಭಿಣಿಯರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಕ್ತ ಸಂಬಂಧಿತ ಸಮಸ್ಯೆ ಇರಬಹುದು. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಆರೋಗ್ಯ ನಿರ್ಲಕ್ಷಿಸುವುದನ್ನು ತಪ್ಪಿಸಿ. ಸಣ್ಣ ಸಮಸ್ಯೆ ಕೂಡ ದೊಡ್ಡದಾಗಬಹುದು. ಸಿಂಹ ರಾಶಿಯವರಿಗೆ ಮಂಗಳ ಸಂಚಾರದ ಸಮಯದಲ್ಲಿ ಯಾರಿಂದಲೂ ಉಚಿತವಾಗಿ ಯಾವುದೇ ರೀತಿಯ ವಸ್ತುಗಳನ್ನ ತೆಗೆದುಕೊಳ್ಳಬೇಡಿ. ಉಡುಗೊರೆಗಳನ್ನೂ ಸಹ ಈ ಸಮಯದಲ್ಲಿ ತೆಗೆದುಕೊಳ್ಳಬಾರದು.

6 /6

ಸಿಂಹ ರಾಶಿಗೆ ಮಂಗಳನ ಸಂಚಾರವು ಮೇಷ ರಾಶಿಯವರ ಜೀವನದಲ್ಲಿ ಏರಿಳಿತ ಸೃಷ್ಟಿಸಬಹುದು. ಸಿಂಹ ರಾಶಿಯಲ್ಲಿ ಮಂಗಳ ಮತ್ತು ಕೇತುವಿನ ಸಂಯೋಗದಿಂದ ನೀವು ಕೆಲಸದ ಸ್ಥಳದಲ್ಲಿ ಅಡೆತಡೆಗಳನ್ನ ಎದುರಿಸಬಹುದು. ಕಠಿಣ ಸ್ಪರ್ಧೆಯ ಜೊತೆಗೆ ವಿರೋಧಿಗಳು ನಿಮ್ಮನ್ನ ಸಂಕಷ್ಟದ ಹಾದಿಗೆ ದೂಡಬಹುದು. ಈ ಸಮಯದಲ್ಲಿ ನೀವು ಸಾಕಷ್ಟು ವಿವೇಕದಿಂದ ವರ್ತಿಸಬೇಕಾಗುತ್ತದೆ. ನೀವು ಕೋಪ ಮಾಡಿಕೊಳ್ಳುವುದನ್ನ ತಪ್ಪಿಸಬೇಕು. ಈ ಸಮಯದಲ್ಲಿ ನಿಮ್ಜ ಮನಸ್ಸು ಪ್ರಕ್ಷುಬ್ಧವಾಗಿರಬಹುದು. ಯಾವುದೇ ರೀತಿಯ ವಿವಾದಗಳಿಂದ ಆದಷ್ಟು ದೂರವಿರಿ. ಮಂಗಳನ ಸಂಚಾರದ ಸಮಯದಲ್ಲಿ ಮೇಷ ರಾಶಿಯವರು ನಿಯಮಿತವಾಗಿ ಬೇವಿನ ಮರಕ್ಕೆ ನೀರು ಅರ್ಪಿಸಿದರೆ ಈ ಸಮಸ್ಯೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ.