Darshan-Pavithra Gowda: ದರ್ಶನ್, ಪವಿತ್ರಾ ಗೌಡ ಇಬ್ಬರು ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಫೋಟೋಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಚಿತ್ರದಲ್ಲಿ ಅವರ ಉಡುಗೆಗಳನ್ನು ನೋಡಿದರೆ ಇದನ್ನು ಊಹಿಸಲಾಗುತ್ತಿದೆ ಎಂದು ಚರ್ಚೆಯಾಗುತ್ತಿವೆ.
1/6Darshan-Pavithra Gowda: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಎಲ್ಲೆಡೆ ಇಬ್ಬರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಪವಿತ್ರಾ ಕತ್ತಿನಲ್ಲಿ ತಾಳಿ ಹಾಕಿಕೊಂಡು ಬಿಳಿ ಸೀರೆ ಧರಿಸಿರುವುದು, ದರ್ಶನ್ ಬಿಳಿ ಪಂಚೆ ಮತ್ತು ಶರ್ಟ್ ಧರಿಸಿರುವುದನ್ನು ಕಾಣಬಹುದಾಗಿದೆ.
2/6ಸೆಲ್ಫಿ ತೆಗೆದುಕೊಂಡಿರುವ ಈ ಫೋಟೋಗಳು ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ನೆಟ್ಟಿಗರು ಈ ವೈರಲ್ ಫೋಟೊಗಳ ಬಗ್ಗೆ ಸಾಕಷ್ಟು ಕಮೆಂಟ್ ಮಾಡುತ್ತಿದ್ದಾರೆ.
3/6ಈ ಫೋಟೋಗಳು ನಿಜವಾಗಿಯೂ ಮದುವೆಯದ್ದಾ ಅಥವಾ ಯಾವುದೇ ಪೂಜೆ ಅಥವಾ ಕಾರ್ಯಕ್ರಮದ ವೇಳೆ ತೆಗೆದದ್ದು ಎಂದು ಸ್ಪಷ್ಟವಾಗಿಲ್ಲ.
4/6ಯಾವತ್ತೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತಾಡದ ದರ್ಶನ್ ಮತ್ತು ಪವಿತ್ರಾ, ಈ ಫೋಟೋಗಳ ಬಗ್ಗೆ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದರಿಂದ ಜನರ ಕುತೂಹಲ ಮಾತ್ರ ಹೆಚ್ಚಾಗಿದೆ.
5/6ಯಾಕೆಂದರೆ, ಇದೇ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಆರೋಪಿಗಳಾಗಿ ಇದ್ದಾರೆ. ಇಂತಹ ಗಂಭೀರ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಇವರ ಫೋಟೋಗಳು ಹೊರಬಿದ್ದಿದ್ದು ಹೊಸ ಚರ್ಚೆಗೆ ಕಾರಣವಾಗಿದೆ.
6/6ದರ್ಶನ್ ಮತ್ತು ಪವಿತ್ರಾ ಅವರ ಈ ವೈರಲ್ ಫೋಟೋಗಳು ಈಗ ಸ್ಯಾಂಡಲ್‌ವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಜನರು ಸತ್ಯ-ಸುಳ್ಳು ತಿಳಿಯದಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಗಳು ದೊಡ್ಡ ಚರ್ಚೆಗೆ ಕಾರಣವಾಗಿವೆ.