ನನ್ನ ಹೆಂಡತಿಗೆ ಕೋಪ ಬಂದರೆ ಹೀಗೆ ಕರೀತಿನಿ: ವಿಜಯಲಕ್ಷ್ಮೀ ಅವರನ್ನ ಏನಂತ ಕರೀತಾರೆ ಗೊತ್ತಾ ನಟ ದರ್ಶನ್‌

Published: Mar 29, 2025, 07:55 AM IST|Updated: Mar 29, 2025, 07:55 AM IST

Darshan Thoogudeepa: ನಟ ದರ್ಶನ್‌ ಇತ್ತೀಚೆಗೆ ನಡೆದ  ವಾಮನ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಒಂದಿಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Darshan Thoogudeepa1/5

ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ನಟ ದರ್ಶನ್ ತೂಗುದೀಪ ಜೈಲಿನಿಂದ ಹೊರಬಂದಿದ್ದಾರೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತ ವಿಶ್ರಾಂತಿಯಲ್ಲಿದ್ದ ದರ್ಶನ್‌ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ಪತ್ನಿ ಬಗ್ಗೆಯೂ ಮಾತನಾಡಿದ್ದಾರೆ.

Darshan Thoogudeepa2/5

ದರ್ಶನ್

ಸದ್ಯ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ದರ್ಶನ್ ತೂಗುದೀಪ ಧನ್ವೀರ್ ಅಭಿನಯದ ವಾಮನ ಸಿನಿಮಾಗೆ ಸಪೋರ್ಟ್‌ ಕೊಟ್ಟಿದ್ದಾರೆ. ಜೈಲಿನಲ್ಲಿದ್ದಾಗ ಜಾಮೀನು ಪಡೆಯಲು ದರ್ಶನ್ ಕುಟುಂಬದ ಜೊತೆ ನಿಂತಿದ್ದ ಧನ್ವೀರ್, ದರ್ಶನ್‌ ನನ್ನ ಅಣ್ಣನಂತೆ ಎಂದು ಹೇಳಿದ್ದಾರೆ

Darshan Thoogudeepa3/5

ದರ್ಶನ್

ದರ್ಶನ್ ತೂಗುದೀಪ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ವಾಮನ ಸಿನಿಮಾಗೆ ಬಹುದೊಡ್ಡ ಬೆಂಬಲ ನೀಡಿದ್ದಾರೆ. ಇತ್ತೀಚೆಗೆ ನಡೆದ  ವಾಮನ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ದರ್ಶನ್‌ ಒಂದಿಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಾಮನ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್‌, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Darshan Thoogudeepa4/5

ದರ್ಶನ್

ಬೇರೆ ಬೇರೆ ಪಾತ್ರದಲ್ಲಿ ಧನ್ವೀರ್‌ ಅವರನ್ನು ನೋಡಿದ್ದೇನೆ. ಕೈವ ನನಗೆ ತುಂಬಾ ಇಷ್ಟವಾದ ಸಿನಿಮಾ. ಈಗ ವಾಮನ ಸಿನಿಮಾದಲ್ಲಿ ಧನ್ವೀರ್‌ ಮಿಂಚಲಿದ್ದಾರೆ. ವಾಮನ ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ನಟ ದರ್ಶನ್‌ ಹೇಳಿದ್ದಾರೆ.

Darshan Thoogudeepa5/5

ದರ್ಶನ್

ವಾಮನ ಸಿನಿಮಾದಲ್ಲಿ ಮುದ್ದು ರಾಕ್ಷಸಿ ಹಾಡು ಕೇಳಿದಾಗ ನನಗೆ ತುಂಬಾ ಇಷ್ಟವಾಯಿತು. ನಇಂತಹ ಪದಗಳನ್ನು ಎಲ್ಲಿ ಹುಡುಕ್ತೀರೋ ಗೊತ್ತಿಲ್ಲ. ಹಾಡು ಮಾತ್ರ ತುಂಬಾ ಚನ್ನಾಗಿದೆ. ನಮ್ಮ ಮನೆಯಲ್ಲಿ ನನ್ನ ಹೆಂಡತಿ ಕೋಪ ಮಾಡಿಕೊಂಡಾಗ ನಾನು ಕೂಡ ರೇಗಿಸುತ್ತೇನೆ. ಮುದ್ದು ರಾಕ್ಷಸಿ ತರ ಇದ್ದೀಯ ಅಂತೆಲ್ಲ ನಾವೂ ಕರೆಯುತ್ತೇವೆ ಎಂದು ನಟ ದರ್ಶನ್‌ ಹೇಳಿದ್ದಾರೆ.