1/7ಐಪಿಎಲ್ 2026ರ ಋತುವಿನಲ್ಲಿ ಮತ್ತೊಂದು ರೋಮಾಂಚಕ ಹೋರಾಟ ಎಂದರೆ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಬಿಗ್ ಫೈಟ್. ಕೊನೆಯ ಎಸೆತದವರೆಗೂ ಗೆಲುವು ಎನ್ನುವುದು ಫುಲ್ ಸಸ್ಪೆನ್ಸ್ ಆಗಿತ್ತು. ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಮೂಡಿಸಿತ್ತು.
2/7ಗುಜರಾತ್ ನೀಡಿದ್ದ 211 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಮತ್ತು ಪಾಥುಮ್ ನಿಸ್ಸಾಂಕ ಅದ್ಭುತ ಆರಂಭವನ್ನು ನೀಡಿದರು. ರಾಹುಲ್ 92 ರನ್‌ಗಳ ವೀರೋಚಿತ ಇನ್ನಿಂಗ್ಸ್ ಆಡಿ ಗಮನ ಸೆಳೆದರು.
3/7ಫಾಥುಮ್ ನಿಸ್ಸಾಂಕ 41 ರನ್ ಗಳಿಸಿ ಕೆ.ಎಲ್ ರಾಹುಲ್‌ಗೆ ಅತ್ಯುತ್ತ ಸಾಥ್ ಕೊಟ್ಟರು. ತಂಡದ ಸ್ಕೋರ್ 100 ದಾಟಿದ ನಂತರ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು. ಡೆಲ್ಲಿ ಸತತ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ಪಂದ್ಯ ಗುಜರಾತ್ ಪರ ಆಗಿತ್ತು.
4/7ಕೈ ಗಾಯ ಆಗಿದ್ದರೂ ಡೇವಿಡ್ ಮಿಲ್ಲರ್ ಕ್ರೀಸ್‌ಗೆ ಬಂದು ಅತ್ಯುತ್ತಮ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೆ ಜಯ ಆಸೆ ಮೂಡಿಸಿದ್ದರು. ಅಂತಿಮ ಓವರ್‌ನಲ್ಲಿ, ಪ್ರಸಿದ್ಧ ಕೃಷ್ಣ ಬೌಲಿಂಗ್‌ನ ಕೊನೆಯ ಎಸೆತದಲ್ಲಿ ಎರಡು ರನ್ ಗಳಿಸಿದರು.
5/7ಆ ಚೆಂಡಿನಲ್ಲಿ ಮಿಲ್ಲರ್ ಶಾಟ್ ಆಡಲು ಸಾಧ್ಯವಾಗಲಿಲ್ಲ. ಆದರೆ ರನ್ ಗಳಿಸಲು ಪ್ರಯತ್ನಿಸಿದರು. ವಿಕೆಟ್ ಕೀಪರ್ ಜೋಸ್ ಬಟ್ಲರ್ ತೋರಿದ ಚಾಣಕ್ಷತನದಿಂದ ವಿಕೆಟ್‌ಗಳು ಉರುಳಿದರು. ಕುಲದೀಪ್ ರನೌಟ್ ಮೂಲಕ ಗುಜರಾತ್ ಒಂದು ರನ್‌ನಿಂದ ರೋಮಾಂಚಕ ಗೆಲುವು ಸಾಧಿಸಿತು.
6/7ಪಂದ್ಯದ ನಂತರ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಮ್ಮ ಸೋಲಿನ ಬಗ್ಗೆ ಮಾತನಾಡಿ, 9ನೇ ಓವರ್ ನಂತರ ಸತತ ವಿಕೆಟ್‌ಗಳು ಕಳೆದುಕೊಂಡ ಕಾರಣ ಒತ್ತಡದಲ್ಲಿ ಸಿಲುಕಿದೇವು. ಇದು ನಮ್ಮ ಮೇಲೆ ಗಂಭೀರವಾಗಿ ಪರಿಣಾಮ ಬೀರಿತು ಎಂದು ಹೇಳಿದರು.
7/7ಬಳಿಕ ಬ್ಯಾಟರ್‌ಗಳು ಚೆನ್ನಾಗಿ ಆಡಿದ್ದರೆ, ಮೊದಲೇ ಪಂದ್ಯ ಮುಗಿಸಬಹುದಿತ್ತು. ಮಿಲ್ಲರ್ ಅವರ ಪ್ರದರ್ಶನ, ಕೆಎಲ್ ರಾಹುಲ್ ಅವರ ಅದ್ಭುತ ಆಟವನ್ನ ಶ್ಲಾಘಿಸಿದರು. ಕೊನೆಯ ಎಸೆತದವರೆಗೆ ನಾವು ಕಾಯಬಾರದು. ಮೊದಲೇ ವೇಗವಾಗಿ ಆಡಬೇಕಿತ್ತು ಎಂದು ಅಕ್ಷರ್ ಪಟೇಲ್ ಹೇಳಿದರು.