ರಾಖಿ ಕಟ್ಟಿದ ಅಣ್ಣನನ್ನೇ ಅಂಗರಕ್ಷಕನನ್ನಾಗಿ ಮಾಡಿಕೊಂಡ ಸ್ಟಾರ್‌ ನಟಿ! ಸ್ವಂತ ಸಹೋದರನಂತೆ ಈಕೆಯನ್ನು ಸದಾ ಕಾಯುವ ಬಾಡಿಗಾರ್ಡ್‌ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Written ByDeepa A Reddy
Published: Oct 02, 2025, 12:44 PM IST|Updated: Oct 02, 2025, 12:44 PM IST

Bollywood celebrity bodyguard salary: ರಾಖಿ ಕಟ್ಟಿ ಅಣ್ಣಾ ಎಂದವರನ್ನೇ ಈ ನಟಿ ಅಂಗರಕ್ಷಕರನ್ನಾಗಿ ನೇಮಿಸಿಕೊಂಡಿದ್ದಾರೆ. 
 

1/9

Bollywood celebrity bodyguard salary: ಬಾಲಿವುಡ್‌ ನಟ-ನಟಿಯರು ತಮ್ಮ ಅಂಗರಕ್ಷಕರಿಗೆ ಭಾರೀ ಸಂಭಾವನೆಯನ್ನು ನೀಡುತ್ತಾರೆ.   

2/9

ಈ ಬಾಲಿವುಡ್‌ ನಟಿ ರಾಖಿ ಕಟ್ಟಿ, ಅಣ್ಣ ಎಂದು ಪರಿಗಣಿಸಿದವರನ್ನೇ ತನ್ನ ಅಂಗರಕ್ಷಕನಾಗಿ ಇಟ್ಟುಕೊಂಡಿದ್ದಾರೆ. ಆ ನಟಿ ಯಾರು ಮುಂದೆ ಓದಿ..   

3/9

ನಟಿ ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್‌ ನಟಿಯರಲ್ಲಿ ಒಬ್ಬರು. ಅವರ ರೇಂಜ್‌ಗೆ ತಕ್ಕಂತೆ ಆಕೆಗೆ ಸೆಕ್ಯುರಿಟಿಯೂ ಕೂಡ ಬಹಳ ಮುಖ್ಯ.   

4/9

ನಟಿ ದೀಪಿಕಾ ಪಡುಕೋಣೆಯವರನ್ನು ಸದಾ ನೆರಳಂತೆ ಕಾಯುವವರು ಅವರ ಅಂಗರಕ್ಷಕ ಜಲಾಲುದ್ದೀನ್. ಈತ ನಟಿಯೊಂದಿಗೆ ಹಲವು ವರ್ಷಗಳೊಂದಿಗೆ ಜೊತೆಗಿದ್ದಾರೆ.   

5/9

ಸರಿ ಸುಮಾರು ಒಂದು ದಶಕಗಳಿಗಿಂತ ಹೆಚ್ಚಾಗಿ ಜಲಾಲುದ್ದೀನ್ ನಟಿ ದೀಪಿಕಾ ಪಡುಕೋಣೆಗೆ ಅಂಗರಕ್ಷಕರಾಗಿದ್ದಾರೆ.   

6/9

ನಟಿ ದೀಪಿಕಾ ಪಡುಕೋಣೆಗೆ ಸಹೋದರ ಇಲ್ಲದ ಕಾರಣ, ಆಕೆ ಪ್ರತಿ ವರ್ಷ ತಮ್ಮ ಅಂಗರಕ್ಷಕ ಜಲಾಲುದ್ದೀನ್ ಅವರಿಗೆ ರಾಖಿ ಕಟ್ಟುತ್ತಾರೆ.   

7/9

ದೀಪಿಕಾ ಪಡುಕೋಣೆ ಜಲಾಲುದ್ದೀನ್ ಅವರನ್ನು ಕೇವಲ ಅಂಗರಕ್ಷಕನಂತೆ ಪರಿಗಣಿಸದೆ ತಮ್ಮ ಸ್ವಂತ ಸಹೋದರನ ರೀತಿ ನಡೆಸಿಕೊಳ್ಳುತ್ತಾರೆ.   

8/9

ವರದಿಗಳ ಪ್ರಕಾರ ನಟಿ ದೀಪಿಕಾ, ಸದಾ ನೆರಳಂತೆ ತಮ್ಮನ್ನು ಕಾಯುವ ಜಲಾಲುದ್ದೀನ್ ಅವರಿಗೆ ವರ್ಷಕ್ಕೆ 1 ಕೋಟಿ ರೂ.ಸಂಭಾವನೆ ಕೊಡುತ್ತಾರೆ ಎಂದು ವರದಿಯಾಗಿದೆ.   

9/9

ಬಾಲಿವುಡ್‌ನಲ್ಲಿ ಬಹುತೇಕ ಎಲ್ಲಾ ಸ್ಟಾರ್‌ ನಟ-ನಟಿಯರಿಗೂ ಅಂಗರಕ್ಷಕರೊದ್ದರೂ, ತಮ್ಮ ಬಾಡಿಗಾರ್ಡ್‌ಗಳನ್ನು ತಮ್ಮ ಸ್ವಂತದವರಂತೆ ಕಾಣುವವರು ತುಂಬಾ ಅಪರೂಪ.