ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಯಾರ ಮಗಳು ಗೊತ್ತೇ.. ಇವರ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು ಕೋಟಿ?
ಪ್ರಗತಿ ಶೆಟ್ಟಿ ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಪತ್ನಿ. ಕಾಮತಾರ ಸಿನಿಮಾದಲ್ಲಿ ರಜನ ಮಡದಿಯಾಗಿ ನಟಿಸಿ ಖ್ಯಾತಿ ಪಡೆದರು.
ರಿಷಬ್ ಶೆಟ್ಟಿ ಮತ್ತು ಪ್ರಗತಿ 2017ರಲ್ಲಿ ಮದುವೆಯಾದರು. ಪ್ರಗತಿ ಶೆಟ್ಟಿಯ ಮೂಲತಃ ಮಂದಾರ್ತಿಯವರು. ಆದರೆ ಶಿವಮೊಗ್ಗದ ಅರಸಾಳು ಊರಿನಲ್ಲಿ ಪ್ರಗತಿ ಹುಟ್ಟಿ ಬೆಳೆದರು. ಶಿವಮೊಗ್ಗದಲ್ಲಿಯೇ ವಿದ್ಯಾಭಯಾಸ ಪೂರ್ಣಗೊಳಿಸಿದರು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎಸ್‌ಸಿ ಪದವಿ ಪಡೆದಿದ್ದಾರೆ. ಬಳಿಕ ಬೆಂಗಳೂರಿಗೆ ಬಂದು ಐಟಿ ಕಂಪನಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದಾರೆ.
ಪ್ರಗತಿ ಮತ್ತು ರಿಷಬ್ ಪರಸ್ಪರ ಪ್ರೀತಿಸಿ ಮದುವೆಯಾದವರು. 2017ರಲ್ಲಿ ಕುಂದಾಪುರದಲ್ಲಿ ಪ್ರಗತಿ-ರಿಷಬ್ ಮದುವೆ ನಡೆಯಿತು. ಮದುವೆ ಬಳಿಕ ಪ್ರಗತಿ ಶೆಟ್ಟಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿದರು.
ಹಲವಾರು ಸಿನಿಮಾಗಳಿಗೆ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಪತಿ ರಿಷಬ್ ಅವರ ಬಹುತೇಕ ಸಿನಿಮಾಗಳಿಗೆ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಲ್ ಬಾಟಂ, ಕಥಾಸಂಗಮ, ರುದ್ರಪ್ರಯಾಗ, 777 ಚಾರ್ಲಿ ಹೀಗೆ ಅನೇಕ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.
ಪ್ರಗತಿ ಶೆಟ್ಟಿ ಅವರು ಅಮ್ಮಂದಿರ ದಿನದಂದು ತಮ್ಮ ತಾಯಿಯ ಜೊತೆಗೆ ಫೋಟೋ ಹಂಚಿಕೊಂಡಿದ್ದರು. ಪ್ರಗತಿ ಶೆಟ್ಟಿ ಅವರ ತಾಯಿ ಇವರೇ..
ಪತಿಯ ಕೆಲಸಕ್ಕೆ ಸದಾ ಬೆಂಬಲವಾಗಿ ನಿಲ್ಲುವ ಪ್ರಗತಿ ಶೆಟ್ಟಿ ಸಹ ಕೋಟಿತ ಒಡತಿ ಆಗಿದ್ದಾರೆ. ಅಂದಾಜು 4 - 5 ಕೋಟಿ ಆಸ್ತಿಯನ್ನು ಪ್ರಗತಿ ಶೆಟ್ಟಿ ಹೊಂದಿದ್ದಾರೆ ಎನ್ನಲಾಗುತ್ತಿದೆ. (ಗಮನಿಸಿ: ಇದು ಅಧಿಕೃತ ಮಾಹಿತಿ ಅಲ್ಲ.)