ಹುಟ್ಟಿದ ಧರ್ಮವನ್ನು ಬಿಟ್ಟು, ವಿವಾಹಿತ ನಟ ಧರ್ಮೇಂದ್ರ ಕೈ ಹಿಡಿದಿದ್ದ ಹೇಮಾ ಮಾಲಿನಿ! ಅದೂ ಕಾನೂನುಬಾಹಿರವಾಗಿ

Written ByKrishna N K
Published: Nov 11, 2025, 01:29 PM IST|Updated: Nov 11, 2025, 01:29 PM IST

Dharmendra Hema Malini : 1980 ರಲ್ಲಿ, ಧರ್ಮೇಂದ್ರ ಅವರು ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್‌ಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿಯವರನ್ನು ಎರಡನೇ ಬಾರಿಗೆ ಮದುವೆಯಾದರು. ಈ ವಿಚಾರ ಅಂದಿನ ಕಾಲದಲ್ಲಿ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ನಟನ ಮೇಲೆ ಮತಾಂತರದ ಆರೋಪ ಹೊರಿಸಲಾಯಿತು.

1/6

ಹೇಮಾ ಮಾಲಿನಿ ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳ ಕನಸಿನ ಕನ್ಯೆಯಾಗಿ ಗುರುತಿಸಿಕೊಂಡಿದ್ದರು. ತೆರೆ ಮೇಲೆ ಮಿಂಚಿದ್ದ ಚೆಲುವೆ ತಮ್ಮ ಜೀವನದಲ್ಲಿ ಹಲವಾರು ವಿವಾದಗಳನ್ನು ಎದುರಿಸಿದ್ದಾರೆ.   ಅವುಗಳಲ್ಲಿ ಒಂದು ಅವರ ವಿವಾಹ. 

2/6

ಹೌದು.. ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಮೇ 2, 1980 ರಂದು ವಿವಾಹವಾದರು. ಧರ್ಮೇಂದ್ರ ತಮ್ಮ ಮೊದಲ ಪತ್ನಿ ಪ್ರಕಾಶ್ ಕೌರ್ ಅವರಿಗೆ ವಿಚ್ಛೇದನ ನೀಡದೇ ಹೇಮಾ ಮಾಲಿನಿಯನ್ನು ವಿವಾಹವಾದರು.  ಇದು ಹಿಂದೂ ವಿವಾಹ ಕಾಯ್ದೆಯಡಿ ಕಾನೂನುಬಾಹಿರವಾಗಿದೆ.

3/6

1979 ರಲ್ಲಿ, ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಇಸ್ಲಾಂಗೆ ಮತಾಂತರಗೊಂಡು ವಿವಾಹವಾದರು ಎಂದು ವರದಿಯಾಗಿದೆ. ಇಸ್ಲಾಂನಲ್ಲಿ ಬಹುಪತ್ನಿತ್ವಕ್ಕೆ ಯಾವುದೇ ನಿಷೇಧವಿಲ್ಲ. ಧರ್ಮೇಂದ್ರ ತನ್ನ ಹೆಸರನ್ನು ದಿಲಾವರ್ ಎಂದು ಬದಲಾಯಿಸಿಕೊಂಡರು, ಹೇಮಾ ಮುಸ್ಲಿಂ ಆಚರಣೆಗಳ ಪ್ರಕಾರ ಮದುವೆಯಾಗಲು ಆಯೇಷಾ ಬಿ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡರು ಎಂದು ಹೇಳಲಾಗಿತ್ತು.

4/6

ಧರ್ಮೇಂದ್ರ ಮತ್ತು ಹೇಮಾ ತಮ್ಮ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರವೇ ಅಯ್ಯಂಗಾರ್ ಆಚರಣೆಯ ಪ್ರಕಾರ ಎರಡನೇ ಬಾರಿಗೆ ವಿವಾಹವಾದರು ಎಂದು ವರದಿಯಾಗಿದೆ. ರಾಮ್ ಕಮಲ್ ಮುಖರ್ಜಿ ಅವರ 'ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್' ಪುಸ್ತಕದಲ್ಲಿ, ಹೇಮಾ ಮಾಲಿನಿ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ..

5/6

ಯಸ್‌.. ಯಾರಾದರೂ ದೊಡ್ಡದನ್ನು ಮಾಡಿದಾಗ, ಕೆಲವರು ಅವರನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಾರೆ. ಆದರೆ ಅವರು (ಧರ್ಮೇಂದ್ರ) ಯಶಸ್ವಿಯಾಗುತ್ತಾರೆ ಎಂದು ನನಗೆ ತಿಳಿದಿದ್ದು." ಅಫಿಡವಿಟ್‌ನಲ್ಲಿ ಧರ್ಮೇಂದ್ರ ಅವರು ತಮ್ಮನ್ನು ಎರಡನೇ ಪತ್ನಿ ಎಂದು ಏಕೆ ಉಲ್ಲೇಖಿಸಲಿಲ್ಲ ಎಂಬ ಪ್ರಶ್ನೆ ಹೇಮಾ ಅವರು.. "ಇದು ನಮ್ಮ ನಡುವಿನ ವೈಯಕ್ತಿಕ ವಿಷಯ. ನಾವು ಅದನ್ನು ನಮ್ಮ ನಡುವೆ ಬಗೆಹರಿಸುತ್ತೇವೆ. ಬೇರೆ ಯಾರೂ ಇದರ ಬಗ್ಗೆ ಚಿಂತಿಸಬೇಕಾಗಿಲ್ಲ" ಎಂದು ಹೇಳಿದರು.

6/6

ಅದೇ ಸಮಯದಲ್ಲಿ, ಮದುವೆಗಾಗಿ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ಬದಲಾಯಿಸಿಕೊಂಡ ಸುದ್ದಿಯ ಬಗ್ಗೆ ಹಳೆಯ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ ಧರ್ಮೇಂದ್ರ, "ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು. ನಾನು ನನ್ನ ಸ್ವಂತ ಲಾಭಕ್ಕಾಗಿ ಮತಾಂತರಗೊಳ್ಳುವ ವ್ಯಕ್ತಿಯಲ್ಲ" ಎಂದು ತಿಳಿಸಿದ್ದರು.. "ಈ ಆರೋಪಗಳಲ್ಲಿ ಏನಾದರೂ ಸತ್ಯವಿದ್ದರೆ, ಯಾರಾದರೂ ಅದನ್ನು ಪುರಾವೆಗಳೊಂದಿಗೆ ಸಾಬೀತುಪಡಿಸಲಿ. ಅದು ಸುಳ್ಳಾಗಿದ್ದರೆ, ಜನರು ನಿರ್ಧರಿಸಲಿ" ಎಂದು ಸವಾಲ್‌ ಹಾಕಿದ್ದರು..