ಮಧುಮೇಹಿಗಳು ಅಪ್ಪಿ ತಪ್ಪಿ ಖಾಲಿ ಹೊಟ್ಟೆಯಲ್ಲಿ ಈ 3 ಆಹಾರಗಳನ್ನು ತಿಂದರೆ, ವೈದ್ಯರ ಔಷಧಿಯೂ ಕೆಲಸ ಮಾಡಲ್ಲ..!

Diabetes care tips : ಇಂದು ಕೆಟ್ಟ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದ್ದು, ಔಷಧಿ ಮತ್ತು ಆಹಾರದ ಸಹಾಯದಿಂದ ಇದನ್ನು ನಿಯಂತ್ರಿಸಬಹುದು. ಅದರಂತೆ ಮಧುಮೇಹಿಗಳು ಖಾಲಿ ಹೊಟ್ಟೆಯಲ್ಲಿ ಈ ಕೆಳಗೆ ನೀಡಿರುವ ಆಹಾರ ಪದಾರ್ಥಗಳನ್ನು ತಿನ್ನಲೇಬಾರದು..

1 /8

ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಗುಣಮಟ್ಟದ ಆಹಾರಗಳನ್ನು ಸೇವಿಸುವುದರಿಂದ ಮಧುಮೇಹದಂತಹ (Diabetes care) ಅಪಾಯಕಾರಿ ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ.. ಒಮ್ಮೆ ಮಧುಮೇಹ ಒಂದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಲಾಗದು. ಆದರೆ ಔಷಧಿ ಮತ್ತು ಉತ್ತಮ ಆಹಾರ ಪದ್ದತಿಯಿಂದ ನಿಯಂತ್ರಿಸಬಹುದು.  

2 /8

ಮಧುಮೇಹಿಗಳು ದೇಹದ ಸಕ್ಕರೆ (Diabetes care) ಮಟ್ಟವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಆಹಾರ ಕ್ರಮದಿಂದ ಹಿಡಿದು ಔಷಧಿಗಳವರೆಗೆ ಎಲ್ಲವನ್ನೂ ಬಹಳ ಕಾಳಜಿವಹಿಸಬೇಕು. ಮಾಡುತ್ತಾರೆ. ಆಹಾರ ಮತ್ತು ಕುಡಿಯುವ ಅಭ್ಯಾಸಗಳಲ್ಲಿ ಸ್ವಲ್ಪ ತಪ್ಪುಗಳನ್ನು ಮಾಡಿದರೂ ಸಕ್ಕರೆ ಮಟ್ಟವು (Blood Sugar) ವೇಗವಾಗಿ ಹೆಚ್ಚಾಗುತ್ತದೆ. ಸ್ವಲ್ಪ ಸಮಯದ ನಂತರ, ಔಷಧವು ನಿಷ್ಪರಿಣಾಮಕಾರಿಯಾಗಬಹುದು.  

3 /8

ಮಧುಮೇಹಿಗಳಿಗೆ ಬೆಳಗಿನ ಸಮಯ ಬಹಳ ಮುಖ್ಯ. ಈ ಸಮಯದಲ್ಲಿ ಆಹಾರ ಪದ್ಧತಿಯಲ್ಲಿ ಯಾವುದೇ ತಪ್ಪು ಜರಗಬಾರದು.. ಇಲ್ಲವೆಂದರೆ ನಿಮ್ಮ ಸಕ್ಕರೆ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ.. ಹಾಗಾದರೆ ಬೆಳಿಗ್ಗೆ ಯಾವ ರೀತಿಯ ಆಹಾರಗಳನ್ನು ತಿನ್ನಬಾರದು..? ಬನ್ನಿ ತಿಳಿದುಕೊಳ್ಳೋಣ.  

4 /8

ಹೆಚ್ಚಿನ ಜನರು ತಮ್ಮ ದಿನವನ್ನು ಚಹಾ ಮತ್ತು ಬ್ರೆಡ್‌ನೊಂದಿಗೆ ಪ್ರಾರಂಭಿಸುತ್ತಾರೆ. ಬಿಳಿ ಬ್ರೆಡ್ ನ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಮತ್ತು ಬ್ರೆಡ್ ತಿನ್ನುವುದರಿಂದ ನಿಮ್ಮ ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಬಹುದು.  

5 /8

ಹಣ್ಣಿನ ರಸ ಆರೋಗ್ಯಕರ, ಆದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಮಧುಮೇಹ ರೋಗಿಗೆ ಅಪಾಯಕಾರಿ. ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದರಿಂದ ಸಕ್ಕರೆ ಮಟ್ಟ ಹಠಾತ್ ಏರಿಕೆಯಾಗುತ್ತದೆ.  

6 /8

ಬೆಳಿಗ್ಗೆ ಕಾರ್ನ್ ಫ್ಲೇಕ್ಸ್ ಮತ್ತು ಮ್ಯೂಸ್ಲಿಯನ್ನು ಸೇವಿಸಬಾರದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಕಾರ್ನ್ ಫ್ಲೇಕ್ಸ್ ಮತ್ತು ಮ್ಯೂಸ್ಲಿಯಲ್ಲಿ ಸಕ್ಕರೆ ಅಧಿಕವಾಗಿದ್ದು, ಇದು ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.  

7 /8

ಮಧುಮೇಹ ರೋಗಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಳುಗಳನ್ನು ತಿನ್ನಬಹುದು. ಇದಲ್ಲದೆ, ನೀವು ಮಖಾನಾವನ್ನು ಸಹ ಸೇವಿಸಬಹುದು. ನಿಮಗೆ ಏನಾದರೂ ಭಾರವಾದ ಆಹಾರವನ್ನು ತಿನ್ನಬೇಕೆಂದು ಅನಿಸಿದರೆ, ನೀವು ಪರಾಠ ಮತ್ತು ಮೊಸರು ತೆಗೆದುಕೊಳ್ಳಬಹುದು.  

8 /8

ಗಮನಿಸಿ - ಈ ಸುದ್ದಿ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗೆ ಏನನ್ನಾದರೂ ಬಳಸುವ ಮೊದಲು ಯಾವಾಗಲೂ ವೈದ್ಯರನ್ನು ಸಂಪರ್ಕಿಸಿ. ಈ ಮೇಲಿನ ಮಾಹಿತಿಯನ್ನು Zee Kannada News ಖಚಿತಪಡಿಸುವುದಿಲ್ಲ..