Sania Mirza post on India Pakistan Ceasefire: ಸಾನಿಯಾ ಮಿರ್ಜಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಂವೇದನಾಶೀಲ ಪೋಸ್ಟ್ ಮಾಡಿದ್ದು, ಫ್ಯಾನ್ಸ್ ಕಿಡಿಕಾರಿದ್ದಾರೆ. ಆದರೆ ಈ ಬಗ್ಗೆ ಸತ್ಯ ಪರಿಶೀಲನೆ ನಡೆಸಲಾಗಿದ್ದು ಅದರ ಸಂಕ್ಷಿಪ್ತ ವರದಿ ಇಲ್ಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶಾಂತಿ ಪಾಲನೆ ಮಾಡಿ ಎಂದು ಹೇಳಿದ್ದರು. ಈ ಬಗ್ಗೆ ಭಾರೀ ಪರ ವಿರೋಧ ವ್ಯಕ್ತವಾಗಿತ್ತು. ಒಂದು ವರ್ಗದ ನೆಟಿಜನ್‌ಗಳು ಅವರ ಮೇಲೆ ವಾಗ್ದಾಳಿ ನಡೆಸಿದ್ದರು.
"ರಾಜತಾಂತ್ರಿಕತೆ ದೌರ್ಬಲ್ಯವಲ್ಲ. ಶಾಂತಿ ಪಾಲನೆ ಐಷಾರಾಮಿ ಅಲ್ಲ. ಅದು ಮುಂದಿನ ದಾರಿ. ಏಕೆಂದರೆ ಯುದ್ಧದಿಂದ ಏನಾಗುತ್ತದೆ ಎಂದು ನೋಡಿದ್ದೇವೆ. ಗಾಜಾದಿಂದ ಇಸ್ರೇಲ್‌ವರೆಗೆ, ಪುಲ್ವಾಮಾದಿಂದ ಪಹಲ್ಗಾಮ್‌ವರೆಗೆ, ರಷ್ಯಾದಿಂದ ಉಕ್ರೇನ್‌ವರೆಗೆ" ಎಂದಿದ್ದರು. ಆ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಭಾರೀ ಟೀಕೆ ವ್ಯಕ್ತವಾಗಿತ್ತು.
ಇನ್ನು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರು, "ರಾಜತಾಂತ್ರಿಕತೆ? ಅಮಾಯಕ ಹಿಂದೂಗಳನ್ನು ಕೊಂದು ಅತ್ಯಂತ ಘೋರ ಅಪರಾಧ ಮಾಡಿದ ನಂತರವೂ... ಅವರು ಶಾಂತಿ ಮತ್ತು ರಾಜತಾಂತ್ರಿಕತೆಯನ್ನು ನಿರೀಕ್ಷಿಸುತ್ತಾರೆ. ನೋಡಿ, ಭ್ರಮೆಯಲ್ಲಿ ಹಲವು ಹಂತಗಳಿವೆ. ಇದು ಕೇವಲ ಆರಂಭ" ಎಂದಿದ್ದರು. ಮತ್ತೊಬ್ಬರು, "ಸಾನಿಯಾ ಮಿರ್ಜಾ ಒಬ್ಬ ಪಾಕಿಸ್ತಾನಿಯಿಂದ ಇನ್ನೊಬ್ಬ ಮಹಿಳೆಗಾಗಿ ವಿಚ್ಛೇದನ ಪಡೆದಿದ್ದಾಳೆ. ಆದರೂ, ಅವಳು ಪಾಕಿಸ್ತಾನದ ಪರ ಮಾತನಾಡುತ್ತಿದ್ದಾಳೆ. ನಾಚಿಕೆಗೇಡಿನ ಸಂಗತಿ" ಎಂದು ಕಿಡಿಕಾರಿದ್ದರು
ಇಷ್ಟೆಲ್ಲಾ ಪರ ವಿರೋಧಗಳ ನಡುವೆ ನಿಜವಾಗಿಯೂ ಸಾನಿಯಾ ಮಿರ್ಜಾ ಪಾಕ್ ಪರ ಮಾತನಾಡಿದ್ದಾರೆಯೇ ಎಂದು ಸತ್ಯ ಪರಿಶೀಲಿಸಲು Google ಹುಡುಕಾಟವನ್ನು ಮಾಡಿದ್ದೆವು, ಜೊತೆಗೆ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸಹ ಪರಿಶೀಲಿಸಿದ್ದೇವೆ. ಆದರೆ ನಮಗೆ ಏನೂ ಸಿಗಲಿಲ್ಲ
ವಾಸ್ತವವಾಗಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆ ಸಾನಿಯಾ ಪೋಸ್ಟ್ ಮಾಡಿದ ಸಂದೇಶವು ವಿಭಿನ್ನ ಧರ್ಮಗಳಿಗೆ ಸೇರಿದ ಇಬ್ಬರು ಮಹಿಳಾ ಅಧಿಕಾರಿಗಳು (ವ್ಯೋಮಿಕಾ ಸಿಂಗ್ ಮತ್ತು ಸೋಫಿಯಾ ಖುರೇಷಿ) ಮಾಧ್ಯಮಗಳಿಗೆ ಮಾಹಿತಿ ನೀಡುವ ಬಗ್ಗೆ. ಅದಾದ ಬಳಿಕ ಶಾಂತಿ ಪಠಿಸುವ ಪಾಠ. ಈ ಎರಡೂ ಪೋಸ್ಟ್‌ಗಳು ದೇಶದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದೇ ವಿನಃ ಬೇರೇನು ಇಲ್ಲ.
ಭಾರತ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದಾಗಿನಿಂದ, ಅಂತರ್ಜಾಲದಲ್ಲಿ ಬಹಳಷ್ಟು ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳು ಹರಡುತ್ತಿವೆ. ಆದ್ದರಿಂದ, ಸಾಮಾಜಿಕ ಮಾಧ್ಯಮ ಮತ್ತು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾದ ಯಾವುದೇ ಸುದ್ದಿಗಳನ್ನು ಪರಿಶೀಲಿಸಲು ಓದುಗರಿಗೆ ಸೂಚಿಸಲಾಗಿದೆ.
ಹೀಗಿರುವಾಗ ಸಾನಿಯಾ ಮಿರ್ಜಾ ಶಾಂತಿ ಪರ ಹೋರಾಡುತ್ತಿದ್ದಾರೆ ವಿನಃ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿಲ್ಲ, ಆ ದೇಶದ ಪರ ಮಾತನಾಡಿಲ್ಲ.