Plastic Water: ಪ್ಲಾಸ್ಟಿಕ್ ಬಾಟಲ್ ನೀರು ಕುಡಿದ್ರೆ ಗಂಡಸ್ತನಕ್ಕೆ ಕುತ್ತು..!
ಶತಮಾನಗಳಿಂದ ಪ್ಲಾಸ್ಟಿಕ್ ಬಳಕೆಯಲ್ಲಿದ್ದು, ಪರಿಸರಕ್ಕೆ ಹಾನಿಕಾರಕವಾಗಿದೆ. ನೀರು ಸಂಗ್ರಹಕ್ಕೆ ಬಳಸುವ ಪ್ಲಾಸ್ಟಿಕ್ ಬಾಟಲ್, ಕ್ಯಾನ್‌ಗಳನ್ನು ಬಳಸಿ ಬಿಸಾಡಲಾಗುತ್ತದೆ. ಹೀಗೆ ಬಿಸಾಡಿದ ಈ ಪ್ಲಾಸ್ಟಿಕ್ ಪರಸರದಲ್ಲಿ ಸೇರಿ ಪರಿಸರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಈ ಪ್ಲಾಸ್ಟಿಕ್, ವನ್ಯಜೀವಿಗಳು ಮತ್ತು ನೈಸರ್ಗಿಕ ಸಮತೋಲನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.
ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳಲ್ಲಿ ದೀರ್ಘಕಾಲ ಸಂಗ್ರಹಿಸಿಟ್ಟ ನೀರನ್ನು ಬಳಸುವುದರಿಂದ ಕೆಲವು ಹಾನಿಕಾರಕ ಅಡ್ಡಪರಿಣಾಮ ಉಂಟಾಗುತ್ತದೆ. ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ರಾಸಾಯನಿಕಗಳಿಂದ ಮಾನವನ ಆರೋಗ್ಯದ ಮೇಲೆ ದೊಡ್ಡ ಅಪಾಯವಿದೆ. ನೀರಿನಿಂದ ರಾಸಾಯನಿಕಗಳು ದೇಹವನ್ನು ಪ್ರವೇಶಿಸುತ್ತವೆ. ನೀರಿನ ಕ್ಯಾನ್‌ಗಳು ಮೇಲೆ ದೀರ್ಘಕಾಲದವರೆಗೆ ಸೂರ್ಯನ ಕಿರಣಗಳು ಬಿದ್ದಾಗ ನೀರಿನೊಂದಿಗೆ ರಾಸಾಯನಿಕಗಳು ಬೆರೆಯುತ್ತವೆ. ಈ ನೀರು ಸೇವಿಸಿದಾಗ ನಮ್ಮ ಆರೋಗ್ಯಕ್ಕೆ ಹದಗೆಡುತ್ತದೆ.
ಪ್ಲಾಸ್ಟಿಕ್ ನೀರಿನ ಕ್ಯಾನ್‌ಗಳನ್ನು ಬಳಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮುಖ್ಯವಾಗಿ ಜೀರ್ಣಕಾರಿ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿ ಸುತ್ತದೆ. ಪ್ಲಾಸ್ಟಿಕ್ ವಾಟರ್ ಬಾಟಲ್ ಮತ್ತು ಕ್ಯಾನ್‌ಗಳ ನೀರು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಗೆ ಅಡ್ಡಿಪಡಿಸುತ್ತದೆ. ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ರಾಸಾಯನಿಕಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತವೆ.
ಪ್ಲಾಸ್ಟಿಕ್ ವಾಟರ್ ಬಾಟಲ್ ನೀರು ಕುಡಿಯುವುದರಿಂದ ಮಾರಕ ಕ್ಯಾನ್ಸರ್ ಕಾಯಿಲೆ ಅಪಾಯ ಬರುವ ಸಾಧ್ಯತೆ ಇರುತ್ತದೆ. ಪ್ಲ್ಯಾಸ್ಟಿಕ್ ಬಾಟಲ್ ಮತ್ತು ಕ್ಯಾನ್‌ಗಳು ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳು ತ್ತವೆ ಮತ್ತು ಡೈ-ಆಕ್ಸಿನ್ ಅನ್ನು ಬಿಡುಗಡೆ ಮಾಡುತ್ತವೆ. ಈ ಹಾನಿಕಾರಕ ವಿಷವನ್ನು ಸೇವಿಸಿದರೆ ಸ್ತನ ಕ್ಯಾನ್ಸರ್ ಅಪಾಯ ಬರುವ ಸಾಧ್ಯತೆ ಇರುತ್ತದೆ. ಇದಲ್ಲದೆ ಲಿವರ್ ಕ್ಯಾನ್ಸರ್ ಮತ್ತು ಪುರುಷರ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ.
ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳು ಬಿಸ್ಫೆನಾಲ್ ಎ (BPA)ಯನ್ನು ಉತ್ಪಾದಿಸುತ್ತವೆ. ಇದು ಈಸ್ಟ್ರೊಜೆನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಧುಮೇಹ, ಸ್ಥೂಲಕಾಯತೆ, ಫಲವತ್ತತೆ ಸಮಸ್ಯೆಗಳು, ಪ್ರೌಢಾವಸ್ಥೆಯ ಯುವತಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿಯೇ ಪ್ಲಾಸ್ಟಿಕ್ ಕ್ಯಾನ್ ಮತ್ತು ಬಾಟಲ್‌ಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದನ್ನು ಆದಷ್ಟು ತಪ್ಪಿಸಬೇಕು.