12ವರ್ಷಗಳ ಬಳಿಕ ದೀಪಾವಳಿ ವೇಳೆ ಕೇಂದ್ರ ತ್ರಿಕೋನ ರಾಜಯೋಗ: ಈ ರಾಶಿಯವರಿಗೆ ಗುರು ಮಹಾದಶ, ಸಂಪತ್ತಿನ ಸುಯೋಗ

Written ByYashaswini V
Published: Oct 14, 2025, 07:59 AM IST|Updated: Oct 14, 2025, 11:51 AM IST

Kendra Trikona Rajyog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು 12 ವರ್ಷಗಳ ಬಳಿಕ ಅತ್ಯಂತ ಶಕ್ತಿಶಾಲಿ ರಾಜಯೋಗದೊಂದಿಗೆ ದೀಪಾವಳಿಯ ಆಗಮನವಾಗಲಿದೆ. ಇದರಿಂದ ಕೆಲವು ರಾಶಿಯವರು ದೈವಾನುಗ್ರಹಕ್ಕೆ ಪಾತ್ರರಾಗಲಿದ್ದಾರೆ. ಗುರು ಮಹಾದಶ ಪ್ರಭಾವದಿಂದಾಗಿ ಅವರ ಜೀವನದಲ್ಲಿ ಕತ್ತಲೆ ಸರಿದು ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆಯನ್ನು ಅನುಭವಿಸುತ್ತಾರೆ ಎನ್ನಲಾಗುತ್ತಿದೆ. 

Kendra Trikona Rajyoga Effects1/6

ಗುರು ಗೋಚಾರ

ವೈದಿಕ ಜ್ಯೋತಿಷ್ಯದ ಪ್ರಕಾರ, ದೀಪಾವಳಿ ಹಬ್ಬಕ್ಕೂ ಮೊದಲು ದೇವಗುರು ಬೃಹಸ್ಪತಿ ಸಂಚಾರದಲ್ಲಿ ಬದಲಾವಣೆ ಆಗಲಿದೆ. ಅಕ್ಟೋಬರ್ 18ರಂದು ಗುರು ಮಿಥುನ ರಾಶಿಯನ್ನು ಬಿಟ್ಟು ಕಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರೊಂದಿಗೆ ಅತ್ಯಂತ ಶಕ್ತಿಶಾಲಿ ಯೋಗಗಳಲ್ಲಿ ಒಂದಾದ ಕೇಂದ್ರ ತ್ರಿಕೋನ ರಾಜಯೋಗ ಸೃಷ್ಟಿಯಾಗಲಿದೆ. 

Kendra Trikona Rajyoga Effects2/6

12ವರ್ಷಗಳ ಬಳಿಕ ಕೇಂದ್ರ ತ್ರಿಕೋನ ರಾಜಯೋಗ

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಸುಮಾರು 12 ವರ್ಷಗಳ ಬಳಿಕ ಗುರು ಗೋಚಾರದಿಂದಾಗಿ ದೀಪಾವಳಿ ಸಂದರ್ಭದಲ್ಲಿ ಪ್ರಬಲ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತಿದೆ. 

Kendra Trikona Rajyoga Effects3/6

ಮೂರು ರಾಶಿಯವರಿಗೆ ಸಂಪತ್ತಿನ ಸುಯೋಗ

ದೀಪಾವಳಿ ಹೊತ್ತಲ್ಲಿ ಕೇಂದ್ರ ತ್ರಿಕೋನ ರಾಜಯೋಗ, ಗುರು ಮಹಾದಶ ಪ್ರಭಾವದಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಂಪತ್ತಿನ ಸುರಿಮಳೆಯೇ ಆಗಲಿದೆ. ಅವರ ಅದೃಷ್ಟ ರಾತ್ರೋರಾತ್ರಿ ಕ್ಹುಲಾಯಿಸಲಿದ್ದು ಜೀವನದಲ್ಲಿ ಕಷ್ಟದ ಸಮಯ ಕಳೆದು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಸಾಗಿಸುವರು ಎನ್ನಲಾಗುತ್ತಿದೆ. 

Kendra Trikona Rajyoga Effects4/6

ಕಟಕ ರಾಶಿ

ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರ ಲಗ್ನದ ಮನೆಯಲ್ಲಿ ಸೃಷ್ಟಿಯಾಗುತ್ತಿರುವ್ದರಿಂದ ಈ ಅವಧಿಯ ಗುರು ಮಹಾದಶ ಪ್ರಭಾವವು ನಿಮ್ಮ ಬದುಕಿನಲ್ಲಿ ಶತ್ರುಗಳ ವಿರುದ್ಧ ಜಯ ನೀಡಲಿದೆ. ಹಿಂದಿನ ತಪ್ಪುಗಳಿಂದ ಪಾಠ ಕಲಿತಿರುವ ನೀವು ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸಲು, ಉದ್ಯೋಗ ರಂಗದಲ್ಲಿ ಯಶಸ್ಸಿನ ಕೀರ್ತಿ ಪತಾಕೆಯನ್ನು ಹಾರಿಸುವಿರಿ. 

Kendra Trikona Rajyoga Effects5/6

ಕನ್ಯಾ ರಾಶಿ

ದೀಪಾವಳಿ ಹೊತ್ತಲ್ಲಿ ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರಿಗೆ ಗುರು ಬಲವನ್ನು ನೀಡಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳಲಿದ್ದು ಮನೆಯಲ್ಲಿ ಸುಖ-ಸಂತೋಷ ಹೆಚ್ಚಾಗಲಿದೆ. ದಂಪತಿಗಳಿಗೆ ಮಕ್ಕಳಿಂದ ಸಂತಸ ಇಮ್ಮಡಿಗೊಳ್ಳಲಿದೆ. ವಿದೇಶ ವ್ಯವಹಾರದಲ್ಲಿ ಭರ್ಜರಿ ಲಾಭಾಂಶದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. 

Kendra Trikona Rajyoga Effects6/6

ಮೀನ ರಾಶಿ

ದೀಪಾವಳಿಗೂ ಮೊದಲು ಈ ರಾಶಿಯವರಿಗೆ ಗುರು ಬಲ ದೊರೆಯಲಿದ್ದು ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರ ಸಂಕಷ್ಟಗಳನ್ನು ದೂರ ಮಾಡಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ನಿರುದ್ಯೋಗಿಗಳಿಗೆ ಕನಸಿನ ಉದ್ಯೋಗ ದೊರೆಯಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.