ಹೃದಯಾಘಾತವಾದಾಗ ಸರಿಯಾದ ರೀತಿಯ ಪ್ರಥಮ ಚಿಕಿತ್ಸೆ ನೀಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು. ಈ ಪ್ರಥಮ ಚಿಕಿತ್ಸೆ ಯಾವುದು ಎನ್ನುವುದನ್ನು ವೈದ್ಯರೇ ವಿವರಿಸಿದ್ದಾರೆ.
ಬೆಂಗಳೂರು : ಹೃದಯಾಘಾತ ಎನ್ನುವುದು ಒಂದು ಮಾರಕ ಕಾಯಿಲೆ. ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಅಥವಾ ಪ್ರಥಮ ಚಿಕಿತ್ಸೆ ದೊರೆತರೆ, ಆ ವ್ಯಕ್ತಿಯ ಜೀವವನ್ನು ಉಳಿಸಬಹುದು. ಹಾಗಿದ್ದರೆ ಹೃದಯಾಘಾತವಾದ ತಕ್ಷಣ ಏನು ಮಾಡಬೇಕು ಎನ್ನುವುದನ್ನು ವೈದ್ಯರಿಂದಲೇ ತಿಳಿದುಕೊಳ್ಳೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ
ಇತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ತಕ್ಷಣ ಚಿಕಿತ್ಸೆ ಸಿಗದಿರುವುದು. ಹಲವು ಬಾರಿ ಆಸ್ಪತ್ರೆಗೆ ದಾಖಲಾಗುವ ಮೊದಲೇ ವ್ಯಕ್ತಿ ಕೊನೆ ಉಸಿರು ಎಳೆದು ಬಿಡುತ್ತಾರೆ. ಆದರೆ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ಸಿಕ್ಕರೆ ಪ್ರಾಣ ಉಳಿಸಬಹುದು.
ಹೃದಯಾಘಾತವಾದ 2 ನಿಮಿಷಗಳಲ್ಲಿ ಈ ರೀತಿ ಮಾಡಿದರೆ ಸಾವು ಸಂಭವಿಸದಂತೆ ನೋಡಿಕೊಳ್ಳಬಹುದು ಎಂದು ಎಂಬಿಬಿಎಸ್, ಎಂಡಿ ವೈದ್ಯ ಡಾ. ಬಿಮಲ್ ಛಾಜೆದ್ ತಿಳಿಸಿದ್ದಾರೆ.
ಹೃದಯಕ್ಕೆ ಆಮ್ಲಜನಕವನ್ನು ಸಾಗಿಸುವ ರಕ್ತನಾಳಗಳು ಮುಚ್ಚಿಹೋದಾಗ ಹೃದಯಾಘಾತ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ವಸ್ತುಗಳ ಶೇಖರಣೆಯಾದ ಪ್ಲೇಕ್‌ನ ಶೇಖರಣೆಯಿಂದ ಉಂಟಾಗುತ್ತದೆ. ಈ ಪ್ಲೇಕ್ ಒಡೆದಾಗ, ಅದು ರಕ್ತ ಹೆಪ್ಪುಗಟ್ಟುತ್ತದೆ. ಇದು ರಕ್ತವು ಹೃದಯ ಸ್ನಾಯುವನ್ನು ತಲುಪುವುದನ್ನು ತಡೆಯುತ್ತದೆ. ಆಗ ಹೃದಯಾಘಾತವಾಗುತ್ತದೆ.
ಹೃದಯಾಘಾತದ ಸಮಯದಲ್ಲಿ, ಸಾಮಾನ್ಯವಾಗಿ ಎದೆಯಲ್ಲಿ ನೋವು, ಬಿಗಿತ, ಒತ್ತಡ ಅಥವಾ ಎದೆ ಭಾರವಾದ ಅನುಭವವಾಗುತ್ತದೆ. ಈ ನೋವು ಎದೆಯಿಂದ ಪ್ರಾರಂಭವಾಗಿ ಎಡಗೈ, ಭುಜ, ಕುತ್ತಿಗೆ, ದವಡೆ, ಬೆನ್ನು ಅಥವಾ ಸೊಂಟಕ್ಕೆ ಹರಡಬಹುದು.
ಹೃದಯ ರೋಗ ತಜ್ಞ ಡಾ. ಬಿಮಲ್ ವಿವರಿಸುವಂತೆ ಹೃದಯಾಘಾತ ಎಂದರೆ ಅಪಧಮನಿಗಳಲ್ಲಿ ಬ್ಲೋಕೆಜ್ ಉಂಟಾಗುವುದು. ಈ ಬ್ಲೋಕೆಜ್ ತೆರವುಗೊಳಿಸಲು ಡಿಸ್ಪ್ರಿನ್, ಕ್ಲೋಪಿಡೋಗ್ರೆಲ್ ಮತ್ತು ಅಟೊರ್ವಾಸ್ಟಾಟಿನ್ (ಕೊಲೆಸ್ಟ್ರಾಲ್ ಔಷಧ) ಎಂಬ 3 ಔಷಧಿಗಳ ಸಂಯೋಜನೆಯನ್ನು ನೀಡಬೇಕು.
ಅಪಧಮನಿಯಲ್ಲಿ ರೂಪುಗೊಂಡ ಹೆಪ್ಪುಗಟ್ಟುವಿಕೆಯನ್ನು ಕರಗಿಸಲು, 1 ಡಿಸ್ಪ್ರಿನ್, 2 ಕ್ಲೋಪಿಡೋಗ್ರೆಲ್ ಮತ್ತು 1 ಅಟೊರ್ವಾಸ್ಟಾಟಿನ್ ಟ್ಯಾಬ್ಲೆಟ್ ಅನ್ನು ಅಗಿಯಬೇಕು ಅಥವಾ ನೀರಿನಲ್ಲಿ ಕರಗಿಸಿ ಕುಡಿಯಬೇಕು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ದೃಢೀಕರಿಸುವುದಿಲ್ಲ.