ಹೈದರಾಬಾದ್‌ನಲ್ಲಿ ಬಂಧನಕ್ಕೊಳಗಾದ ನಟ ಅಲ್ಲು ಅರ್ಜುನ್ ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?
ಪುಷ್ಪ 2 ಚಿತ್ರದ ಫಸ್ಟ್ ಶೋ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಪ್ರಕರಣದಲ್ಲಿ ಅರ್ಜುನ್‌ನನ್ನು ಬಂಧಿಸಲಾಗಿದ್ದು, ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಈ ವರದಿಯಲ್ಲಿ ಅಲ್ಲು ಅರ್ಜುನ್ ಅವರ ಆಸ್ತಿ ಮೌಲ್ಯ ಎಷ್ಟು ಎಂಬುದನ್ನು ತಿಳಿಸಿಕೊಡಲಿದ್ದೇವೆ. ವರದಿಯ ಪ್ರಕಾರ, ಅಲ್ಲು ಅರ್ಜುನ್ ಅವರು ಪುಷ್ಪಾ 2 ಚಿತ್ರಕ್ಕಾಗಿ ಬರೋಬ್ಬರಿ 300 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ ಭಾರತೀಯ ಸಿನಿರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ.
ಬ್ಲಾಕ್ ಬಸ್ಟರ್ ಸ್ಟಾರ್ ಸಿನಿಮಾಗಳನ್ನೇ ನೀಡುವ ಅಲ್ಲು ಅರ್ಜುನ್ ಸುಮಾರು 500 ಕೋಟಿ ರೂ. ಸಂಪತ್ತಿನ ಒಡೆಯ ಎನ್ನಲಾಗಿದೆ.
ಅಲ್ಲು ಕುಟುಂಬವು ಚಲನಚಿತ್ರ, ವ್ಯಾಪಾರ ಉದ್ಯಮಗಳು ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡಿವೆ. ಕುಟುಂಬದ ಪ್ರಮುಖರು ನಟ ಚಿರಂಜೀವಿ ಮತ್ತು ಅವರ ದಿವಂಗತ ಮಾವ, ಹಾಸ್ಯನಟ ಅಲ್ಲು ರಾಮಲಿಂಗಯ್ಯ ಸೇರಿದಂತೆ ಈ ಕುಟುಂಬವು ಬರೋಬ್ಬರಿ 6000 ಕೋಟಿ ಆಸ್ತಿಯನ್ನು ಹೊಂದಿದೆ. ಅದರಲ್ಲಿ ಅಲ್ಲು ಅರ್ಜುನ್ ಒಬ್ಬರ ಹೆಸರಲ್ಲೇ 500 ಕೋಟಿ ಸಂಪತ್ತು ಇದೆ ಎನ್ನಲಾಗುತ್ತಿದೆ.
ಏಪ್ರಿಲ್ 8, 1982 ರಂದು ಜನಿಸಿದ 42 ವರ್ಷದ ನಟ ಅಲ್ಲು ಅರ್ಜುನ್, 2014 ರಿಂದ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಆರು ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಮೂರು ನಂದಿ ಪ್ರಶಸ್ತಿಗಳನ್ನು ಒಳಗೊಂಡಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅವರನ್ನು ಭಾರತೀಯ ಚಿತ್ರರಂಗದ ಅತ್ಯುತ್ತಮ ಡ್ಯಾನ್ಸರ್‌ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದ್ದು, ಅವರನ್ನು ಜನಪ್ರಿಯವಾಗಿ "ಸ್ಟೈಲಿಶ್ ಸ್ಟಾರ್" ಮತ್ತು "ಐಕಾನ್ ಸ್ಟಾರ್" ಎಂದು ಕರೆಯಲಾಗುತ್ತದೆ.