ವಿಸ್ಕಿಯೊಂದಿಗೆ ಎಷ್ಟು ನೀರು ಬೆರೆಸಬೇಕು ಗೊತ್ತೆ..? 60, 90ಗೆ ಇಷ್ಟೇ ವಾಟರ್‌ ಹಾಕಬೇಕು, ಇಲ್ಲದಿದ್ದರೆ..

Whiskey facts : ಕೆಲವೊಮ್ಮೆ ಮದ್ಯಪಾನ ಮಾಡುವಾಗ, ಬಾಯಿಯ ಒಳಗೆ ಎಣ್ಣೆ ಹೋಗುತ್ತಿದ್ದಂತೆ.. ಕಹಿ ಕಹಿ ರುಚಿ ಬರುತ್ತವೆ. ಅದಕ್ಕಾಗಿಯೇ ವಿಸ್ಕಿ ಕುಡಿಯುವಾಗ ಅದಕ್ಕೆ ತಕ್ಕಷ್ಟು ನೀರನ್ನು ಸೇರಿಸುವುದು ಬಹಳ ಮುಖ್ಯ. ಹಾಗಿದ್ರೆ ಎಷ್ಟು ಎಣ್ಣೆಗೆ ಎಷ್ಟು ನೀರು ಹಾಕಬೇಕು..? ಬನ್ನಿ ನೋಡೋಣ..

1 /9

ಮದ್ಯಪಾನ ಮಾಡುವಾಗ ವಿಸ್ಕಿ ಜೊತೆ ಸರಿಯಾದ ಪ್ರಮಾಣದಲ್ಲಿ ನೀರು ಮಿಶ್ರಣ ಮಾಡಿಕೊಳ್ಳಲಿಲ್ಲ ಅಂದ್ರೆ ಅದು ಗಂಟಲಿಗೆ ಇಳಿಯುವುದಿಲ್ಲ. ಅಲ್ಲದೆ, ರುಚಿ ಸಹ ಕೆಡುತ್ತದೆ..

2 /9

ಯಾವ ಎಣ್ಣೆಗೆ ಎಷ್ಟು ನೀರು ಉತ್ತಮ ಅಂತ ಡೈಲಿ ಕುಡಿಯುವವರಿಗೂ ಗೊತ್ತಿಲ್ಲ. ಅದಕ್ಕೆ ಅವರಿಗೂ ಸಹ ವಿಸ್ಕಿ ಸರಿಯಾದ ರುಚಿ ಇನ್ನೂ ತಿಳಿದಿಲ್ಲ.. 

3 /9

ಕೆಲವರು ತಮ್ಮ ವಿಸ್ಕಿಗೆ ಹೆಚ್ಚು ನೀರು ಬೆರೆಸುತ್ತಾರೆ, ಇನ್ನು ಕೆಲವರು ಕಡಿಮೆ, ಇನ್ನು ಕೆಲವರು ಐಸ್ ಜೊತೆ ವಿಸ್ಕಿ ಕುಡಿಯುತ್ತಾರೆ. ಆದರೆ ವಿಸ್ಕಿಯ ಸರಿಯಾದ ಪರಿಮಳ, ರುಚಿ ತಿಳಿಯಬೇಕು ಅಂದ್ರೆ ಅದಕ್ಕೆ ಎಷ್ಟು ಪ್ರಮಾಣದ ನೀರನ್ನು ಬೆರೆಸಬೇಕು ಎನ್ನವುದು ತಿಳಿದಿರಬೇಕು..

4 /9

ಇತ್ತೀಚೆಗೆ, ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ, ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಮತ್ತು ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಆಹಾರ ವಿಜ್ಞಾನಿಗಳು ವಿಸ್ಕಿ ಮತ್ತು ನೀರಿನ ಸರಿಯಾದ ಅನುಪಾತದ ಬಗ್ಗೆ ಸಂಶೋಧನೆ ನಡೆಸಿದರು.

5 /9

ಈ ಅಧ್ಯಯನವು ಬೌರ್ಬನ್, ಸಿಂಗಲ್ ಮಾಲ್ಟ್, ಸ್ಕಾಚ್ ಮತ್ತು ಐರಿಶ್ ವಿಸ್ಕಿ ಸೇರಿದಂತೆ 25 ವಿವಿಧ ರೀತಿಯ ವಿಸ್ಕಿಯ ಮೇಲೆ ಅಧ್ಯಯನ ನಡೆಸಿತು. 

6 /9

ಈ ಅಧ್ಯಯನವು ಬೌರ್ಬನ್, ಸಿಂಗಲ್ ಮಾಲ್ಟ್, ಸ್ಕಾಚ್ ಮತ್ತು ಐರಿಶ್ ವಿಸ್ಕಿ ಸೇರಿದಂತೆ 25 ವಿವಿಧ ರೀತಿಯ ವಿಸ್ಕಿಯ ಮೇಲೆ ಅಧ್ಯಯನ ನಡೆಸಿತು. 

7 /9

ಈ ಅಧ್ಯಯನದ ಪ್ರಕಾರ, 80% ವಿಸ್ಕಿ ಮತ್ತು 20% ನೀರು ಪರಿಪೂರ್ಣ ಮಿಶ್ರಣವೆಂದು ಪರಿಗಣಿಸಲಾಗಿದೆ. ಈ ಮಟ್ಟದಲ್ಲಿ, ವಿಸ್ಕಿಯ ಮೂಲ ಪರಿಮಳವನ್ನು ಕಾಪಾಡಿಕೊಳ್ಳಲಾಗುತ್ತದೆ ಮತ್ತು ಅದು ತುಂಬಾ ಸೌಮ್ಯವಾಗುವುದಿಲ್ಲ. ಸಂಶೋಧಕರ ಪ್ರಕಾರ, 60 ಮಿಲಿ ವಿಸ್ಕಿಯೊಂದಿಗೆ 12 ಮಿಲಿ ನೀರನ್ನು ಬೆರೆಸುವುದು ಉತ್ತಮ ಎಂದು ತಿಳಿದು ಬಂತು.

8 /9

ನೀವು ವಿಸ್ಕಿಯ ನಿಜವಾದ ರುಚಿಯನ್ನು ಅನುಭವಿಸಲು ಬಯಸಿದರೆ, 12 ಮಿಲಿ ನೀರನ್ನು 60 ಮಿಲಿ ವಿಸ್ಕಿಯೊಂದಿಗೆ ಬೆರೆಸಿ. ಹೆಚ್ಚು ನೀರು ಸೇರಿಸುವುದರಿಂದ ವಿಸ್ಕಿ ತನ್ನ ಮೂಲ ಪರಿಮಳವನ್ನು ಕಳೆದುಕೊಳ್ಳಬಹುದು.

9 /9

(ಗಮನಿಸಿ: ಮೇಲಿನ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ, Zee Kannada News ಮದ್ಯಪಾನವನ್ನು ಅನುಮೋದಿಸುವುದಿಲ್ಲ ಅಥವಾ ಪ್ರೋತ್ಸಾಹಿಸುವುದಿಲ್ಲ. ನಿಮಗೆ ಮಾಹಿತಿಯನ್ನು ಒದಗಿಸುವುದು ನಮ್ಮ ಉದ್ದೇಶ.. ಆದಷ್ಟು ಕುಡಿತವನ್ನು ಬಿಟ್ಟು ಬಿಡಿ)