ಗರ್ಭಿಣಿಯಾಗಿದ್ದ ನಟಿ ಸೌಂದರ್ಯ ಕೊನೆಯ ಆಸೆ ಏನಾಗಿತ್ತು ಗೊತ್ತೆ..! ಆ 2 ವಿಷಯಗಳನ್ನು ಕೇಳಿದ್ರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ..

Actress Soundarya : ಖ್ಯಾತ ನಟಿ ಸೌಂದರ್ಯ 20 ವರ್ಷಗಳ ಹಿಂದೆ ನಿಧನರಾದರು. ಅವರ ಅತ್ತಿಗೆ ಅವರು ಸಾಯುವ ಮುನ್ನ ಹೇಳಿದ ಕೊನೆಯ ವಿಷಯಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.. ಆ ವಿಷಯಗಳನ್ನು ಕೇಳಿದ್ರೆ ನಿಮ್ಮ ಕಣ್ಣಲ್ಲಿ ಕಣ್ಣೀರು ಬರೋದಂತು ನಿಜ..

1 /5

ನಟಿ ಸೌಂದರ್ಯ 20 ವರ್ಷಗಳ ಹಿಂದೆಯೇ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡವರು. ಇವರ ನಿಜವಾದ ಹೆಸರು ಸೌಮ್ಯ. ಕನ್ನಡಕ್ಕಿಂತಲೂ ಹೆಚ್ಚಾಗಿ ತಮಿಳು ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.. 2004 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದರು. ನಟಿ ಸಾಯುವ ಮುನ್ನ ತಮ್ಮ ಅತ್ತಿಗೆ ಕೇಳಿದ ಕೊನೆಯ ಆಸೆ ಇದೀಗ ವೈರಲ್‌ ಆಗುತ್ತಿದೆ.

2 /5

ನಟಿ ಸೌಂದರ್ಯ ಅವರು ಅತಿ ಕಡಿಮೆ ಅವಧಿಯಲ್ಲಿ ನೂರಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಟಾರ್‌ ಪಟ್ಟ ಪಡೆದರು.. ನಟಿ ತಮ್ಮ 12 ವರ್ಷಗಳ ಚಿತ್ರರಂಗದ ವೃತ್ತಿಜೀವನದಲ್ಲಿ ಸುಮಾರು 100 ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಚಿತ್ರರಂಗದಲ್ಲಿ ಮಿಂಚುತ್ತಲೇ ಬಿಜೆಪಿಗೆ ಸೇರಿ ಪಕ್ಷವನ್ನು ಬೆಂಬಲಿಸಿ ಪ್ರಚಾರ ಆರಂಭಿಸಿದರು.

3 /5

ಏಪ್ರಿಲ್ 17, 2004 ರಂದು, ಸೌಂದರ್ಯ ತನ್ನ ಸಹೋದರ ಅಮರನಾಥ್ ಜೊತೆಗೆ ಬೆಂಗಳೂರಿನಿಂದ ತೆಲಂಗಾಣಕ್ಕೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆ ಸಮಯದಲ್ಲಿ, ವಿಮಾನದಲ್ಲಿ ಉಂಟಾದ ದೋಷದಿಂದ ಅಪಘಾತ ಉಂಟಾಯಿತು. ಘಟನೆಯಲ್ಲಿ ಸೌಂದರ್ಯ ಮತ್ತು ಅವರ ಸಹೋದರ ಕೂಡ ಸಾವನ್ನಪ್ಪಿದರು. ಈ ಘಟನೆ ಇಡೀ ದಕ್ಷಿಣ ಭಾರತವನ್ನೇ ಬೆಚ್ಚಿಬೀಳಿಸಿತು.

4 /5

ಸೌಂದರ್ಯ ನಿಧನರಾಗಿ ಸುಮಾರು 20 ವರ್ಷಗಳಾಗಿವೆ. ಈ ಮಧ್ಯೆ, ಕೆಲವು ತಿಂಗಳ ಹಿಂದೆ, ಸೌಂದರ್ಯ ಅವರ ಸಹೋದರನ ಪತ್ನಿ (ಅತ್ತಿಗೆ) ಸಂದರ್ಶನಕ್ಕೆ ಹಾಜರಾಗಿದ್ದರು. ಆ ಸಮಯದಲ್ಲಿ, ಸೌಂದರ್ಯ ಸಾಯುವ ಮೊದಲು ಎರಡು ವಸ್ತುಗಳನ್ನು ಕೇಳಿದ್ದರು ಎಂದು ಅವರು ಹೇಳಿದರು.

5 /5

ಸೌಂದರ್ಯ ನನಗೆ ಆಪ್ತ ಸ್ನೇಹಿತೆಯಂತಿದ್ದರು, ಅವರು ಸಾಯುವ ಕೆಲವು ದಿನಗಳಿಗೂ ಮುನ್ನ, ನನ್ನ ಬಳಿ ಕಾಟನ್‌ ಸೀರೆ ಮತ್ತು ಕೇಸರಿ ಬಣ್ಣದ ಸೀರೆ ಕೇಳಿದ್ದರು ಅಂತ ತಿಳಿಸಿದರು... 7 ತಿಂಗಳ ಗರ್ಭಿಣಿಯಾಗಿದ್ದ ಸೌಂದರ್ಯ ಆಸೆಪಟ್ಟು ಕೇಳಿದ್ದ ಸೀರೆಯನ್ನ ಮುಟ್ಟದೇ ಸಾವನ್ನಪ್ಪಿದ್ದು ಮಾತ್ರ ದುರಾದೃಷ್ಟ.. ಸಾಯುವ ಮುನ್ನ ಗರ್ಭಿಣಿಯಾಗಿದ್ದರು ಎನ್ನುವ ಮಾತು ಕೇಳಿದ್ರೆ ಕರುಳು ಚುರುಕ್‌ ಎನ್ನುತ್ತೆ..