ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಶಾಕ್! ಈ ವಾರ ಹೊರ ಬರುವ ಇಬ್ಬರು ಸ್ಪರ್ಧಿಗಳು ಇವರೇ..?
bigg boss kannada 11 elimination: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಶಾಕ್ ಕಾದಿದ್ದು, ಇಬ್ಬರು ಸ್ಪರ್ಧಿಗಳು ಆಚೆ ಬರಬಹುದು ಎನ್ನಲಾಗುತ್ತಿದೆ.
ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಿನ ಕಳೆದಂತೆ ಸ್ನೇಹಿತರು ಶತ್ರುಗಳಾಗುತ್ತಿದ್ದಾರೆ. ಈ ರೋಚಕತೆಯ ನಡುವೆ ಬಿಗ್ ಶಾಕ್ ಕೂಡ ಕಾದಿದೆ ಎನ್ನಲಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಶಿಶಿರ್, ಮೋಕ್ಷಿತಾ, ಚೈತ್ರಾ, ಹನುಮಂತ, ರಜತ್, ಧನರಾಜ್, ಭವ್ಯಾ ಮತ್ತು ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಡಬಲ್ ಎಲಿಮಿನೇಷನ್ ನಡೆಯಲಿದ್ದು, ಇವರಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಡಬಲ್ ಎಲಿಮಿನೇಷನ್ ನಡೆಯುವ ಅನುಮಾನ ಹುಟ್ಟಲು ಒಂದಷ್ಟು ಕಾರಣಗಳೂ ಇವೆ. ಕಳೆದ ಎರಡು ವಾರದಿಂದ ಬಿಗ್ ಬಾಸ್‌ನಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ.
ಒಂದು ವಾರ ಶೋಭಾ ಶೆಟ್ಟಿ ಶೋ ಕ್ವಿಟ್ ಮಾಡಿದರು. ಆ ವಾರದಲ್ಲಿ ಐಶ್ವರ್ಯಾ ಮತ್ತು ಶಿಶಿರ್ ಇಬ್ಬರಲ್ಲಿ ಒಬ್ಬರು ಮನೆಯಿಂದ ಆಚೆ ಬರಬೇಕಿತ್ತು. ಆದರೆ ಶೋಭಾ ನಿರ್ಧಾರದಿಂದ ಇಬ್ಬರೂ ಸೇಫ್ ಆದರು.
ಕಳೆದ ವಾರ ವೋಟಿಂಗ್ ಲೈನ್ಸ್ ಓಪನ್ ಆಗಿರಲಿಲ್ಲ. ಈ ಕಾರಣದಿಂದ ಎಲಿಮಿನೇಷನ್ ನಡೆಯಲಿಲ್ಲ.
ಐಶ್ವರ್ಯಾ ಮತ್ತು ಚೈತ್ರಾ ಹೆಸರನ್ನು ಕೊನೆಗೆ ತೆಗೆದುಕೊಂಡ ಸುದೀಪ್.. ಚೈತ್ರಾ ಅವರನ್ನು ಸೀಕ್ರೇಟ್ ರೂಮ್‌ಗೆ ಕಳಿಸಿದರು.
ಸತತ ಎರಡು ವಾರದಿಂದ ಬಿಗ್ ಬಾಸ್‌ನಲ್ಲಿ ಎಲಿಮಿನೇಷನ್ ನಡೆಯದ ಹಿನ್ನೆಲೆ ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ.
ಶಿಶಿರ್, ಮೋಕ್ಷಿತಾ, ಚೈತ್ರಾ, ಹನುಮಂತ, ರಜತ್, ಧನರಾಜ್, ಭವ್ಯಾ ಮತ್ತು ತ್ರಿವಿಕ್ರಮ್ ಇವರಲ್ಲಿ ಯಾರು ಕಡಿಮೆ ವೋಟ್ ಪಡೆದಿರುತ್ತಾರೋ ಆ ಇಬ್ಬರು ಮನೆಯಿಂದ ಆಚೆ ಬರಬಹುದು ಎನ್ನಲಾಗುತ್ತಿದೆ