ವೇತನ ಹೆಚ್ಚಳ

  • Nov 29, 2024, 10:05 AM IST
1 /9

8ನೇ ವೇತನ ಆಯೋಗದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಈ ವೇತನ ಸಮಿತಿಯು ರಚನೆಯಾಗುವ ಕಾಲ ಹತ್ತಿರವಾಗಿದೆ. 

2 /9

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಹೊರ ಬೀಳುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.  

3 /9

ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಆರ್ಗನೈಸೇಷನ್ಸ್ (NC-JCM) ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು 2.86 ರ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಲೆಕ್ಕ ಹಾಕಬೇಕು ಎಂದು ಪ್ರಸ್ತಾಪಿಸಿದೆ. ಇದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ, ಇತ್ತೀಚಿನ ವರದಿಗಳ ಪ್ರಕಾರ ವೇತನವು 2.86 ಪಟ್ಟು ಹೆಚ್ಚಾಗುತ್ತದೆ.

4 /9

ವೇತನ ಮತ್ತು ಪಿಂಚಣಿಗಳನ್ನು ಲೆಕ್ಕಾಚಾರ ಮಾಡಲು 'ಫಿಟ್ಮೆಂಟ್ ಫ್ಯಾಕ್ಟರ್' ಅನ್ನು  ಬಳಸಲಾಗುತ್ತದೆ. 7ನೇ ವೇತನ ಆಯೋಗದ ನಿಯಮಗಳ ಪ್ರಕಾರ ಫಿಟ್‌ಮೆಂಟ್ ಅಂಶವನ್ನು 2.57ಕ್ಕೆ ನಿಗದಿಪಡಿಸಲಾಗಿತ್ತು. ಇದರಿಂದ ಮೂಲ ವೇತನ 7,000ದಿಂದ 18,000ಕ್ಕೆ ಏರಿಕೆಯಾಗಿದೆ.

5 /9

2.86ರ ಫಿಟ್ ಮೆಂಟ್ ಅಂಶ ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ರೂ.18,000ದಿಂದ ರೂ.51,480ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ಭಾರಿ ವೇತನ ಹೆಚ್ಚಳವಾಗಲಿದೆ.

6 /9

8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ ಬದಲಾವಣೆಯಾದರೆ ನಿವೃತ್ತ ನೌಕರರ ಮೇಲೂ ಪರಿಣಾಮ ಬೀರಲಿದೆ.2.86ರ ಫಿಟ್‌ಮೆಂಟ್ ಅಂಶ ಜಾರಿಗೆ ಬಂದರೆ ಪಿಂಚಣಿದಾರರ ಮೂಲ ಪಿಂಚಣಿ 25,740 ರೂಪಾಯಿಗೆ ಏರುತ್ತದೆ.  

7 /9

ಕೇಂದ್ರ ಸರ್ಕಾರವು ಮುಂದಿನ ವರ್ಷ ಏಪ್ರಿಲ್‌ನಿಂದ ಏಕೀಕೃತ ಪಿಂಚಣಿ ಯೋಜನೆಯನ್ನು (ಯುಪಿಎಸ್) ಪರಿಚಯಿಸುವ ನಿರೀಕ್ಷೆಯಿದೆ. ಯುಪಿಎಸ್ ಅಡಿಯಲ್ಲಿ, ನಿವೃತ್ತಿಯ ಹಿಂದಿನ 12 ತಿಂಗಳುಗಳಲ್ಲಿ ಉದ್ಯೋಗಿಯ ವೇತನವನ್ನು ಆಧರಿಸಿ ಪಿಂಚಣಿಯನ್ನು ಲೆಕ್ಕಹಾಕಲಾಗುತ್ತದೆ.

8 /9

ಸಾಮಾನ್ಯವಾಗಿ, ವೇತನ ಆಯೋಗವನ್ನು 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ. 7ನೇ ವೇತನ ಆಯೋಗವನ್ನು 2014ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, 2016ರಲ್ಲಿ ಜಾರಿಗೆ ಬಂದಿದೆ. ಹಾಗೆ ನೋಡಿದರೆ 2026ರಲ್ಲಿ 8ನೇ ಉತ್ತರ ಆಯೋಗ ಜಾರಿಯಾಗಬೇಕಾದರೆ ಈಗಲೇ ಅಧಿಸೂಚನೆ ಬರುವುದು ಬಹಳ ಮುಖ್ಯ.  

9 /9

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 2025 ರಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ನಂತರ ಅವರು 8ನೇ ವೇತನ ಆಯೋಗದ ರಚನೆಯನ್ನು ಘೋಷಿಸುವ ನಿರೀಕ್ಷೆಯಿದೆ. ಈ ಘೋಷಣೆಗೆ ಬಜೆಟ್ ಸರಿಯಾದ ಸಮಯ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.