ರಾತ್ರಿ ಮಲಗುವ ಮುನ್ನ ಬಿಸಿನೀರಿಗೆ ಈ ಬೀಜ ಹಾಕಿ ಕುಡಿಯಿರಿ!ಹೊರಗೆ ಚಾಚಿಕೊಂಡಿರುವ ಹೊಟ್ಟೆ ವಾರದಲ್ಲಿ ಚಪ್ಪಟೆಯಾಗುವುದು!

Written ByRanjitha R KUpdated byRanjitha R K
Published: Jun 03, 2025, 11:48 AM IST|Updated: Jun 03, 2025, 11:53 AM IST

ರಾತ್ರಿ ಮಲಗುವ ಮುನ್ನ ಕೆಲವು ಮಸಾಲೆಗಳು ಮತ್ತು ಬೀಜಗಳನ್ನು ಬೆರೆಸಿದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕರಗಿ ಹೊಟ್ಟೆ ಚಪ್ಪಟೆಯಾಗುತ್ತದೆ. 
 

best home remedy to loose belly fat1/6

ಸೊಂಪಿನ ನೀರು : ಸೊಂಪಿನ ನೀರು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರ ಜೊತೆಗೆ, ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಜೊತೆಗೆ ಇದು ಪಿಸಿಓಎಸ್ ನಂತಹ ಕಾಯಿಲೆಗಳ ಲಕ್ಷಣಗಳಿಂದ ಕೂಡಾ ಪರಿಹಾರ ಒದಗಿಸುತ್ತದೆ.   

best home remedy to loose belly fat2/6

ಮೆಂತ್ಯೆ ನೀರು : ಮೆಂತ್ಯೆ ಬೊಜ್ಜು ಕಡಿಮೆ ಮಾಡುವ ಔಷಧ. ರಾತ್ರಿ ಮಲಗುವ ಮುನ್ನ ಮೆಂತ್ಯೆ  ನೀರನ್ನು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ದುಂಡಗಿರುವ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡಲು ಇಸು ಸಹಾಯ ಮಾಡುತ್ತದೆ. ಇದಕ್ಕಾಗಿ 2 ಟೀ ಚಮಚ ಮೆಂತ್ಯೆ ಬೀಜಗಳನ್ನು ಒಂದು ಲೋಟ ನೀರಿನಲ್ಲಿ 6-8 ಗಂಟೆಗಳ ಕಾಲ ನೆನೆಸಿ, ನಂತರ ಕುದಿಸಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು. 

best home remedy to loose belly fat3/6

ಅರಿಶಿನ ನೀರು : ಅರಿಶಿನ ಪುಡಿಯನ್ನು ನೀರಿನಲ್ಲಿ ಕರಗಿಸಿ ಕುದಿಸಿ ಕುಡಿಯಬೇಕು. ಹಸಿ ಅರಿಶಿನವನ್ನು ಪುಡಿಮಾಡಿ ನೀರಿನಲ್ಲಿ ಹಾಕಿ ಕುದಿಸಬಹುದು. ಈ ಪಾನೀಯವು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ಈ ಪಾನೀಯವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ.

best home remedy to loose belly fat4/6

ಜೀರಿಗೆ ನೀರು : ರಾತ್ರಿ ಮಲಗುವ ಮುನ್ನ ಜೀರಿಗೆ ನೀರು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರದ ನಾರಿನ ಜೊತೆಗೆ, ಜೀರಿಗೆಯಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಕಂಡುಬರುತ್ತವೆ. ಈ ಎಲ್ಲಾ ಅಂಶಗಳು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

best home remedy to loose belly fat5/6

ಶುಂಠಿ ನೀರು : ಶುಂಠಿ ನೀರು ಕುಡಿಯುವುದರಿಂದ ಆಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ. ಇದು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.ಶುಂಠಿ ನೀರು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆಯೂ ಹೆಚ್ಚಾಗುತ್ತದೆ.  ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. 

best home remedy to loose belly fat6/6

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.