ಪ್ರತಿದಿನ ಈ 5 ಪಾನೀಯಗಳನ್ನು ಕುಡಿದರೆ ಬಲೂನ್ ರೀತಿ ಊದಿರುವ ಹೊಟ್ಟೆ ಚಪ್ಪಟೆಯಾಗೋದು ಪಕ್ಕಾ!

Written ByYashaswini V
Published: Nov 05, 2025, 01:22 PM IST|Updated: Nov 05, 2025, 01:22 PM IST

Weight Loss Tips: ತೂಕ ಹೆಚ್ಚಳ, ಸ್ಥೂಲಕಾಯತೆಯಿಂದ ಬಳಲುತ್ತಿರುವವರ ಸಾಮಾನ್ಯವಾದ ವಾದವೆಂದರೆ ನಾವು ಏನೇ ಮಾಡಿದರೂ ತೂಕ ಇಳಿಕೆ ಆಗುತ್ತಲೇ ಇಲ್ಲ ಎಂಬುದಾಗಿದೆ. ಆದರೆ, ಮನೆಯಲ್ಲಿಯೇ ತಯಾರಿಸಬಹುದಾದ ಕೆಲವು ಪಾನೀಯಗಳ ಸಹಾಯದಿಂದ ಸುಲಭವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು.

Best Weight Loss Drinks1/6

ತೂಕ ಇಳಿಕೆ ಪಾನೀಯಗಳು

ಕಠಿಣ ಆಹಾರ ಪದ್ಧತಿ ಅನುಸರಿಸುವುದು, ಜಿಮ್, ವ್ಯಾಯಾಮ ಮಾಡಿದರೂ ತೂಕ ಇಳಿಕೆ ಆಗುತ್ತಲೇ ಇಲ್ಲ. ಹೊಟ್ಟೆಯ ಬೊಜ್ಜು ಕರಗುತ್ತಲೇ ಇಲ್ಲ ಎಂದು ಹೇಳುವವರೇ ಹೆಚ್ಚು. ಆದರೆ, ಪ್ರತಿದಿನ ಐದು ರೀತಿಯ ಪಾನೀಯಗಳನ್ನು ಕುಡಿಯುವುದರಿಂದ ನೀವು ಸುಲಭವಾಗಿ ತೂಕ ಇಳಿಸಬಹುದು. ಅಂತಹ ಪಾನೀಯಗಳ ಬಗ್ಗೆ ಇಲ್ಲಿದೆ ಮಾಹಿತಿ.

Best Weight Loss Drinks2/6

ಮೆಂತ್ಯ ನೀರು

ಒಂದು ಸ್ಪೂನ್ ಮೆಂತ್ಯ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ನೆನೆಸಿಟ್ಟ ಮೆಂತ್ಯ ಬೀಜಗಳನ್ನು ಹಾಗೆಯೇ ಜಗಿದು ತಿನ್ನುವುದರಿಂದ ಕೆಲವೇ ದಿನಗಳಲ್ಲಿ ತೂಕ ಕಡಿಮೆಯಾಗುತ್ತದೆ.   

Best Weight Loss Drinks3/6

ಜೀರಿಗೆ ನೀರು

ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಜೀರಿಗೆ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಸ್ವಲ್ಪ ಬಿಸಿ ಮಾಡಿ ಶೋಧಿಸಿ ಕುಡಿಯಿರಿ. ಇದು ಹೊಟ್ಟೆಯಲ್ಲಿ ಜಟಿಲವಾಗಿರುವ ಕೊಬ್ಬನ್ನು ಕರಗಿಸಿ ಚಪ್ಪಟೆಯಾದ ಬೆಲ್ಲಿ ಪಡೆಯಲು ಸಹಕಾರವಾಗಿದೆ. 

Best Weight Loss Drinks4/6

ಮಜ್ಜಿಗೆ

ಪ್ರತಿದಿನ ಮಧ್ಯಾಹ್ನ ಊಟ ಮಾಡಿದ ಬಳಿಕ ಮಜ್ಜಿಗೆಯಲ್ಲಿ ಸ್ವಲ್ಪ ಇಂಗು ಸೇರಿಸಿ ಅದನ್ನು ಹೆಚ್ಚಾಗಿ ಕಡೆದು ಕುಡಿಯಿರಿ. ಇದು ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. 

Best Weight Loss Drinks5/6

ಗ್ರೀನ್ ಟೀ

ಸಂಜೆ ವೇಳೆ ನಾರ್ಮಲ್ ಕಾಫಿ, ಟೀ ಕುಡಿಯುವ ಬದಲಿಗೆ ಗ್ರೀನ್ ಟೀ ಕುಡಿಯುವುದರಿಂದ ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಮುಖ್ಯವಾಗಿ ತೂಕ ಇಳಿಸಿಕೊಳ್ಳು ಬಯಸುವವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ.

Best Weight Loss Drinks6/6

ದಾಲ್ಚಿನ್ನಿ ಟೀ

ರಾತ್ರಿ ಮಲಗುವ ಮೊದಲು ದಾಲ್ಚಿನ್ನಿ ಚಹಾ ತಯಾರಿಸಿ ಕುಡಿಯುವುದರಿಂದ ದೇಹದಲ್ಲಿ ಬೇಡದ ಹೆಚ್ಚುವರಿಯಾಗಿ ಶೇಖರವಾಗಿರುವ ಕೊಬ್ಬನ್ನು ಸುಡಲು ಇದು ಪರಿಣಾಮಕಾರಿ ಆಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.