ಮಲಗುವ ಅರ್ಧ ಗಂಟೆ ಮುನ್ನ ಈ ನೀರು ಕುಡಿಯಿರಿ: ದಿಂಬಿಗೆ ತಲೆಕೊಟ್ಟಂತೆ ಆವರಿಸುವುದು ಗಾಢನಿದ್ದೆ! ಯಾವತ್ತೂ ನಿದ್ರಾಹೀನತೆ ಕಾಡಲ್ಲ
ದಾಳಿಂಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಾಳಿಂಬೆ ಮಾತ್ರವಲ್ಲದೆ ಅದರ ಎಲೆಗಳು ಕೂಡ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಾಳಿಂಬೆ ಬೀಜಗಳಲ್ಲಿ ಹಲವಾರು ಪೋಷಕಾಂಶಗಳು ಮತ್ತು ಹಲವಾರು ಆರೋಗ್ಯ ಪ್ರಯೋಜನಗಳಿವೆ.
ದಾಳಿಂಬೆ ಎಲೆಗಳು ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ನಮ್ಮಲ್ಲಿ ಅನೇಕರಿಗೆ ಈ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಈ ಎಲೆಗಳನ್ನು ಸೇವಿಸುವುದರಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳಿವೆ. ಎಲೆಗಳು ಮತ್ತು ದಾಳಿಂಬೆ ತೊಗಟೆಯನ್ನು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಪರಿಹಾರವಾಗಿ ಬಳಸಲಾಗುತ್ತದೆ.
ಒಂದು ಪಾತ್ರೆಗೆ ಒಂದು ಲೋಟ ನೀರು ಹಾಕಿ ಅದಕ್ಕೆ ದಾಳಿಂಬೆ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಪಕ್ಕಕ್ಕೆ ಇಡಿ. ಈ ನೀರನ್ನು ಸೋಸಿ ಬೆಳಗ್ಗೆ ಮತ್ತು ಸಂಜೆ ಸೇವಿಸಿದರೆ ಕೆಮ್ಮು ಮತ್ತು ನೆಗಡಿ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ನಿದ್ರಾಹೀನತೆಯಿಂದ ಬಳಲುತ್ತಿರುವವರು, ಮಲಗುವ ಅರ್ಧ ಗಂಟೆ ಮೊದಲು ದಾಳಿಂಬೆ ಎಲೆಯ ಈ ಕಷಾಯ ಕುಡಿದರೆ, ಯಾವುದೇ ಒತ್ತಡವಿಲ್ಲದೆ ನಿದ್ರೆ ಆವರಿಸುತ್ತದೆ.
ಮೇಲಾಗಿ ಅಧಿಕ ತೂಕ, ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯೂ ದೂರವಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತ್ವಚೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಬಾಯಿ ಸಮಸ್ಯೆಯೂ ನಿವಾರಣೆಯಾಗುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಯೂ ಕಡಿಮೆಯಾಗುತ್ತದೆ. ದಾಳಿಂಬೆ ಹಣ್ಣುಗಳು ಆರೋಗ್ಯಕ್ಕೂ ಒಳ್ಳೆಯದು.
ಸೂಚನೆ: ಅಂತರ್ಜಾಲದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಈ ಸುದ್ದಿಯನ್ನು ಪ್ರಕಟಿಸುತ್ತಿದ್ದೇವೆ. ಪ್ರಯತ್ನಿಸುವ ಮೊದಲು ಸಂಬಂಧಿತ ತಜ್ಞರ ಸಲಹೆಯನ್ನು ಅನುಸರಿಸಿ. ನಂತರದ ಯಾವುದೇ ಪರಿಣಾಮಗಳಿಗೆ ಜೀ ಕನ್ನಡ ನ್ಯೂಸ್ ಜವಾಬ್ದಾರನಾಗಿರುವುದಿಲ್ಲ.