ಸತತ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆ ಕಂಡಿದೆ. ಭವಿಷ್ಯದ ಮಾರುಕಟ್ಟೆಯಲ್ಲಿ ಚಿನ್ನ ತೀವ್ರವಾಗಿ ಕುಸಿದಿದೆ.
1/7ಚಿನ್ನದ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಫ್ಯೂಚರ್ಸ್ ಮಾರುಕಟ್ಟೆಯಲ್ಲಿ ಚಿನ್ನ ತೀವ್ರವಾಗಿ ಕುಸಿದಿದೆ.
2/7ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಭಾರೀ ಮಟ್ಟದಲ್ಲಿ ಇಳಿಕೆ ಕಾಣಲಿದೆ. ಚಿನ್ನದ ಪೂರೈಕೆ ಹೆಚ್ಚುತ್ತಿರುವುದೇ ಇದಕ್ಕೆ ಕಾರಣವಾಗಿರಲಿದೆ. ಒಂದು ಅಂದಾಜಿನ ಪ್ರಕಾರ ಚಿನ್ನದ ಬೆಲೆ ಮತ್ತೆ 60 ಸಾವಿರ ಆಸುಪಾಸಿಗೆ ತಲುಪಿದರೂ ಆಶ್ಚರ್ಯ ಇಲ್ಲ.
3/7ಇದೀಗ ಈ ಅಂದಾಜಿನ ಪ್ರಕಾರವೇ ದಿನೇ ದಿನೇ ಬಂಗಾರದ ಬೆಲೆಯಲ್ಲಿಯೂ ಕುಸಿತ ದಾಖಲಾಗುತ್ತಿದೆ. ಆಭರಣ ಖರೀದಿಸಬೇಕು ಎನ್ನುವವರಿಗೆ ಇದು ಖಂಡಿತವಾಗಿಯೂ ಶುಭ ಸುದ್ದಿ.
4/7ಭಾರತೀಯ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ (MCX) ಚಿನ್ನವು 843 ರೂ.ಗಳಷ್ಟು ಕುಸಿದು 96,330 ಕ್ಕೆ ವಹಿವಾಟು ನಡೆಸುತ್ತಿದೆ. ಆಗಸದೆತ್ತರಕ್ಕೆ ಹಾರಿದ ಬೆಳ್ಳಿ ಬೆಲೆ ಕೂಡಾ ಇಂದು ಕೆಳಗಿಳಿದಿದೆ. ಬೆಳ್ಳಿ ದರದಲ್ಲಿ 455 ರೂ.ಗಳಷ್ಟು ಕುಸಿತ ದಾಖಲಾಗಿದೆ.
5/7ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್‌ನ ಪ್ರಕಾರ ಇಂದು ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ 24 KT(999)- 9,601 22 KT - 9,370, 20 KT - 8,545, 18 KT -7,776, 14 KT - 6,192 ರಷ್ಟಿದೆ.
6/7ಜಾಗತಿಕ ಮಾರುಕಟ್ಟೆಯಲ್ಲಿ, ಚಿನ್ನವು ಪ್ರತಿ ಔನ್ಸ್‌ಗೆ 3350 ಡಾಲರ್ ಗಿಂತ ಕಡಿಮೆಯಿದ್ದರೆ, ಬೆಳ್ಳಿ 14 ವರ್ಷಗಳ ಗರಿಷ್ಠ 37 ಡಾಲರ್ ತಲುಪಿದೆ. ಸರಕು ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ, ಕಚ್ಚಾ ತೈಲ ಬೆಲೆಗಳು ಸತತ ನಾಲ್ಕನೇ ದಿನವೂ ಏರಿಕೆಯಾಗಿದೆ.
7/7ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿ ಎಷ್ಟಿದೆ ಎನ್ನುವುದನ್ನು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು.