ಧನಕಾರಕ ಶುಕ್ರ, ಕರ್ಮಫಲದಾತ ಶನಿಯಿಂದ ವಿಶೇಷ ದೃಷ್ಟಿ ಯೋಗ: ಇಂದಿನಿಂದ ಈ ರಾಶಿಯವರ ಬಾಳೇ ಬಂಗಾರ, ಗೋಲ್ಡನ್ ಟೈಮ್ ಆರಂಭ

Written ByYashaswini VUpdated byYashaswini V
Published: Apr 25, 2025, 07:12 AM IST|Updated: Apr 25, 2025, 07:12 AM IST

Venus Saturn Conjunction: ಜ್ಯೋತಿಷ್ಯದಲ್ಲಿ ಐಷಾರಾಮಿ ಜೀವನಕಾರಕ ಎಂದು ಪರಿಗಣಿಸಲಾಗಿರುವ ಶುಕ್ರ, ಕರ್ಮಫಲದಾತ ಶನಿಯಿಂದ ವಿಶೇಷ ಯೋಗವೊಂದು ನಿರ್ಮಾಣವಾಗುತ್ತಿದೆ. 

Venus Saturn Conjunction Effects1/6

ಏಪ್ರಿಲ್ 25, 2025 ಮುಂಜಾನೆ 05:25ರ ಸುಮಾರಿಗೆ ಧನಕಾರಕ ಶುಕ್ರ ನ್ಯಾಯದ ದೇವರು ಶನಿಯಿಂದಾಗಿ ದೃಷ್ಟಿಯೋಗ ನಿರ್ಮಾಣವಾಗಿದೆ. ಶುಕ್ರ ಶನಿಯಿಂದ ನಿರ್ಮಾಣವಾಗಿರುವ ಈ ವಿಶೇಷ ಯೋಗದಿಂದ ಕೆಲವು ರಾಶಿಯವರ ಬದುಕಿನಲ್ಲಿ ಗೋಲ್ಡನ್ ಟೈಮ್ ಆರಂಭವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

Taurus2/6

ವೃಷಭ ರಾಶಿ:  ದೃಷ್ಟಿಯೋಗದಿಂದ ಈ ರಾಶಿಯವರಿಗೆ ವ್ಯವಹಾರದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ವೃತ್ತಿ ಬದುಕಿಯಲ್ಲಿ ಉನ್ನತ ಮಟ್ಟಕ್ಕೇರುವಿರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮವಾಗಲಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲಸಗಳಲ್ಲಿ ವೇಗವನ್ನು ಕಾಣಬಹುದು. 

Cancer3/6

ಕರ್ಕಾಟಕ ರಾಶಿ:  ಶುಕ್ರ ಶನಿ ಯುತಿಯಿಂದಾಗಿ ಈ ರಾಶಿಯವರಿಗೆ ವೃತ್ತಿ ಜೀವನ ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಧನಾತ್ಮಕತೆ ಆವರಿಸಲಿದೆ. ವೃತ್ತಿಪರರಿಗೆ ಬಡ್ತಿಯಿಂದ ಹೊಸ ಜವಾಬ್ದಾರಿ ಹೆಗಲೇರಬಹುದು. ಹಣದ ಹರಿವು ಹೆಚ್ಚಾಗಲಿದೆ. 

Libra4/6

ತುಲಾ ರಾಶಿ:  ಶುಕ್ರ ಶನಿಯಿಂದ ರಚನೆಯಾಗಿರುವ ದೃಷ್ಟಿ ಯೋಗವು ಈ ರಾಶಿಯವರಿಗೆ ವ್ಯಾಪಾರದಲ್ಲಿ ಭರ್ಜರಿ ಲಾಭವನು ನೀಡಲಿದೆ. ಹಣಕಾಸಿನ ಮೂಲಗಳು ಅಧಿಕವಾಗಲಿದ್ದು ಸ್ವಂತ ಮನೆ, ವಾಹನ ಖರೀದಿಸುವ ಅವಕಾಶಗಳು ಕೈಗೂಡಬಹುದು. 

Capricorn5/6

ಮಕರ ರಾಶಿ:  ಶುಕ್ರ ಶನಿ ಸಂಯೋಗದಿಂದಾಗಿ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯವಹಾರದಲ್ಲಿ ಭಾರೀ ಯಶಸ್ಸಿನಿಂದ ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಾಗಲಿದೆ ಸಂಬಂಧಗಳಲ್ಲಿ ಮಧುರತೆ ಮೂಡಲಿದೆ. 

Aquarius6/6

ಕುಂಭ ರಾಶಿ:  ಶುಕ್ರ ಶನಿಯಿಂದ ರಚನೆಯಾಗಿರುವ ದೃಷ್ಟಿ ಯೋಗವು ಈ ರಾಶಿಯವರಿಗೆ ವೃತ್ತಿ, ವ್ಯವಹಾರ, ವೈಯಕ್ತಿಕ ಬದುಕು ಎಲ್ಲೆಡೆ ಶುಭ ಫಲಗಳನ್ನೇ ನೀಡಲಿದೆ. ದೂರಾಗಿದ್ದ ಪ್ರೀತಿಯ ವ್ಯಕ್ತಿ ಮತ್ತೆ ನಿಮ್ಮ ಬಳಿ ಬರಲಿದ್ದಾರೆ. ಸುಖ-ಸಂತೋಷದ ನೆಮ್ಮದಿಯ ಬದುಕು ಆನಂದಿಸುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.