ಅರ್ಧಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಸಿಗುವ ಏಕೈಕ ದೇಶ! ಆದ್ರೆ ಇಲ್ಲಿಂದ ಬಂಗಾರ ತರುವ ಮಿತಿ ಎಷ್ಟು ಗೊತ್ತಾ?

Written ByDeepa A Reddy
Published: Nov 04, 2025, 09:52 AM IST|Updated: Nov 04, 2025, 09:52 AM IST

Dubai Gold: ದುಬೈನಿಂದ ನೀವು ಇಷ್ಟು ಚಿನ್ನವನ್ನು ಭಾರತಕ್ಕೆ ತರಬಹುದು. 
 

1/6

Dubai Gold: ದುಬೈನಲ್ಲಿ ಚಿನ್ನ ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ, ಸಿಬಿಐಸಿ ಹಾಗೂ ಕೇಂದ್ರ ಪರೋಕ್ಷ ತೆರಿಗೆಗಳ ಪ್ರಕಾರ ಚಿನ್ನವನ್ನು ಟಾಕ್ಸ್‌ ರಹಿತ ತರುವುದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.   

2/6

ದುಬೈನಿಂದ ಚಿನ್ನ ತರುವುದಕ್ಕಾಗಿ ನೀವು ಟಾಕ್ಸ್‌ ನಿಯಮವನ್ನು ಪಾಲಿಸಬೇಕಾಗುತ್ತದೆ. ಅದರ ಪ್ರಕಾರ, ಪುರುಷ ಪ್ರವಾಸಿಗರು ಕಸ್ಟಮ್ಸ್ ಸುಂಕವನ್ನು ಪಾವತಿಸದೆ 20 ಗ್ರಾಂ ಚಿನ್ನದ ಆಭರಣಗಳನ್ನು ಭಾರತಕ್ಕೆ ತರಬಹುದು.   

3/6

ಮಹಿಳಾ ಪ್ರವಾಸಿಗರು 40 ಗ್ರಾಂ ಆಭರಣಗಳನ್ನು ತೆರಿಗೆ ರಹಿತವಾಗಿ ದುಬೈನಿಂದ ಭಾರತಕ್ಕೆ ತರಬಹುದು.   

4/6

ತೆರಿಗೆಯ ನಿಯಮವನ್ನು ಉಲ್ಲಂಘಿಸಿದ್ದಲ್ಲಿ ನೀವು ಭಾರಿ ದಂಡ ವಿಧಿಸಬಹುದು, ಮಿತಿಯನ್ನು ಮೀರಿ ತೆರೆಗೆಯನ್ನು ಪಾವತಿಸಲು ವಿಫಲವಾಗಿದ್ದಲ್ಲಿ ದಂಡದ ಜೊತೆಗೆ  7 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.   

5/6

ತೆರಿಗೆ ಪಾವತಿಸದೆ ಭಾರತಕ್ಕೆ ಎಷ್ಟು ಚಿನ್ನವನ್ನು ತರಬಹುದು ಎಂಬುದರ ಕುರಿತು CBIC ಕಠಿಣ ನಿಯಮಗಳನ್ನು ವಿಧಿಸಿದೆ.   

6/6

15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು: ಅವರಿಗೆ ಮಿತಿಯೂ 40 ಗ್ರಾಂ. ಆದರೆ ಷರತ್ತು ಏನೆಂದರೆ ಅವರು ಜೊತೆಯಲ್ಲಿರುವ ವಯಸ್ಕರೊಂದಿಗಿನ ಸಂಬಂಧವನ್ನು ಸಾಬೀತುಪಡಿಸಬೇಕು.