Liver And Kidney Health: ಲಿವರ್, ಕಿಡ್ನಿಗಳು ಪ್ರತಿ ಕ್ಷಣವೂ ಶೋಧ, ಶುದ್ಧೀಕರಣ ಮಾಡುತ್ತಾ ಸದಾ ದೇಹವನ್ನು ನಿರ್ವಿಷಗೊಳಿಸಲು ಮೂಕ ಅಂಗಗಲಾಗಿ ಕಾರ್ಯ ನಿರ್ವಹಿಸುತ್ತವೆ.
Liver And Kidney Detox Fruits: ದೇಹವನ್ನು ಡಿಟಾಕ್ಸ್ ಮಾಡಲು ಸದಾ ಕಾರ್ಯ ನಿರ್ವಹಿಸುವ ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುವುದು ತುಂಬಾ ಅಗತ್ಯವಾಗಿದೆ. ಇದಕ್ಕೆ ನಿಸರ್ಗದತ್ತ ಆಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಪ್ರತಿ ಕ್ಷಣವೂ ದೇಹವನ್ನು ನಿರ್ವಿಷಗೊಳಿಸಲು ಮೂಕ ಕೆಲಸಗಾರರಂತೆ ದುಡಿಯುವ ಅಂಗಗಳೆಂದರೆ ಲಿವರ್ (ಯಕೃತ್) ಮತ್ತು ಮೂತ್ರಪಿಂಡಗಳು (ಕಿಡ್ನಿ). ಕೆಲವು ಹಣ್ಣುಗಳ ಸಹಾಯದಿಂದ ಲಿವರ್ ಮತ್ತು ಕಿಡ್ನಿಗಳನ್ನು ನ್ಯಾಚುರಲ್ ಆಗಿ ಡಿಟಾಕ್ಸ್ ಮಾಡಬಹುದು. ಅಂತಹ ಐದು ಹಣ್ಣುಗಳೆಂದರೆ...
ಜಾಮೂನ್ ಅಥವಾ ನೇರಳೆ ಹಣ್ಣುಗಳು ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿದ್ದು ಇವು ಕಿಡ್ನಿಗಳ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದು ಒಟ್ಟಾರೆ ಚಯಾಪಚಯವನ್ನು ಹೆಚ್ಚಿಸುವುದರಿಂದ ಪರೋಕ್ಷವಾಗಿ ಲಿವರ್ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ.
ಉತ್ಕರ್ಷಣ ನಿರೋಧಕಗಳು, ವಿಶೇಷವಾಗಿ ಪ್ಯೂನಿಕಾಲಾಜಿನ್, ಉರಿಯೂತವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿರುವ ದಾಳಿಂಬೆ ಹಣ್ಣುಗಳು ಕಿಡ್ನಿ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಪರಿಣಾಮಕಾರಿ. ಅಲ್ಲದೆ, ಯಕೃತ್ ಡಿಟಾಕ್ಸ್ ಮಾಡುವಲ್ಲಿಯೂ ಕೊಡುಗೆ ನೀಡುತ್ತದೆ.
ಎಲ್ಲಾ ಋತುಗಳಲ್ಲೂ ಬಹಳ ಸುಲಭವಾಗಿ ಸಿಗುವ ಪರಂಗಿ ಹಣ್ಣು ಲಿವರ್ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ. ಇದರಲ್ಲಿರುವ ಆಹಾರ ಪ್ರೋಟೀನ್‌ಗಳ ವಿಭಜನೆಯನ್ನು ಬೆಂಬಲಿಸುವ ಕಿಣ್ವಗಳು ಫ್ಯಾಟಿ ಲಿವರ್ ಸಮಸ್ಯೆಗೆ ರಾಮಬಾಣ. ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುವಲ್ಲಿಯೂ ಇದರ ಕೊಡುಗೆ ಅಮೋಘ ಎನ್ನಲಾಗುತ್ತದೆ.
ಲಿಮೋನಾಯ್ಡ್‌ಗಳಿಂದ ಸಮೃದ್ಧವಾಗಿರುವ ಮೋಸಂಬಿ ಹಣ್ಣು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಯಕೃತ್ತಿನ ಕಿಣ್ವಗಳನ್ನು ಉತ್ತೇಜಿಸುವ ಸಂಯುಕ್ತವಾಗಿದೆ. ಇದನ್ನು ತಿನ್ನುವುದರಿಂದ ಕಿಡ್ನಿ ಸ್ಟೋನ್, ಕಿಡ್ನಿ ಸೋಂಕಿನ ಅಪಾಯಗಳು ಸಹ ಕಡಿಮೆ.
ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುವ ಕಲ್ಲಂಗಡಿ ಹಣ್ಣು ಕಿಡ್ನಿಗಳ ಮೇಲೆ ಒತ್ತಡ ಹೇರದೆ ಮೂತ್ರದ ಹರಿವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಸಿಟ್ರುಲಿನ್ ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಯಕೃತ್ ಸರಾಗವಾಗಿ ಕಾರ್ಯನಿರ್ವಹಿಸಲು ಸಹಕಾರಿ ಆಗಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.