ಪ್ರತಿದಿನ ಈ 5 ಬೀಜಗಳನ್ನು ತಿಂದರೆ ಆರೋಗ್ಯಕ್ಕೆ ಭರಪೂರ ಪ್ರಯೋಜನ

Seeds For Health: ಪ್ರತಿದಿನ ಕೆಲವು ಬೀಜಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ತೂಕ ಇಳಿಕೆ, ಬಿಪಿ ನಿಯಂತ್ರಣ, ಕೊಲೆಸ್ಟ್ರಾಲ್ ಕಂಟ್ರೋಲ್ ಸೇರಿದಂತೆ ಆರೋಗ್ಯಕ್ಕೆಗೆ ಭರಪೂರ ಪ್ರಯೋಜನಗಳನ್ನು ಪಡೆಯಬಹುದು. 

1 /6

ದೈನಂದಿನ ಆಹಾರದಲ್ಲಿ ಚಿಯಾ ಸೀಡ್ಸ್, ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಸೀಡ್ಸ್, ಕಲ್ಲಂಗಡಿ ಬೀಜಗಳು, ಅಗಸೆ ಬೀಜಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಇದು ತೂಕ ಇಳಿಕೆಗೆ ಸಹಕಾರಿ ಆಗಿದೆ. ಅಷ್ಟೇ ಅಲ್ಲದೆ,ಈ ಬೀಜಗಳಿಂದ ಆರೋಗ್ಯಕ್ಕೆ ಹಲವು ಅದ್ಭುತ ಪ್ರಯೋಜನಗಳು ಲಭ್ಯವಾಗಲಿವೆ. ಯಾವ ಬೀಜವನ್ನು ಸೇವಿಸಿದರೆ ಆರೋಗ್ಯಕ್ಕೆ ಏನು ಲಾಭ ಎಂದು ತಿಳಿಯೋಣ. 

2 /6

ದೈನಂದಿನ ಆಹಾರದಲ್ಲಿ ಚಿಯಾ ಸೀಡ್ಸ್ ಸೇರಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಜೊತೆಗೆ ತೂಕ ಇಳಿಕೆಗೂ ಕೂಡ ಇದು ಸಹಕಾರಿ ಆಗಿದೆ. 

3 /6

ಸೂರ್ಯಕಾಂತಿ ಬೀಜಗಳನ್ನು ತಿನ್ನುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. 

4 /6

ಕುಂಬಳಕಾಯಿ ಬೀಜ ಸೇವನೆಯಿಂದ ಹೃದಯದ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. 

5 /6

ಕಲ್ಲಂಗಡಿ ಬೀಜಗಳನ್ನು ತಿನ್ನುವುದರಿಂದ ಇದು ದೇಹಕ್ಕೆ ಎನರ್ಜಿ ನೀಡುವುದರ ಜೊತೆಗೆ ಕೂದಲಿನ ಆರೈಕೆಯಲ್ಲಿ ಸಹಕಾರಿ ಆಗುತ್ತದೆ. ಕೂದಲು ಬುಡದಿಂದ ಗಟ್ಟಿಯಾಗಿಸುತ್ತದೆ. 

6 /6

ಅಗಸೆ ಬೀಜಗಳ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸುವುದರ ಜೊತೆಗೆ ಕೀಲು ನೋವುಗಳಿಂದ ಪರಿಹಾರ ಪಡೆಯಬಹುದು.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.