ಮಕ್ಕಳು ಸೇರಿದಂತೆ ವಯಸ್ಸು ಆದವರೂ ಚಳಿಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ಈ ಸಿಹಿನ ಊಟದ ನಂತರ ತಿನ್ನಿ.
1/5ನಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ಸರಾಗಿವಾಗಿ ಮಾಡುವ ಸಿಹಿ ಎಂದರೆ ಅದರು ಬೆಲ್ಲ. ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಹೊಟ್ಟೆಯಲ್ಲಿನ ಕಲ್ಮಶಗಳನ್ನು ಹೊರಗಾಕುತ್ತದೆ.
2/5ಬೆಲ್ಲವೂ ನಮ್ಮ ದೇಹವನ್ನು ಬೆಚ್ಚಗೆ ಮಾಡುತ್ತದೆ. ಇದರಿಂದ ಗಂಟಲು ಕಿರಿ ಕಿರಿ ಇದ್ರೆ ಶಮನವಾಗುತ್ತದೆ. ಅತಿ ಮುಖ್ಯವಾಗಿ ಚಳಿಗಾಲದ ಸೀಸನ್ನಲ್ಲಿ ಬೆಲ್ಲವನ್ನು ತಿನ್ನುವುದರಿಂದ ಶೀತ, ಕೆಮ್ಮು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
3/5ಸಿಹಿಯಾಗಿರುವ ಬೆಲ್ಲದಲ್ಲಿ ಏನೇನು ಅಂಶಗಳು ಇರುತ್ತವೆ ಎಂದು ಹೇಳುವುದಾದರೆ, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಸಿಯಂ ಖನಿಜ ಹೊಂದಿದೆ. ನಮ್ಮ ದೇಹ ದಣಿದಿದ್ರೆ, ಬೆಲ್ಲ ತಿನ್ನುವುದರಿಂದ ಆಹ್ಲಾದಕರವಾದ ಅನುಭವ ನೀಡುತ್ತದೆ.
4/5ಚಳಿಗಾಲ ಎಂದ ಮೇಲೆ ಚರ್ಮ ಸಾಮಾನ್ಯವಾಗಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಇದನ್ನು ತಡೆಗಟ್ಟಬೇಕು ಎಂದರೆ ನೀವು ಬೆಲ್ಲವನ್ನು ತಿನ್ನಬಹುದು. ಇದರಿಂದ ಚರ್ಮದ ಬಿರುಕುಗಳು ನಾಶವಾಗುತ್ತವೆ. ಆದಷ್ಟು ಹೊಳಪು ತರುತ್ತದೆ.
5/5ದೇಹ ಆಯಾಸಗೊಂಡಾಗ ಬೆಲ್ಲವನ್ನು ಸೇವಿಸುವುದರಿಂದ ಮನಸ್ಸಿಗೆ ನೆಮ್ಮದಿ ತರುತ್ತದೆ. ಕಬ್ಬಿಣ ಅಂಶ ಇರುವುದರಿಂದ ದೇಹದಲ್ಲಿ ರಕ್ತ ಪರಿಚಲನೆಯನ್ನು ಬೆಂಬಲಿಸತ್ತದೆ. ನಿತ್ಯದ ಆಹಾರದಲ್ಲಿ ನೀವು ಬೆಲ್ಲವನ್ನ ಸೇರಿಸಿಕೊಂಡ್ರೆ ಒಳ್ಳೆಯದು.