ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ... ವರ್ಷದ 90 ದಿನಗಳಷ್ಟೇ ಲಭ್ಯವಿರುವ ಇದನ್ನು ಒಮ್ಮೆ ತಿಂದರೆ ನಿಮಿಷಗಳಲ್ಲಿ ಸೊಂಟದ ಬೊಜ್ಜು ಕರಗಿ ಹೋಗುತ್ತೆ
ಹೆಚ್ಚಿನ ಜನರು ತೂಕವನ್ನು ಕಳೆದುಕೊಳ್ಳಲು ಆಹಾರಕ್ರಮವನ್ನು ಆಶ್ರಯಿಸುತ್ತಾರೆ. ಇದರಿಂದಾಗಿ ತೂಕ ಇಳಿಕೆಯಾದರೂ ಸಹ, ಆಯಾಸ ಮತ್ತು ದೌರ್ಬಲ್ಯದ ಭಾವನೆಯನ್ನು ಉಂಟುಮಾಡುತ್ತದೆ. ಇದಲ್ಲದೆ, ರಕ್ತಹೀನತೆ, ಅತಿಯಾದ ಓಡಾಟ, ನಿದ್ರೆಯ ಕೊರತೆ ಕೂಡ ದೌರ್ಬಲ್ಯಕ್ಕೆ ಕಾರಣವಾಗಬಹುದು.
ಅಂತಹ ಆಹಾರ ಕ್ರಮಗಳಿಗಿಂತ, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಲು ಪ್ರಯತ್ನಿಸಿ, ಅದರಲ್ಲಿ ಒಂದು ಕಂಟೋಲ ಅಥವಾ ಮಾಡಹಾಗಲಕಾಯಿಯನ್ನು ಸೇವಿಸಿ. ಇದು ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಹೊಟ್ಟೆಯಿಂದ ಹೃದಯದವರೆಗೆ ಮತ್ತು ಬೊಜ್ಜು ಹೋಗಲಾಡಿಸುವಲ್ಲಿ ಸಹಕಾರಿ.
ಕಂಟೋಲ ಅಥವಾ ಮಾಡಹಾಗಲಕಾಯಿ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿ. ಮಳೆಗಾಲದಲ್ಲಿ ಮಾತ್ರ ಸಿಗುವ ಈ ತರಕಾರಿ ಪ್ರೋಟೀನ್, ಕೊಬ್ಬು, ಫೈಬರ್, ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಸೋಡಿಯಂ, ಕ್ಯಾಲ್ಸಿಯಂ ಮುಂತಾದ ಅನೇಕ ಪೋಷಕಾಂಶಗಳನ್ನು ಹೊಂದಿದೆ.
ಕಂಟೋಲ ತರಕಾರಿ ತಿನ್ನುವುದರಿಂದ ತಲೆನೋವು, ಕೆಮ್ಮು, ಕಿವಿ ನೋವು, ಕೂದಲು ಉದುರುವುದು ಮತ್ತು ಹೊಟ್ಟೆಯ ಸೋಂಕಿನಂತಹ ಅನೇಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿನ ಅಡಚಣೆಗಳಿಂದ ಮಲಬದ್ಧತೆ ಮತ್ತು ಪೈಲ್ಸ್ ರೋಗಗಳು ಸಾಮಾನ್ಯವಾಗಿದೆ. ಆದ್ದರಿಂದ ಮಾಡಹಾಗಲಕಾಯಿಯ ಸೇವನೆಯು ಅದರಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.
ಮಧುಮೇಹವು ಜೀವನಶೈಲಿ ಸಂಬಂಧಿತ ಕಾಯಿಲೆಯಾಗಿದೆ. ಆದ್ದರಿಂದ ಮಾಡಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಮಾಡಹಾಗಲಕಾಯಿಯನ್ನು ತಿನ್ನುವುದರಿಂದ ರಿಂಗ್ ವರ್ಮ್, ತುರಿಕೆ ಸಮಸ್ಯೆ, ರಕ್ತದೊತ್ತಡ ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳನ್ನು ಸಹ ದೂರವಿಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.