ಖಮೇನಿ ಇನ್ನಿಲ್ಲ.. ಅಂತ ಕುಣಿದಾಡಿ ಸಂಭ್ರಮಿಸಿದ ಖ್ಯಾತ ನಟಿ..! ಅವನ ಸಾವಿಗಾಗಿ 47 ವರ್ಷಗಳಿಂದ ಕಾಯುತ್ತಿದ್ದೆ..

Written ByKrishna N K
Published: Mar 01, 2026, 06:19 PM IST|Updated: Mar 01, 2026, 06:19 PM IST

Actress on Ali Khamenei : ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ನಿಧನ ದೃಢಪಟ್ಟಿದೆ. ಕೆಲವು ಜನರು ಸುಪ್ರೀಂ ಲೀಡರ್‌ನ ಸಾವಿನ ಬೆನ್ನಲ್ಲೇ ಅಮೆರಿಕ ಮತ್ತು ಇಸ್ರೇಲ್‌ ಅನ್ನು ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ಇದನ್ನು ಸಂಭ್ರಮಿಸುತ್ತಿದ್ದಾರೆ.. ಇದೀಗ ಸ್ಟಾರ್‌ ನಟಿಯೊಬ್ಬರು ಇವರ ಸಾವಿಗಾಗಿ 47 ವರ್ಷದಿಂದ ಕಾಯುತ್ತಿದ್ದೆ ಅಂತ ಸಂಭ್ರಮಿಸಿದ್ದಾರೆ...

1/5

ಹೌದು... ಜಾನ್ ಅಬ್ರಹಾಂ ಅಭಿನಯದ "ಟೆಹ್ರಾನ್" ಚಿತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಎಲ್ನಾಜ್ ನೊರೌಜಿ, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವನ್ನು ಸಂಭ್ರಮಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದಾರೆ.

2/5

ಒಂದು ವೀಡಿಯೊದಲ್ಲಿ ಎಲ್ನಾಜ್‌ ಖಮೇನಿಯವರ ಸಾವನ್ನು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಅಚ್ಚರಿ ವಿಷಯ ಅಂದ್ರೆ ಈ ನಟಿ ಮೂಲತಃ ಇರಾನ್‌ನ ಟೆಹ್ನಾನ್‌ನವರು. ಭಾರತ ಸಿನಿರಂಗದಲ್ಲಿ ಸಕ್ರಿಯವಾಗಿರುವ ಈ ಹೀರೋಯಿನ್‌ ಹಲವಾರು ಸಿನಿಮಾಗಳು ಮತ್ತು ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

3/5

ವೀಡಿಯೊದಲ್ಲಿ, ಇರಾನ್ ಮೇಲಿನ ಅಮೆರಿಕ-ಇಸ್ರೇಲಿ ದಾಳಿಯ ಬಗ್ಗೆ ಮಾತನಾಡಿರುವ ಎಲ್ನಾಜ್... ಅಲಿ ಖಮೇನಿ ಆಡಳಿತ ದಶಕಗಳಿಂದ ಇರಾನಿನ ನಾಗರಿಕರನ್ನು ದಬ್ಬಾಳಿಕೆ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ..  

4/5

ನಾವು 47 ವರ್ಷಗಳಿಂದ ಇದಕ್ಕಾಗಿ ಕಾಯುತ್ತಿದ್ದೇವು.. ಕೊನೆಗೂ ಖಮೇನಿ ಸತ್ತಿದ್ದಾರೆ. ದೇವರು ದೊಡ್ಡವನು ಎಂದು ಎಲ್ನಾಜ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿದ್ದಾರೆ. ಜೊತೆ ಹೃದಯ ಮತ್ತು ಕೈ ಮುಗಿದಿರುವ  ಎಮೋಜಿ ಸೇರಿಸಿ ಹಂಚಿಕೊಂಡಿದ್ದಾರೆ. 

5/5

ಇರಾನ್‌ ದೇಶದೊಳಗಿನ ಇತ್ತೀಚಿನ ಪ್ರತಿಭಟನೆಗಳು ಮತ್ತು ಅಶಾಂತಿಯ ಬಗ್ಗೆ ಮಾತನಾಡುತ್ತ ಎಲ್ನಾಜ್ ನೊರೌಜಿ.. ವಿರೋಧಿಗಳಿಗೆ ಕಠಿಣವಾಗಿ ಶಿಕ್ಷಿಸಲಾಗಿದೆ. ಇತರ ಜನರು ಸಹ ಇರಾನಿನ ನಾಗರಿಕರ ಧ್ವನಿಯನ್ನು ಆಲಿಸಬೇಕು, ಎಲ್ಲರನ್ನು ಒಂದೇ ದೃಷ್ಟಿಯಲ್ಲಿ ನೋಡಬಾರದು ಎಂದು ಒತ್ತಾಯಿಸಿದ್ದಾರೆ..