ಟೆಸ್ಟ್‌ ಮಧ್ಯೆಯೇ ಕ್ರಿಕೆಟ್‌ ಲೋಕಕ್ಕೆ ಬಹುದೊಡ್ಡ ಆಘಾತ... ಹೃದಯಾಘಾತಕ್ಕೆ ಭಾರತದ ಯುವ ಕ್ರಿಕೆಟಿಗ ನಿಧನ! ವ್ಯಾಯಾಮ ಮಾಡುತ್ತಿದ್ದಾಗಲೇ ನಡೆದ ದುರಂತ

Priyajit Ghosh death: ಕ್ರಿಕೆಟ್ ಲೋಕಕ್ಕೆ ಬಹುದೊಡ್ಡ ಆಘಾತ ಸಂಭವಿಸಿದೆ. ಬಂಗಾಳದ ಉದಯೋನ್ಮುಖ ಕ್ರಿಕೆಟಿಗ ಪ್ರಿಯಜಿತ್ ಘೋಷ್ ಶುಕ್ರವಾರ (ಆಗಸ್ಟ್ 2) ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಿಯಜಿತ್ ಘೋಷ್ ಕೇವಲ 22 ವರ್ಷ ವಯಸ್ಸಿನವರಾಗಿದ್ದರು.

1 /5

ಕ್ರಿಕೆಟ್ ಲೋಕಕ್ಕೆ ಬಹುದೊಡ್ಡ ಆಘಾತ ಸಂಭವಿಸಿದೆ. ಬಂಗಾಳದ ಉದಯೋನ್ಮುಖ ಕ್ರಿಕೆಟಿಗ ಪ್ರಿಯಜಿತ್ ಘೋಷ್ ಶುಕ್ರವಾರ (ಆಗಸ್ಟ್ 2) ಹೃದಯಾಘಾತದಿಂದ ನಿಧನರಾಗಿದ್ದಾರೆ. ಪ್ರಿಯಜಿತ್ ಘೋಷ್ ಕೇವಲ 22 ವರ್ಷ ವಯಸ್ಸಿನವರಾಗಿದ್ದರು. ಶುಕ್ರವಾರ ಬೆಳಿಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಈ ದುರಂತ ಸಂಭವಿಸಿದ್ದು, ಪ್ರಿಯಜಿತ್ ಜೀವನ ಪ್ರಯಾಣ ಕೊನೆಗೊಳಿಸಿದ್ದಾರೆ.   

2 /5

ಪ್ರಿಯಜಿತ್ ಘೋಷ್ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಬೋಲ್ಪುರದ ನಿವಾಸಿ. ಮೊದಲು ಬಂಗಾಳದ ರಣಜಿ ತಂಡದಲ್ಲಿ ಸ್ಥಾನ ಪಡೆಯುವುದು ಅವರ ಕನಸಾಗಿತ್ತು. ನಂತರ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಒಂದು ದಿನ ಭಾರತೀಯ ತಂಡಕ್ಕಾಗಿ ಆಡಬೇಕೆಂದು ಬಯಸಿದ್ದರು. ಕ್ರಿಕೆಟ್ ಅವರಿಗೆ ಕೇವಲ ಆಟವಾಗಿರಲಿಲ್ಲ, ಅವರ ದೈನಂದಿನ ದಿನಚರಿಯ ಭಾಗವಾಗಿತ್ತು.  

3 /5

ಪ್ರಿಯಜಿತ್ ಘೋಷ್ ಅವರ ಕ್ರಿಕೆಟ್ ಪ್ರಯಾಣವು ಜಿಲ್ಲಾ ಮಟ್ಟದಲ್ಲಿ ಪ್ರಾರಂಭವಾಗಿತ್ತು. 2018-19 ಋತುವಿನಲ್ಲಿ, ಪ್ರಿಯಜಿತ್ ಘೋಷ್ ಅಂತರ ಜಿಲ್ಲಾ ಅಂಡರ್ -16 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಆ ಪಂದ್ಯಾವಳಿಯನ್ನು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (CAB) ಆಯೋಜಿಸಿತ್ತು. ಈ ಅತ್ಯುತ್ತಮ ಪ್ರದರ್ಶನಕ್ಕಾಗಿ CAB ಅವರನ್ನು ಗೌರವಿಸತ್ತು. ಪ್ರಿಯಜಿತ್ ಘೋಷ್ ಪಡೆದ ಪದಕವನ್ನು ಇನ್ನೂ ಅವರ ಕೋಣೆಯಲ್ಲಿ ಇಡಲಾಗಿದೆ.  

4 /5

ಬೋಲ್ಪುರದ ಮಿಷನ್ ಕಾಂಪೌಂಡ್ ಪ್ರದೇಶದಲ್ಲಿರುವ ಜಿಮ್‌ಗೆ ಪ್ರಿಯಜಿತ್ ಘೋಷ್ ತೆರಳಿದ್ದರು. ಭಾರತೀಯ ತಂಡದ ದಂತಕಥೆ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯಂತೆ ಫಿಟ್‌ನೆಸ್ ಬಗ್ಗೆ ಗಂಭೀರವಾಗಿರುತ್ತಿದ್ದ ಪ್ರಿಯಜಿತ್ ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾಗ ಅವರಿಗೆ ಹೃದಯಾಘಾತವಾಗಿದೆ.   

5 /5

ಸ್ಥಳದಲ್ಲಿದ್ದ ಜನರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಸಹ ಪ್ರಯೋಜನವಾಗಿರಲಿಲ್ಲ. ಪ್ರಿಯಜಿತ್ ಅವರ ಹಠಾತ್ ಸಾವು ಕ್ರಿಕೆಟ್ ಲೋಕವನ್ನೇ ಆಘಾತಗೊಳಿಸಿದೆ.