EPFO Pension Rules: ನೌಕರರ ಭವಿಷ್ಯ ನಿಧಿ ಸಂಸ್ಥೆ ಪಿಂಚಣಿದಾರರ ಅನುಕೂಲಕ್ಕಾಗಿ ಕೆಲವು ಮಹತ್ವದ ನಿರ್ಣಯಗಳನ್ನೂ ಕೈಗೊಂಡಿದೆ.
EPFO Pension Rules: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪಿಂಚಣಿ ಯೋಜನೆಯಲ್ಲಿ ಮಾಡಲಾಗಿರುವ ಈ ಬದಲಾವಣೆಗೂ ಪಿಂಚಣಿದಾರರ ಮೇಲೆ ನೇರ ಪರಿಣಾಮ ಬೀರುತ್ತದೆ.
1/6ಇಪಿಎಫ್‌ಒ ಚಂದಾದಾರರಿಗೆ ಹಚ್ಚು ಪಾರದರ್ಶಕ, ಅನುಕೂಲಕರ ಹಾಗೂ ಡಿಜಿಟಲ್ ಪ್ರವೇಶವನ್ನು ಒದಗಿಸುವ ನಿಟ್ಟಿನಲ್ಲಿ ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ನಿಯಮದಲ್ಲಿ ಐದು ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ.
2/6ನ್ಯಾಯಾಲಯದ ನಿರ್ದೇಶನದಂತೆ ಇದೀಗ ಇಪಿಎಫ್‌ಒ ಸದಸ್ಯರ ಮಾಸಿಕ ಪಿಂಚಣಿ ಮಿತಿಯನ್ನು ₹7,500ರಿಂದ ₹15,000ದವರೆಗೆ ಹೆಚ್ಚಿಸಿದೆ. ಇದು ಲಕ್ಷಾಂತರ ಪಿಂಚಣಿದಾರರಿಗೆ ಭಾರೀ ಪ್ರಯೋಜನವನ್ನು ನೀಡುತ್ತದೆ.
3/6ಈ ಹಿಂದೆ ಪಿಂಚಣಿ ಪಡೆಯಲು 58ವರ್ಷಗಳನ್ನು ಪೂರೈಸುವುದು ಕಡ್ಡಾಯವಾಗಿತ್ತು. ಇದೀಗ ಈ ವಯೋಮಿತಿಯನ್ನು ಸಡಿಲಿಸಿರುವ ಇಪಿಎಫ್‌ಒ ನೌಕರರು 50ವರ್ಷ ಪೂರ್ಣಗೊಂಡ ಬಳಿಕ ಪಿಂಚಣಿ ಪಡೆಯಲು ಪ್ರಾರಂಭಿಸಬಹುದು.
4/6ಇಪಿಎಫ್‌ಒ ಚಂದಾದಾರರಿಗೆ ಅಗತ್ಯ ಸೇವೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಇಪಿಎಫ್‌ಒ ಡಿಜಿಟಲೀಕರಣವನ್ನು ಇನ್ನಷ್ಟು ಬಲಪಡಿಸಿದ್ದು, ಪಿಂಚಣಿ ಕ್ಲೈಮ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ಮಾಡಲಿದೆ. ಇದು ತ್ವರಿತವಾಗಿ ಕ್ಲೈಮ್‌ಗಳು ಇತ್ಯರ್ಥ ಪಡಿಸಲು ನೆರವಾಗುತ್ತದೆ ಎನ್ನಲಾಗಿದೆ.
5/6ಇಪಿಎಫ್‌ಒ ಇತ್ತೀಚಿನ ದಿನಗಳಲ್ಲಿ ಪಿಂಚಣಿ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಸುಲಭಗೊಲಿಸಿದ್ದು ಇದರ ಭಾಗವಾಗಿ ಉದ್ಯೋಗಿ ಕೆಲಸ ಬದಲಾಯಿಸಿದಾಗ ಹೊಸ ಕೆಲಸದ ದಾಖಲೆಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತದೆ. ಹೀಗಾಗಿ, ಯಾವುದೇ ನೌಕರರು ಉದ್ಯೋಗ ಬದಲಾಯಿಸಿದಾಗ ಪಿಂಚಣಿ ನಷ್ಟದ ಬಗ್ಗೆ ಚಿಂತಿಸಬೇಕಾಗುವುದಿಲ್ಲ.
6/6ಈ ಮೊದಲು ಉದ್ಯೋಗಿಯ ಕೊನೆಯ ವೇತನದ ಆಧಾರದ ಮೇಲೆ ಪಿಂಚಣಿ ಲೆಕ್ಕಾಹಾಕಲಾಗುತ್ತಿದ್ದು. ಇದೀಗ, ಇಪಿಎಫ್‌ಒ ಈ ನಿಯಮವನ್ನು ಬದಲಾಯಿಸಿದ್ದು ಯಾವುದೇ ಉದ್ಯೋಗಿಯು ನಿವೃತ್ತಿ ಪಡೆಯುವ ಹಿಂದಿನ 60 ತಿಂಗಳು (5 ವರ್ಶ೦ ಸರಾಸರಿ ಸಂಬಳವನ್ನು ಆಧರಿಸಿ ಪಿಂಚಣಿ ಮೊತ್ತವನ್ನು ಲೆಕ್ಕಾಹಾಕಲಾಗುತ್ತದೆ. ಇದು ಗಮನಾರ್ಹವಾಗಿ ಪಿಂಚಣಿಯನ್ನು ಹೆಚ್ಚಿಸುತ್ತದೆ.