EPFO ಮಹತ್ವದ ನಿರ್ಧಾರ: ಹೊಸ ನಿಯಮದಡಿ ನೌಕರರಿಗೆ ಬಂಪರ್.. ನಾಮಿನಿಗೂ ಸಿಗುತ್ತೆ ₹ 50,000

Written ByYashaswini V
Published: Dec 20, 2025, 09:43 AM IST|Updated: Dec 20, 2025, 09:43 AM IST

EPFO New Rules: ಇತ್ತೀಚೆಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ ( ಇಪಿಎಫ್‌ಒ) ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದು ಇದರಿಂದ ಉದ್ಯೋಗ ಬದಲಿಸಲು ಯೋಚಿಸುತ್ತಿರುವ ಖಾಸಗಿ ವಲಯದ ಉದ್ಯೋಗಿಗಳ ಜೊತೆಗೆ ಅವರ ಅವಲಂಬಿತರಿಗೂ ಕೂಡ ಹೆಚ್ಚಿನ ಪ್ರಯೋಜನವಾಗಲಿದೆ. 

EPFO EDLI Rules1/8

ಇಪಿಎಫ್‌ಒ ಮಹತ್ವದ ನಿರ್ಧಾರ

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇತ್ತೀಚೆಗೆ ಹೊಸ ಸುತ್ತೋಲೆ ಹೊರಡಿಸಿದ್ದು ಇದರಿಂದ ಲಕ್ಷಾಂತರ ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಭಾರೀ ಪ್ರಯೋಜನವಾಗಲಿದೆ. 

EPFO EDLI Rules2/8

ಇಪಿಎಫ್‌ಒ ಗುಡ್‌ನ್ಯೂಸ್‌

ಇಪಿಎಫ್‌ಒದ ಈ ಮಹತ್ವದ ನಿರ್ಧಾರವು ಕೆಲಸ ಬದಲಾಯಿಸಲು ಚಿಂತಿಸುತ್ತಿರುವ ಉದ್ಯೋಗಿಗಳಿಗೆ ಬಿಗ್‌ ರಿಲೀಫ್‌ ನೀಡುವುದರ ಜೊತೆಗೆ ಮರಣದ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ನಿವಾರಿಸುವುದರಿಂದ ನೌಕರರ ಅವಲಂಬಿತರಿಗೂ ಪ್ರಯೋಜನವನ್ನು ನೀಡಲಿದೆ.   

EPFO EDLI Rules3/8

ಖಾಸಗಿ ಉದ್ಯೋಗಿಗಳ ಚಿಂತೆ ದೂರ

ಇಪಿಎಫ್‌ಒ ನಿರ್ಧಾರದಿಂದ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೊಡ್ಡ ಪರಿಹಾರ ಸಿಕ್ಕಿದೆ. ಯಾವುದೇ ಉದ್ಯೋಗಿಯು ಒಂದು ಕಂಪನಿಯನ್ನು ಬಿಟ್ಟು ಇನ್ನೊಂದು ಕಂಪನಿಗೆ ಸೇರುವ ನೌಕರರಿಗೆ ವಾರಾಂತ್ಯದ ರಜೆಗಳು ಹಾಗೂ ಘೋಷಿತ ರಜಾದಿನಗಳನ್ನು ಸೇವಾ ವಿರಾಮ ಎಂದು ಪರಿಗಣಿಸಲಾಗುವುದಿಲ್ಲ ಎಂದು ಇಪಿಎಫ್‌ಒ ಸ್ಪಷ್ಟಪಡಿಸಿದೆ. 

EPFO EDLI Rules4/8

ಹಿಂದೆ ಆಗುತ್ತಿದ್ದ ಸಮಸ್ಯೆ

ಈ ಮೊದಲು ಖಾಸಗಿ ಕೆಲಸದ ಉದ್ಯೋಗಿಗಳು ಒಂದು ಕಂಪನಿಯನ್ನು ತೊರೆದು ಇನ್ನೊಂದು ಕಂಪನಿಗೆ ಸೇರುವಾಗ ಈ ಎರಡೂ ಕೆಲಸಗಳ ನಡುವಿನ ರಜೆಯನ್ನು ಸೇವಾ ವಿರಾಮವೆಂದು ಪರಿಗಣಿಸಲಾಗುತ್ತಿತ್ತು. ಇದರಿಂದ ಅವರ ಕುಟುಂಬಗಳು ವಿಮೆ ಮತ್ತು ಪಿಂಚಣಿ ಪ್ರಯೋಜನಗಳಿಂದ ವಂಚಿತರಾಗುವ ಸಾಧ್ಯತೆ ಇತ್ತು. 

EPFO EDLI Rules5/8

ಇಪಿಎಫ್‌ಒ ಹೊಸ ನಿರ್ಧಾರಕ್ಕೆ ಕಾರಣ

ಅನಿವಾರ್ಯ ಸಂದರ್ಭಗಳಲ್ಲಿ ನೌಕರರು ಮರಣ ಹೊಂದಿದಾಗ ಈ ಮೊದಲು ಸೇವಾ ವಿರಾಮದಿಂದಾಗಿ ಉದ್ಯೋಗಿಯ  ಅವರ ಕುಟುಂಬಕ್ಕೆ ನೀಡಲಾಗುವ ನೌಕರರ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ( EDLI) ಕ್ಲೈಮ್ ಅನ್ನು ತಿರಸ್ಕರಿಸಿರುವ ಅಥವಾ ಈ ಸಣ್ಣ ಅಂತರದಿಂದಾಗಿ ಅವರ ಕುಟುಂಬಕ್ಕೆ ಕಡಿಮೆ ಮೊತ್ತವನ್ನು ನೀಡರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ ಇದೀಗ ಇಪಿಎಫ್‌ಒದ ಈ ನಿರ್ಧಾರವು ನೌಕರರು ಹಾಗೂ ಅವರ ಕುಟುಂಬದವರಿಗೆ ದೊಡ್ಡ ಪರಿಹಾರವನ್ನು ನೀಡಲಿದೆ.

EPFO EDLI Rules6/8

ಇಡಿಎಲ್‌ಐ ಯೋಜನೆಯಡಿ ಕನಿಷ್ಠ ಪಾವತಿ ಹೆಚ್ಚಳ

ಇಪಿಎಫ್‌ಒ ಇಡಿಎಲ್‌ಐ ಯೋಜನೆಯಡಿ ಕನಿಷ್ಠ ಪಾವತಿಯನ್ನು ₹50,000 ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.

EPFO EDLI Rules7/8

ಇಡಿಎಲ್‌ಐ ಕ್ಲೇಮ್‌ಗಳಿಗೆ ಸಂಬಂಧಿಸಿದಂತೆ ದೊಡ್ಡ ಹೆಜ್ಜೆ

ಇಪಿಎಫ್‌ಒ ಹೊಸ ನಿಯಮಾನುಸಾರ ಒಂದೊಮ್ಮೆ ನೌಕರರ ಸರಾಸರಿ ಪಿಎಫ್‌ ಬಾಕಿ ₹50,000ಕ್ಕಿಂತ ಕಡಿಮೆ ಇದ್ದಾಗ್ಯೂ ಹಾಗೂ ಉದ್ಯೋಗಿ 12 ತಿಂಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸದಿದ್ದರೂ ಸಹ ಉದ್ಯೋಗಿಯ ನಾಮಿನಿ ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗೆ ಈ ಪ್ರಯೋಜನ ಲಭ್ಯವಾಗಲಿದೆ.   

EPFO EDLI Rules8/8

ಯಾವಾಗ ಸಿಗುತ್ತೆ ₹50,000

ಯಾವುದೇ ಉದ್ಯೋಗಿ ಪಿಎಪ್‌ ಕೊಡುಗೆ ನೀಡಿದ ಆರು ತಿಂಗಳೊಳಗೆ ಮರಣ ಹೊಂದಿದ ಪ್ರಕರಣಗಳಿಗೂ ಈ ಹೊಸ ನಿಯಮ ಅನ್ವಯವಾಗುತ್ತದೆ. ಅಲ್ಲದೆ ಇಪಿಎಫ್‌ಒ ಖಾತೆ ಶೂನ್ಯವಾಗಿದ್ದರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಇಪಿ‌ಎಫ್ಒ ನಿಯಮದ ಪ್ರಕಾರ, ಪಿ‌ಎಫ್ ಖಾತೆದಾರರು ಉದ್ಯೋಗ ತೊರೆದು ಅಥವಾ ತಮ್ಮ ಕೊನೆ ಸಂಬಳ ಪಡೆದು ಆರು ತಿಂಗಳ ಬಳಿಕ ಸಾವಿಗೀಡಾದರೂ ಅಂತಹ ಸಂದರ್ಭದಲ್ಲೂ ಅವರ ಕುಟುಂಬಕ್ಕೆ ಈ ವಿಮಾ ರಕ್ಷಣೆ ಆರ್ಥಿಕ ಭದ್ರತೆ ಒದಗಿಸಲಿದೆ.