EPFO Rules: 2025ರಲ್ಲಿ ಇಪಿಎಫ್ಒದ 8 ಪ್ರಮುಖ ನಿಯಮ ಬದಲಾವಣೆ, ನೌಕರರು ಪಿಂಚಣಿದಾರರ ಜೇಬಿನ ಮೇಲೆ ನೇರ ಪರಿಣಾಮ

Written ByYashaswini V
Published: Nov 20, 2025, 10:59 AM IST|Updated: Nov 20, 2025, 10:59 AM IST

EPFO News: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. 2025ರಲ್ಲಿ ಕಳೆದ 10 ತಿಂಗಳಿನಲ್ಲಿ ಪಿಎಫ್ ವರ್ಗಾವಣೆಯಿಂದ ಹಿಡಿದು ಪಿಂಚಣಿ ಮಿತಿ ಹೆಚ್ಚಳದವರೆಗೆ ಇಪಿಎಫ್ಒಗೆ ಸಂಬಂಧಿಸಿದ 'ಎಂಟು' ಪ್ರಮುಖ ನಿಯಮಗಳು ಬದಲಾಗಿವೆ. ಈ ಎಲ್ಲಾ ನಿಯಮಗಳು ಇಡೀ ಭಾರತದಾದ್ಯಂತ ಲಕ್ಷಾಂತರ ಉದ್ಯೋಗಿಗಳು ಮತ್ತು ನೌಕರರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇಪಿಎಫ್ಒದ ಬದಲಾದ 8 ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ. 

EPFO Rules Change1/8

ಅಧಿಕ ಪಿಂಚಣಿ

ಇಪಿಎಫ್‌ಒ ಹೊಸ ನಿಯಮಗಳ ಅಡಿಯಲ್ಲಿ, ಈಗ ಉದ್ಯೋಗಿಗಳ ಪಿಂಚಣಿ ಲೆಕ್ಕಾಚಾರ ವಿಧಾನ ಸಂಪೂರ್ಣವಾಗಿ ಬದಲಾಗಿದೆ. ಈ ಮೊದಲು ನೌಕರರ ಕೊನೆಯ ವೇತನವನ್ನು ಆಧರಿಸಿ ಪಿಂಚಣಿಯನ್ನು ನಿರ್ಧರಿಸಲಾಗುತ್ತಿತ್ತು. ಇದೀಗ ಅವರ 60 ತಿಂಗಳ ಸರಾಸರಿ ವೇತನ ಆಧರಿಸಿ ಪಿಂಚಣಿಯನ್ನು ಲೆಕ್ಕಾಹಾಕಲಾಗುತ್ತದೆ. ಇದರಿಂದ ನಿವೃತ್ತ ನೌಕರರಿಗೆ ನ್ಯಾಯಯುತವಾಗಿ ಅಧಿಕ ಮೊತ್ತದ ಪಿಂಚಣಿ ಕೈ ಸೇರುತ್ತದೆ. 

EPFO Rules Change2/8

ಪಿಎಫ್ ಮುಂಗಡ ಹಣ

ನೌಕರರಿಗೆ ಮನೆ ಕಟ್ಟಲು, ಮಕ್ಕಳ ವಿದ್ಯಾಭ್ಯಾಸ, ಶಿಕ್ಷಣ ಅಥವಾ ವೈದ್ಯಕೀಯ ತುರ್ತುಸ್ಥಿತಿಯಂತಹ ಸಂದರ್ಭದಲ್ಲಿ ಭವಿಷ್ಯ ನಿಧಿಯಿಂದ (ಪಿಎಫ್) ಮುಂಗಡ ಹಣದ ಅಗತ್ಯವಿದ್ದರೆ ಇದೀಗ ಹೆಚ್ಚು ಸಮಯ ಕಾಯುವ ಅಗತ್ಯವಿಲ್ಲ. ಈ ಸೌಲಭ್ಯವು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಉದ್ಯೋಗಿಗಳಿಗೆ ಹಣದ ಅಗತ್ಯವಿದ್ದಾಗ ನಿಮ್ಮ ಪಿಎಫ್ ಮುಂಗಡ ಪಾವತಿಗೆ ಅಪ್ಲೈ ಮಾಡಬಹುದಾಗಿದೆ. ಹೊಸ ನಿಯಮಗಳ ಅಡಿಯಲ್ಲಿ, ಇಪಿಎಫ್‌ಒ "ಸ್ವಯಂ-ಕ್ಲೇಮ್ ಸೆಟಲ್ಮೆಂಟ್ ಸಿಸ್ಟಮ್" ಅನ್ನು ಪರಿಚಯಿಸಿದ್ದು, ದಿನದ 24ಗಂಟೆಯೂ ಯಾವುದೇ ಸಮಯದಲ್ಲಿ ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ. ಇದು ಇಪಿಎಫ್ಒದ ಲಕ್ಷಾಂತರ ಸದಸ್ಯರಿಗೆ ಪರಿಹಾರ ಒದಗಿಸುತ್ತದೆ. 

EPFO Rules Change3/8

ಪಿಎಫ್ ಸಂಪೂರ್ಣ ವಿತ್ ಡ್ರಾ

ಪಿಎಫ್ ಹಣ ವಿತ್ ಡ್ರಾ ನಿಯಮದಲ್ಲೂ ನೌಕರರ ಭವಿಷ್ಯ ನಿಧಿ ಸಂಸ್ಥೆ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ. ಇದೀಗ ಪಿಎಫ್ ಹಿಂಪಡೆಯುವಿಕೆಗೆ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು  ಇಪಿಎಫ್ ಸದಸ್ಯರು ತಮ್ಮ ಖಾತೆಯ "ಅರ್ಹ ಬ್ಯಾಲೆನ್ಸ್" ನ 100% ವರೆಗೆ ಹಿಂಪಡೆಯಬಹುದಾಗಿದೆ. ಆದಾಗ್ಯೂ, ನಿವೃತ್ತಿಗಾಗಿ  ಪಿಎಫ್ ಖಾತೆಯಲ್ಲಿ ಬಡ್ಡಿಯನ್ನು ಗಳಿಸುವುದನ್ನು ಮುಂದುವರಿಸಲು ಕನಿಷ್ಠ 25% ಬಾಕಿ ಮೊತ್ತವು ಉಳಿಸಬೇಕಾಗುತ್ತದೆ. 

EPFO Rules Change4/8

ಪಿಂಚಣಿ ಕೊಡುಗೆ

ಇಪಿಎಫ್‌ಒ ತನ್ನ ಉದ್ಯೋಗಿಗಳಿಗೆ ಮಾಸಿಕ ಗರಿಷ್ಠ ಪಿಂಚಣಿ ಮಿತಿಯನ್ನು ₹7,500 ರಿಂದ ₹15,000 ಕ್ಕೆ ಹೆಚ್ಚಿಸುವ ಮೂಲಕ ಪ್ರಮುಖ ಪಿಂಚಣಿ ಕೊಡುಗೆಗೆ ಸಂಬಂಧಿಸಿದಂತೆ ದೊಡ್ಡ ಪರಿಹಾರವನ್ನು ನೀಡಿದೆ. ಇದರಿಂದ ಹೆಚ್ಚುತ್ತಿರುವ ಹಣದುಬ್ಬರದ ಸಮಯದಲ್ಲಿ ನೌಕರರು ನಿವೃತ್ತಿಯ ಬಳಿಕವೂ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು. 

EPFO Rules Change5/8

ಎಟಿಎಂ ಮೂಲಕ ಪಿಎಫ್ ವಿತ್ ಡ್ರಾ

ತ್ವರಿತವಾಗಿ ನೀವು ಪಿಎಫ್ ಖಾತೆಯಿಂದ ಹಣ ಹಿಂಪಡೆಯಲು ಅನುಕೂಲವಾಗುವಂತೆ ಇದೀಗ ಇಪಿಎಫ್‌ಒ ಆನ್‌ಲೈನ್ ಕ್ಲೈಮ್ ಪ್ರಕ್ರಿಯೆಯನ್ನು ತುಂಬಾ ಸರಳಗೊಳಿಸಿದ್ದು, ಪಿಎಫ್ ಖಾತೆಯಿಂದ ಕೆಲವೇ ನಿಮಿಷಗಳಲ್ಲಿ ಎಟಿಎಂ ಮೂಲಕವೇ ಮುಂಗಡ ಹಣವನ್ನು ಹಿಂಪಡೆಯಬಹುದಾಗಿದೆ. ಆದಾಗ್ಯೂ, ಇದಕ್ಕಾಗಿ ನಿಮ್ಮ ಯುಎಎನ್ ಸಕ್ರಿಯವಾಗಿರುವುದರ ಜೊತೆಗೆ ಕೆವೈಸಿ ಪೂರ್ಣಗೊಳಿಸಿರಬೇಕು. ನಿಮ್ಮ ಬ್ಯಾಂಕ್ ಯುಎಎನ್ ಖಾತೆ ಲಿಂಕ್ ಆಗಿರುವುದು ಅಗತ್ಯವಾಗಿದೆ. 

EPFO Rules Change6/8

ಸ್ವಯಂಚಾಲಿತವಾಗಿ ಹಣ ವರ್ಗಾವಣೆ

ಇಪಿಎಫ್‌ಒ ಹೊಸ ನಿಯಮವು ಖಾಸಗಿ ಉದ್ಯೊಗಿಗಳು ಸಾಮಾನ್ಯವಾಗಿ ಎದುರಿಸುತ್ತಿದ್ದ ದೊಡ್ಡ ಸಮಸ್ಯೆಗೆ ಪರಿಹಾರವನ್ನು ನೀಡಿದೆ. ಯಾವುದೇ ಉದ್ಯೋಗಿ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸ ಬದಲಾಯಿಸಿದಾಗ ಇದೀಗ ಪಿಎಫ್ ಖಾತೆಯನ್ನು ಇಪಿಎಫ್‌ಒ ಸ್ವಯಂಚಾಲಿತವಾಗಿ ವರ್ಗಾಯಿಸುತ್ತದೆ. ನಿಮ್ಮ ಯುಎಎನ್ (ಯೂನಿವರ್ಸಲ್ ಖಾತೆ ಸಂಖ್ಯೆ) ಅಲ್ಲಿ ಲಿಂಕ್ ಆಗಿದ್ದರೆ, ನಿಮ್ಮ ಹಳೆಯ ಪಿಎಫ್ ಬ್ಯಾಲೆನ್ಸ್ ಮತ್ತು ಅದರ ವಿವರಗಳನ್ನು ಸ್ವಯಂಚಾಲಿತವಾಗಿ ನಿಮ್ಮ ಹೊಸ ಪಿಎಫ್ ಖಾತೆಗೆ ವರ್ಗಾಯಿಸಲಾಗುತ್ತದೆ.

EPFO Rules Change7/8

ಇ-ನಾಮಿನಿ ಕಡ್ಡಾಯ

ಇಪಿಎಫ್‌ಒ ಇದೀಗ ಇಪಿಎಫ್ ಸದಸ್ಯರಿಗೆ ಇ-ನಾಮಿಯನ್ನು ಕಡ್ಡಾಯಗೊಳಿಸಿದೆ. ಉದ್ಯೋಗಿ ಅಥವಾ ನಿವೃತ್ತಿದಾರರ ಮರಣದ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಪಿಎಫ್ ಮತ್ತು ಪಿಂಚಣಿ ನಿಧಿಗಳನ್ನು ಸುಲಭವಾಗಿ ಪಡೆಯುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಇಪಿಎಫ್ಒ ಈ ನಿಯಮವನ್ನು ಜಾರಿಗೊಳಿಸಿದೆ.

EPFO Rules Change8/8

ಇಪಿಎಫ್ಒ 3.0

ನೌಕರರ ಭವಿಷ್ಯ ನಿಧಿ ಸಂಸ್ಥೆ-ಇಪಿಎಫ್ಒ ಡಿಜಿಟಲ್ ವ್ಯವಸ್ಥೆಯತ್ತ ಮುಖ ಮಾಡಿದ್ದು ಇಪಿಎಫ್ಒ 3.0 ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಇಪಿಎಫ್ ಸದಸ್ಯರು ತಮ್ಮ ಮೊಬೈಲ್ ಮೂಲಕವೇ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ.