Fish: ಈ ಮೀನಿನ ಬೆಲೆ ಬರೋಬ್ಬರಿ 25 ಲಕ್ಷದಿಂದ 1 ಕೋಟಿ ರೂ.! ತಿನ್ನೋಕೆ ಆಗದ ಈ ದುಬಾರಿ ಫಿಶ್ ಮತ್ತೇನಕ್ಕೆ ಪ್ರಯೋಜನ?
ಫಿಶ್ ಎಂದರೆ ನಾನ್ ವೆಜ್ ಪ್ರಿಯರಿಗೆ ತುಂಬಾ ಇಷ್ಟವಿರುತ್ತದೆ. ಕೆಲವರು ಇಷ್ಟಪಡದಿರಬಹುದು. ಆದರೆ ಮೀನಿನಲ್ಲಿರುವ ಪೋಷಕಾಂಶ ಮಾನವನ ಆರೋಗ್ಯಕ್ಕೆ ಬಹಳಷ್ಟು ಉಪಕಾರಿ ಎಂದು ಹೇಳಲಾಗುತ್ತದೆ.
ಇಂದು ನಾವು ಜಗತ್ತಿನ ಅತೀ ದೊಡ್ಡ ಮತ್ತು ದುಬಾರಿ ಬೆಲೆಯ ಮೀನಿನ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬ್ಲೂಫಿನ್ ಟ್ಯೂನ ಮೀನು. ಇದನ್ನು ವಿಶ್ವದ ಅತ್ಯಂತ ದುಬಾರಿ ಮೀನು ಎಂದು ಪರಿಗಣಿಸಲಾಗಿದೆ. ನೀರಿನಲ್ಲಿ ಬಹಳ ವೇಗವಾಗಿ ಚಲಿಸುವ ಮೀನುಗಳಲ್ಲಿ ಇದೈ ಒಂದು.
ಒಂದೊಂದು ಮೀನು ಸಹ ಸುಮಾರು 250 ಕೆ ಜಿ ತೂಕದ ಜೊತೆ, 3 ಮೀಟರ್ ಉದ್ದವಿರುತ್ತದೆ. ಇದರಲ್ಲಿರುವ ಪ್ರೋಟೀನ್ ಮತ್ತು ಒಮೆಗಾ-3 ಅಂಶವನ್ನು ಔಷಧಿ ತಯಾರಿಕೆಗೆ ಬಳಸಲಾಗುತ್ತದೆ.
ಸಮುದ್ರದ ಆಳಕ್ಕೆ ಬೇಕಾದರೂ ತೆರಳುವಂತಹ ಸಾಮಾರ್ಥ್ಯ ಈ ಮೀನಿಗಿದ್ದು, ಇದರ ಆಯಸ್ಸು ಸುಮಾರು 40 ವರ್ಷ.
ಅಳಿವಿನಂಚಿನಲ್ಲಿರುವ ಈ ಮೀನನ್ನು ಬೇಟೆಯಾಡುವಂತಿಲ್ಲ. ಒಂದುವೇಳೆ ಬೇಟೆಯಾಡಿದರೆ ಕಠಿಣ ಜೈಲು ಶಿಕ್ಷೆಯ ಜೊತೆ ದಂಡ ವಿಧಿಸಲಾಗುತ್ತದೆ.
ಬ್ಲೂಫಿನ್ ಟ್ಯೂನ ಮೀನುಗಳನ್ನು ನೋಡಲು ಅನೇಕ ಜನರು ಕಾದು ಕುಳಿತಿರುತ್ತಾರೆ. ಆದರೆ ಇದು ಕಾಣಿಸೋದು ಅಪರೂಪಕ್ಕೆ. ಇನ್ನು ಈ ಮೀನಿನ ಬೆಲೆ ಸುಮಾರು 25 ಲಕ್ಷದಿಂದ 1 ಕೋಟಿಯವರೆಗೆ ಇದೆ ಎಂದು ಹೇಳಲಾಗುತ್ತದೆ.