ಹಿರಿಯ ನಿರ್ದೇಶಕರೊಂದಿಗೆ ವಿಹಾಹ.. ಗರ್ಭಿಣಿಯಾಗಿದ್ದಾಗಲೇ ಎರಡನೇ ಮದುವೆಯಾದ ಪ್ರಖ್ಯಾತ ನಟಿ!

Written BySavita M B
Published: Dec 02, 2025, 12:50 PM IST|Updated: Dec 02, 2025, 12:50 PM IST

 Famous Kannada Actress: ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬರ ಜೀವನವೂ ಅವರ ಪಾತ್ರಗಳಂತೆ ಬಣ್ಣ ಬಣ್ಣವಾಗಿರುವುದಿಲ್ಲ.. ಅದೇ ರೀತಿ ಇಂದು ನಾವು ಮಾತನಾಡುತ್ತಿರುವ ನಟಿಯೊಬ್ಬರ ಜೀವನವೂ ಸಾಕಷ್ಟು ಏರಿಳಿತಗಳಿಂದ ಕೂಡಿತ್ತು.. ಹಾಗಾದರೇ ಯಾರು ಆ ನಟಿ..?   
 

1/6

ಕೇರಳದಿಂದ ಬಂದು ತಮಿಳು ಸಿನಿಮಾಗಳಲ್ಲಿ ಸ್ಟಾರ್ ಹೀರೋಯಿನ್ ಎನಿಸಿಕೊಂಡಿದ್ದ ಈ ನಟಿಯನ್ನ ನಿರ್ದೇಶಕ ಎ.ಎಲ್. ವಿಜಯ್ ಪ್ರೀತಿಸಿ ಮದುವೆಯಾದ. ಆದರೆ ಅವರಿಬ್ಬರ ನಡುವಿನ ಜಗಳದಿಂದಾಗಿ ವಿಚ್ಛೇದನ ಪಡೆದರು. ಆ ನಂತರ ಆಕೆ ಧನುಷ್ ಜೊತೆ ಅಫೇರ್ ಹೊಂದಿದ್ದಾಳೆ ಎಂದು ಇಂಡಸ್ಟ್ರಿಯಲ್ಲಿ ಚರ್ಚೆಯಾಗಿತ್ತು.. ಆದರೆ ಅದು ಬರೀ ವದಂತಿಯಾಗಿತ್ತು..    

2/6

 ಮುಂದೆ ಆರು ವರ್ಷಗಳ ನಂತರ ನಟಿ ಮತ್ತೆ ಪ್ರೀತಿಯ ಬಲೆಗೆ ಬಿದ್ದು ಮದುವೆಗೆ ಮುಂಚೆಯೇ ಗರ್ಭಿಣಿಯಾದರು. ಮತ್ತು ಬೇಬಿ ಬಂಪ್‌ ಜೊತೆಗೆ ಮದುವೆಯಾದರು.. ಆ ನಟಿ ಬೇರಾರೂ ಅಲ್ಲ.. ಸೌತ್‌ ಬ್ಯೂಟಿ ಅಮಲಾ ಪೌಲ್.. ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಸಿನಿಮಾದಿಂದ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು..     

3/6

ಇವರು ‘ಸಿಂಧು ಸಮವೇಲಿ’ ಚಿತ್ರದ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟರೂ ಅವರಿಗೆ ಹೆಸರು ತಂದುಕೊಟ್ಟಿದ್ದು ‘ಮೈನಾ’ ಸಿನಿಮಾ. ಆ ಚಿತ್ರದ ನಂತರ ಅವರಿಗೆ ತಮಿಳು ಸಿನಿಮಾಗಳಲ್ಲಿ ಅವಕಾಶಗಳು ಬಂದವು. ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆದರು.    

4/6

ಎ.ಎಲ್. ವಿಜಯ್ ಜೊತೆ ಬ್ರೇಕ್ ಅಪ್ ಆದ ನಂತರ ಅಮಲಾ ಪೌಲ್ ‘ಆಡೈ’ ಚಿತ್ರದಲ್ಲಿ ಬಟ್ಟೆ ಇಲ್ಲದೆ ನಟಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಆ ನಂತರ ಆಕೆಗೆ ತಮಿಳು ಚಿತ್ರಗಳಲ್ಲಿ ಅವಕಾಶ ಕಡಿಮೆಯಾಯಿತು. ಅವರು 'ಬೋಲಾ', 'ಆಡುಜೀವಿತಂ' ಮತ್ತು 'ಲೆವೆಲ್ ಕ್ರಾಸ್' ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.    

5/6

ಎ.ಎಲ್. ವಿಜಯ್ ಜೊತೆ ಬ್ರೇಕ್ ಅಪ್ ಆದ ನಂತರ ಅಮಲಾ ಪೌಲ್ ‘ಆಡೈ’ ಚಿತ್ರದಲ್ಲಿ ಬಟ್ಟೆ ಇಲ್ಲದೆ ನಟಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಆ ನಂತರ ಆಕೆಗೆ ತಮಿಳು ಚಿತ್ರಗಳಲ್ಲಿ ಅವಕಾಶ ಕಡಿಮೆಯಾಯಿತು. ಅವರು 'ಬೋಲಾ', 'ಆಡುಜೀವಿತಂ' ಮತ್ತು 'ಲೆವೆಲ್ ಕ್ರಾಸ್' ನಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.    

6/6

ಕಳೆದ ವರ್ಷ, ಅಮಲಾ ಪೌಲ್ ಜಗತ್ ದೇಸಾಯಿ ಎಂಬ ವ್ಯಕ್ತಿಯೊಂದಿಗೆ ಎರಡನೇ ಬಾರಿಗೆ ವಿವಾಹವಾದರು. ಮದುವೆಯಾದ 8 ತಿಂಗಳ ನಂತರ ಒಬ್ಬ ಮಗ ಜನಿಸಿದನು. ಆದರೆ ಮದುವೆಗೂ ಮುನ್ನವೇ ನಟಿ ಗರ್ಭಿಣಿಯಾಗಿರುವುದು ಎಲ್ಲರಿಗೂ ಗೊತ್ತಾಗಿತ್ತು. ಕಳೆದ ಜೂನ್ ನಲ್ಲಿ ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗನ ಜನನದ ನಂತರ ಸಿನಿಮಾದಿಂದ ದೂರ ಉಳಿದಿರುವ ಅಮಲಾ ಪೌಲ್ ಸದ್ಯ ಮಗನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ.