Sonu Gowda: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸೋನು ಗೌಡ ಖಾಸಗಿ ಫೋಟೊಗಳು ಲೀಕ್ ಆಗಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಯಾರು ಇಂಥ ಕೆಲಸ ಮಾಡಿದ್ದು ಎಂಬ ಪ್ರಶ್ನೆ ಅವರ ಅಭಿಮಾನಿಗಳ ಮನಸ್ಸಿನಲ್ಲೂ ಮೂಡಿತ್ತು. ಇದೀಗ ಖುದ್ದು ನಟಿ ಸೋನು ಗೌಡ ಅವರೇ ಉತ್ತರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.
ಸೋನು ಗೌಡ ತಮ್ಮ ಮದುವೆ ಹಾಗೂ ಡಿವೋರ್ಸ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ತಮ್ಮ ಖಾಸಗಿ ಫೋಟೋ ಲೀಕ್ ಮಾಡಿದವರ ಬಗ್ಗೆಯೂ ಹೇಳಿದ್ದಾರೆ.
ಇಂತಿ ನಿನ್ನ ಪ್ರೀತಿಯ ಸಿನಿಮಾ ಖ್ಯಾತಿಯ ನಟಿ ಸೋನು ಗೌಡ ಮೇಕಪ್ ಆರ್ಟಿಸ್ಟ್ ರಾಮಕೃಷ್ಣ ಪುತ್ರಿ. ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನೇ ಆಯ್ದುಕೊಳ್ಳುವ ನಟಿ ಸೋನು ಗೌಡ ಜೀವನದ ಕರಾಳ ಘಟನೆಯೇ ಖಾಸಗಿ ಫೋಟೋ ಲೀಕ್ ಆದ ಸಂದರ್ಭ.
ಸೋನು ಗೌಡ 2010ರಲ್ಲಿ ಮನೋಜ್ ಕುಮಾರ್ ಎಂಬುವವರ ಜೊತೆ ಮದುವೆ ಆದರು. ಆದರೆ ದಾಂಪತ್ಯ ಬಹುಕಾಲ ಉಳಿಯಲಿಲ್ಲ. ಸೋನು ಗೌಡ ಪತಿಯಿಂದ ದೂರವಾಗಿ ಒಬ್ಬಂಟಿಯಾಗಿಯೇ ಬದುಕು ನಡೆಸಬೇಕಾಯಿತು.
ನನ್ನ ಗಂಡ ಮತ್ತು ನನ್ನ ವಯಸ್ಸಿನ ಸಾಕಷ್ಟು ವ್ಯತ್ಯಾಸ ಇತ್ತು. ಅವನು ಯಾವತ್ತೂ ನನ್ನನ್ನು ಬಿಟ್ಟುಕೊಡಲ್ಲ ಎಂಬ ನಂಬಿಕೆಯಿತ್ತು. ಹುಡುಗನ ತಪ್ಪು, ಹುಡುಗಿಯ ತಪ್ಪು ಅಂತಲ್ಲ. ಯಾರೇ ಆಗಲಿ ಅವರು ಯೋಚನೆ ಮಾಡುವ ರೀತಿ ತಪ್ಪಾಗಿರುತ್ತೆ ಅಷ್ಟೇ ಎಂದಿದ್ದಾರೆ.
ಆ ಸಮಯದಲ್ಲಿ ಎಷ್ಟೇ ಜನ ನನ್ನ ಬಳಿ ಇದ್ದರೂ ನನಗೆ ಅವನೇ ಬೇಕು ಅಂತ ಅಂದುಕೊಂಡೆ. ಅವನ ಜೊತೆ ನಾನು ತುಂಬಾ ಕಂಫರ್ಟ್ ಫೀಲ್ ಮಾಡ್ತಿದ್ದೆ. ನನಗೋಸ್ಕರ ಎಲ್ಲ ಮಾಡ್ತಾನೆ ಅಂತ ನನ್ನ ತಲೇಲಿ ಇತ್ತು ಎಂದರು.
ಆರು ವರ್ಷದಲ್ಲಿ ನಾನು ನನ್ನ ಎಲ್ಲ ಅಕೌಂಟ್ ಡಿಟೇಲ್ಸ್ ಅವನಿಗೆ ಕೊಟ್ಟಿದ್ದೆ. ನಮ್ಮ ಸಂಬಂಧ ಕೆಟ್ಟಾಗ ಮಗು ಮಾಡ್ಕೋ ಎಂದು ಅನೇಕರು ನನಗೆ ಸಜೇಷನ್ ಕೊಟ್ಟರು. ಆದರೆ ನಮ್ಮ ಡಿವೋರ್ಸ್ ಆಯ್ತು. ನಾನು ಅವರಿಂದ ಜೀವನಾಂಶ ತೆಗೆದುಕೊಂಡಿಲ್ಲ. ಪ್ರೈವೇಟ್ ಫೋಟೋಗಳು ಲೀಕ್ ಆಯ್ತು ಎಂದಿದ್ದಾರೆ.
ಫೋಟೋ ಲೀಕ್ ಆದ ಘಟನೆ ನನ್ನ ಜೀವನದಲ್ಲಿ ನಡೆಯಬಾರದಿತ್ತು. ದೇವರ ಮೇಲೂ ಬೇಸರವಾಗಿ ದೇವಸ್ಥಾನಕ್ಕೆ ಹೋಗೋದನ್ನೇ ಬಿಟ್ಟೆ. ಡಿವೋರ್ಸ್ ತೆಗೆದುಕೊಳ್ಳಲು ಇಷ್ಟ ಇಲ್ಲದೇ ಸತ್ತೇ ಹೋಗಬೇಕು ಅನ್ನಿಸುತ್ತಿತ್ತು. ನನಗೆ ದುಡ್ಡಲ್ಲ, ನನ್ನ ಮಾಜಿ ಗಂಡ ಮನು ಬೇಕಾಗಿತ್ತು ಎಂದಿದ್ದಾರೆ.
ಆ ಲೀಕ್ ಆದ ಫೊಟೋ ಕ್ಲಿಕ್ ಮಾಡಿದ್ದು ಮದುವೆ ಹೊಸತರಲ್ಲಿ. ಅದು ಗೂಗಲ್ ಡ್ರೈವ್‌ನಲ್ಲಿ ಬ್ಯಾಕ್ ಅಪ್ ಆಗಿತ್ತು. ನನ್ನ ಫೇಸ್‌ಬುಕ್ ಹ್ಯಾಕ್ ಆಗಿತ್ತು. ನನ್ನ ಗೂಗಲ್ ಡ್ರೈವ್ ಅಲ್ಲಿದ್ದ ಫೋಟೋ ತೆಗೆದುಕೊಂಡು ವೈರಲ್ ಮಾಡಿದ್ರು. ಇದನ್ನು ಯಾರೋ ಮೂರನೇ ವ್ಯಕ್ತಿ ಮಾಡಿರುವುದು. ನನ್ನ ಮಾಜಿ ಪತಿ ಫೋಟೋ ಲೀಕ್ ಮಾಡಿಲ್ಲ ಎಂದಿದ್ದಾರೆ.
ಸೈಬರ್ ಪೊಲೀಸರ ಬಳಿ ಹೋಗಿ ಎಲ್ಲ ಡಿಲಿಟ್ ಮಾಡಿಸಿದ್ದೇವೆ. 2018ರಲ್ಲಿ ಡಿವೋರ್ಸ್ ಆಯ್ತು. ಜೀವನದಲ್ಲಿ ಸಾಕಷ್ಟು ಕಷ್ಟ ಎದುಸಿದ್ದೇನೆ. ಎಲ್ಲ ಕಹಿ ಘಟನೆ ಮುಗಿದ ಅಧ್ಯಾಯ. ಎಲ್ಲವನ್ನೂ ಮರೆತು ಮುಂದೆ ಸಾಗಿದ್ದೇನೆ ಎಂದು ಸೋನು ಗೌಡ ಅವರು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿದ್ದಾರೆ.