Weight Loss Tips: ಕಷ್ಟಕರವಾದ ಡಯಟ್ ಅನುಸರಿಸಬೇಕಿಲ್ಲ. ಕಠಿಣ ವ್ಯಾಯಾಮದ ಮೊರೆ ಹೋಗಬೇಕಾದ ಅನಿವಾರ್ಯವೂ ಇಲ್ಲ. ಆದರೆ, ವಾರಕ್ಕೆ ಒಂದೇ ಒಂದು ದಿನ ಈ ಕೆಲಸ ಮಾಡಿದರೆ ನೈಸರ್ಗಿಕವಾಗಿ ತೂಕ ಇಳಿಸಿ, ಉಬ್ಬಿರುವ ಹೊಟ್ಟೆಯನ್ನು ಸ್ಲಿಮ್ ಆಗಿಸಬಹುದು. ಅಷ್ಟೇ ಅಲ್ಲ, ಸ್ಥೂಲಕಾಯತೆ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
1/6ಯಾವುದೇ ಕಠಿಣ ಆಹಾರ ಪದ್ಧತಿ ಅನುಸರಿಸದೆ, ದೇಹ ದಂಡಿಸದೆ ಡೊಳ್ಳು ಹೊಟ್ಟೆಯನ್ನು ಕರಗಿಸಲು, ಸ್ಥೂಲಕಾಯತೆ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಧ್ಯ ಎಂದರೆ ನಿಮಗೆ ನಂಬಲು ಅಸಾಧ್ಯವೆನಿಸಬಹುದು. ಆದರೆ, ಪ್ರಕೃತಿ ಚಿಕಿತ್ಸಾ ವೈದ್ಯರ ಸಲಹೆಯನ್ನು ಅನುಸರಿಸಿದರೆ ಇದು ಕಷ್ಟವೂ ಅಲ್ಲ. ವೈದ್ಯರ ಪ್ರಕಾರ, ವಾರದಲ್ಲಿ ಒಂದು ದಿನ ಪೂರ್ತಿ ಉಪವಾಸ ಮಾಡಿದರೆ ನೈಸರ್ಗಿಕವಾಗಿ ತೂಕ ಇಳಿಸಲು ಸಾಧ್ಯವಾಗುತ್ತದೆ.
2/6ಇದೇನಪ್ಪ ಏನು ಮಾಡೋದು ಬೇಡ ಅಂತ ಹೇಳಿ ಉಪವಾಸ ಮಾಡೋಕೆ ಹೇಳ್ತಾರಲ್ಲ ಎಂದುಕೊಳ್ಳಬೇಡಿ. ಉಪವಾಸ ಎಂದರೆ ಏನನ್ನೂ ತಿನ್ನಬಾರದಷ್ಟೇ. ಆದರೆ, ಎರಡು ಗಂಟೆಗೊಮ್ಮೆ ಕೆಲವು ಪಾನೀಯಗಳನ್ನು ಕುಡಿಯಬಹುದು. ಪಾನೀಯ ಅಂದ್ರೆ, ನಿಮ್ಮಿಷ್ಟದ ಕೋಲ್ಡ್ ಡ್ರಿಂಕ್ಸ್ ಅಲ್ಲವೇ ಅಲ್ಲ... ತೂಕ ಇಳಿಕೆಗಾಗಿ ಇನ್ನೇನ್ ಕುಡಿಬೇಕು ತಿಳಿಯಲು ಮುಂದೆ ಓದಿ...
3/6ನಿಮಗೆ ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲದಿದ್ದರೆ ತೂಕ ಇಳಿಕೆಗಾಗಿ ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ನಿಂಬೆ ರಸ, ಒಂದು ಸ್ಪೂನ್ ಜೇನು ತುಪ್ಪ ಬೆರೆಸಿ ಕುಡಿಯಿರಿ. ನೀವು ಉಪವಾಸ ಇರುವ ದಿನ ಪ್ರತಿ ಎರಡು ಗಂಟೆಗೊಮ್ಮೆ ಈ ನೀರನ್ನು ಕುಡಿಯುವುದು ಬಾಡಿ ಡಿಟಾಕ್ಸ್ ಮಾಡುವಲ್ಲಿ ಪರಿಣಾಮಕಾರಿ ಆಗಿದೆ.
4/6ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಲೆಮನ್ ಹನಿ ವಾಟರ್ ಬದಲಿಗೆ ಮಜ್ಜಿಗೆಯನ್ನು ಕಡಿದು ಅದರಲ್ಲಿ ಇಂಗು ಬೆರೆಸಿ ಪ್ರತಿ ಎರಡು ಗಂಟೆಗೊಮ್ಮೆ ದಿನವಿಡೀ ಕುಡಿಯುವುದರಿಂದ ದೇಹದಲ್ಲಿ ಹೆಚ್ಚುವರಿಯಾಗಿ ಶೇಖರವಾಗಿರುವ ಕೊಲೆಸ್ಟ್ರಾಲ್ ಕರಗಿಸಲು ಸಹಕಾರಿ ಆಗಿದೆ.
5/6ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸೋರೆಕಾಯಿ ಜ್ಯೂಸ್ ಕೂಡ ವರದಾನ ಎಂತಲೇ ಹೇಳಬಹುದು. ಇದರಿಂದ ನ್ಯಾಚುರಲ್ ಆಗಿ ದೇಹದ ಹೆಚ್ಚುವರಿ ಕೊಬ್ಬು ಕರಗುತ್ತದೆ.
6/6ಉಪವಾಸ ಇರುವಾಗ ಒಂದೊಮ್ಮೆ ನಿಮಗೆ ಏನಾದರೂ ತಿನ್ನಲೇ ಬೇಕು ಎಂದೆನಿಸಿದರೆ ಈ ಪಾನೀಯಗಳನ್ನು ಕುಡಿಯುವುದರ ಜೊತೆಗೆ ಆಗಾಗ್ಗೆ ಸೌತೆಕಾಯಿ ತಿನ್ನಬಹುದು. ಈ ರೀತಿ ಕನಿಷ್ಠ ವಾರಕ್ಕೆ ಒಂದು ದಿನ ಉಪವಾಸ ಮಾಡಿದರೆ ಆರೋಗ್ಯಕರವಾಗಿ ತೂಕ ಇಳಿಕೆ ಮಾಡಿ ಡೊಳ್ಳು ಹೊಟ್ಟೆ ಕರಗಿಸಿ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.