ಕೂದಲಿಗೆ ವರದಾನ ʼಈʼ ಕಾಳು! ಪೇಸ್ಟ್‌ ಮಾಡಿ ಹಚ್ಚಿದ್ರೆ ಮೊನಕಾಲುದ್ದ, ಕಡುಕಪ್ಪು ಕೇಶರಾಶಿ ನಿಮ್ಮದಾಗುತ್ತೆ!

Sat, 14 Dec 2024-12:07 pm,

 ಮೆಂತ್ಯ ಬೀಜಗಳು ನಿಮ್ಮ ಕೂದಲಿಗೆ ವರದಾನಕ್ಕಿಂತ ಕಡಿಮೆಯಿಲ್ಲ, ಅವು ಪ್ರೋಟೀನ್, ಕಬ್ಬಿಣ, ಜೀವಸತ್ವಗಳು ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಅದರ ಸಹಾಯದಿಂದ ನೀವು ನಿಮ್ಮ ಕೂದಲನ್ನು ಕಪ್ಪು, ದಪ್ಪ ಮತ್ತು ಬಲವಾಗಿ ಮಾಡಬಹುದು.      

ಮೆಂತ್ಯ ಬೀಜದ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ... ಈ ಬೀಜಗಳು ಕೂದಲಿನ ಹಾನಿಯನ್ನು ತಡೆದು ಹೊಸಹೊಳಪನ್ನು ನೀಡುತ್ತವೆ.. ಇದು ಹೇರಳ ಪ್ರೋಟೀನ್ಗಳು ಮತ್ತು ವಿಟಮಿನ್ಗಳನ್ನು ಹೊಂದಿದ್ದು ಇದರಿಂದ ಕೂದಲಿನ ಬೆಳವಣಿಗೆಯು ಹೆಚ್ಚಾಗುತ್ತದೆ..      

ಮೆಂತ್ಯ ಬೀಜಗಳನ್ನು ಕೂದಲಿನ ಎಲ್ಲಾ ಸಮಸ್ಯೆಗೆ ರಾಮಬಾಣ ಎಂದು ಹೇಳಲಾಗುತ್ತದೆ. ಮೆಂತ್ಯವನ್ನು ನೀರಿನಲ್ಲಿ ನೆನೆಸಿ, ನಂತರ ಅದನ್ನು ಪೇಸ್ಟ್ ಮಾಡಿ, ಅದನ್ನು ಕೂದಲು ಮತ್ತು ನೆತ್ತಿಯ ಮೇಲೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ನಂತರ ನಿಮ್ಮ ಕೂದಲನ್ನು ತೊಳೆದುಕೊಳ್ಳಿ, ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಬಹುದು.      

 ಅಲ್ಲದೇ ಮೆಂತ್ಯವನ್ನು ಎಣ್ಣೆಯಲ್ಲಿ ಬಿಸಿ ಮಾಡಿ, ತಣ್ಣಗಾಗಿಸಿ, ಆ ಎಣ್ಣೆಯಿಂದ ನಿಮ್ಮ ಕೂದಲು ಮತ್ತು ನೆತ್ತಿಗೆ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಟ್ಟು ಮರುದಿನ ಬೆಳಿಗ್ಗೆ ನಿಮ್ಮ ಕೂದಲನ್ನು ತೊಳೆಯಿರಿ.      

ಇನ್ನೊಂದು ವಿಧಾನವೆಂದರೆ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಮರುದಿನ ಅದರ ಪೇಸ್ಟ್‌ನ್ನು ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಿರಿ.. ಹೀಗೆ ಮಾಡುವುದರಿಂದ ಕೂದಲು ಕೂಡ ಸ್ಟ್ರಾಂಗ್ ಆಗುತ್ತದೆ.      

ಇಲ್ಲಿ ನೀಡಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದರು. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸಿಲ್ಲ.      

ZEENEWS TRENDING STORIES

By continuing to use the site, you agree to the use of cookies. You can find out more by Tapping this link