Friday Remedy: ಧಾರ್ಮಿಕ ನಂಬಿಕೆಗಳ ಪ್ರಕಾರ, ವಿಷ್ಣು ಪ್ರಿಯೆ ಲಕ್ಷ್ಮಿಯನ್ನು ಸಂಪತ್ತಿನ ಅಧಿದೇವತೆ ಎನ್ನಲಾಗುತ್ತದೆ.
Shukravara Upay: ಯಾವ ವ್ಯಕ್ತಿಯ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರುತ್ತದೋ ಅವರು ಜೀವನದಲ್ಲಿ ಎಂದಿಗೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸಂಪತ್ತಿನ ದೇವತೆ, ಭಗವಾನ್ ವಿಷ್ಣುವಿನ ಪ್ರಿಯೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಅತ್ಯಂತ ಪ್ರಾಶಸ್ತ್ಯವಾದ ದಿನ. ಶುಕ್ರವಾರ ಕೆಲವು ಸಣ್ಣ ಪರಿಹಾರಗಳನ್ನು ಮಾಡುವುದರಿಂದ ಲಕ್ಷ್ಮಿ ಒಲಿಯುತ್ತಾಳೆ. ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗಿ ಶ್ರೀಮಂತರಾಗಬಹುದು ಎಂಬುದು ಧಾರ್ಮಿಕ ನಂಬಿಕೆ.
ಶುಕ್ರವಾರದ ದಿನ ಪತಿ ತನ್ನ ಮಡದಿಗೆ, ಮದುವೆಯಾಗದ ಪುರುಷರು ತಮ್ಮ ತಾಯಿ, ಅಕ್ಕ-ತಂಗಿಗೆ ಉಡುಗೊರೆ ನೀಡುವುದರಿಂದ ಸಂಪತ್ತು ವೃದ್ದಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಪುರುಷರು ಶುಕ್ರವಾರದಂದು ತಮ್ಮ ಸಂಗಾತಿಗೆ ಅವರ ಸೌಂದರ್ಯವನ್ನು ಹೆಚ್ಚಿಸುವಂತಹ ಉಡುಗೊರೆಗಳನ್ನು ನೀಡುವುದರಿಂದ ಅಂತಹ ಮನೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯೇ ನೆಲೆಗೊಳ್ಳುತ್ತಾಳೆ ಎಂಬುದು ನಂಬಿಕೆ.
ಪುರುಷರು ಮಹಿಳೆಯರಿಗೆ ಅವರ ಶೃಂಗಾರಕ್ಕೆ ಸಂಬಂಧಿಸಿದ (ಹಣೆ ಬೊಟ್ಟು, ಬಳೆ, ಸೆಂಟ್, ನೈಲ್ ಪಾಲಿಶ್, ಕೇಶಾಲಂಕಾರದ ವಸ್ತುಗಳು, ಹೊಸ ಬಟ್ಟೆ, ಕಾಡಿಗೆ) ಯಾವುದಾದರೂ ವಸ್ತುವನ್ನು ಶುಕ್ರವಾರ ಉಡುಗೊರೆಯಾಗಿ ನೀಡಿದರೆ ಮನೆಯಲ್ಲಿ ಸಕಾರಾತ್ಮಕತೆ ತುಂಬುತ್ತದೆ.
ಕನಿಷ್ಠ ಏಳು ವಾರಗಳವರೆಗೆ ಪ್ರತಿ ಶುಕ್ರವಾರ ಪುರುಷರು ತಮ್ಮ ಸಂಗಾತಿಗೆ ಈ ರೀತಿ ಉಡುಗೊರೆ ನೀಡುವುದರಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಕೊನೆಗೊಳ್ಳುತ್ತದೆ. ಅದೃಷ್ಟದ ಬೆಂಬಲ ಲಕ್ಷ್ಮಿ ಆಶೀರ್ವಾದದಿಂದ ಸಿರಿ-ಸಂಪತ್ತು ಹೆಚ್ಚಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.