ಸೋಮನಹಳ್ಳಿಯಿಂದ ದಿಲ್ಲಿಯವರೆಗೆ....ಎಸ್.ಎಂ.ಕೃಷ್ಣಾ ನಡೆದು ಬಂದ ಹಾದಿ..! ಇಲ್ಲಿವೆ ಅಪರೂಪದ ಫೋಟೋಗಳು
ಸಿಎಂ ಆಗಿದ್ದ ವೇಳೆಯಲ್ಲಿ ಅನೇಕ ಭೂದಾಖಲೆಗಳ, ಡಿಜಿಟಲೀಕರಣ, ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ , ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ನಿರ್ಮಾಣ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದ್ದು ಅವರ ಹೆಗ್ಗಳಿಕೆಯಾಗಿದೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸವನ್ನ ನಿರ್ವಹಿಸಿದ್ದಾರೆ. ಕೇಂದ್ರದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದಲ್ಲದೆ ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
ಸೋಮನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ,ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ ಅವರು ನಂತರ ಬೆಂಗಳೂರಿನ ಲಾ ಕಾಲೇಜಿನಲ್ಲಿ ಬಿ.ಎಲ್ ಪದವಿಯನ್ನು ಪಡೆದರು. ಅನಂತರ ಹೆಸರಾಂತ ಗಣೇಶ್ ರವರ ಬಳಿ ವಕೀಲ ವೃತ್ತಿಯನ್ನು ಆರಂಭಿಸಿದರು.ಮುಂದೆ ಉನ್ನತ ವ್ಯಾಸಂಗಕ್ಕೆ ಅಮೇರಿಕಾಗೆ ತೆರಳಿ ಟಕ್ಸಾಸ್ ಡಲ್ಲಾಸ್ ನಗರದ ಸಥರನ್ ಮೆಥಾಡಿಸ್ಟ್ ವಿವಿಯಲ್ಲಿ ಎಂ.ಸಿ.ಎಲ್ ಪದವಿ ಪಡೆದರು.ತದನಂತರ ವಾಷಿಂಗ್‌ಟನ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಗೆ ಸೇರಿದರಾದರೂ ಆದರೆ ಅದನ್ನು ಪೂರ್ಣಗೊಳಿಸಲಾಗಲಿಲ್ಲ.
ಕೃಷ್ಣರವರು ಕೇವಲ ರಾಜಕೀಯದಲ್ಲದೆ ಭಾರತದ ಸಾಂಸ್ಕೃತಿಕ ಉಡುಗೆಗಳಿಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಇವರಿಗೆ ರೇಷ್ಮೆಯಲ್ಲಿ ನೇಯ್ದಂತಹ ಖಾದಿ,ಉಣ್ಣೆ,ಕೋಟು ಮತ್ತು ಜುಬ್ಬ ಅವರಿಗೆ ಅತ್ಯಂತ ಇಷ್ಟಕರ ವಸ್ತ್ರಗಳಾಗಿದ್ದವು.ಬಾಲ್ಯದಲ್ಲಿ ಹೆಚ್ಚಾಗಿ ಫುಟ್‌ಬಾಲ್ ವಾಲಿಬಾಲ್ ಆಡುತ್ತಿದ್ದರು, ಕಾಲೇಜಿನ ವೇಳೆ ಟೆನ್ನಿಸ್ ಆಡುತ್ತಿದ್ದು ಹಾಗೂ ಬಿಡುವಿನ ವೇಳೆಯಲ್ಲಿ ಟೆನ್ನಿಸ್ ಆಡುತ್ತಿದ್ದರು. ಇವರಿಗೆ ಸಿಹಿ ತಿನಿಸುಗಳು, ನಾಟಿಸ್ಟೈಲ್ ಚಿಕನ್ ಎಂದರೆ ಅಚ್ಚುಮೆಚ್ಚು.
1966 ಏಪ್ರಿಲ್ 29 ರಂದು ಪ್ರೇಮಾ ಎನ್ನುವವರನ್ನು ವಿವಾಹವಾದರು.ಇವರಿಗೆ ಮಾಳವಿಕ ಹಾಗೂ ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ
ಎಸ್ ಎಮ್ ಕೃಷ್ಣರವರು ಹುಟ್ಟಿನಿಂದಲೇ ಶ್ರೀಮಂತ ಕುಟುಂಬಕ್ಕೆ ಸೇರಿದವರು. ಇವರಿಗೆ 10 ಜನ ಮಕ್ಕಳಿದ್ದು ಕೃಷ್ಣರವರು 6ನೇ ಮಗುವಾಗಿ ಜನಿಸಿದರು.ಎಸ್.ಎಮ್ ಕೃಷ್ಣರವರು ಮೂರು ವರ್ಷದವರಿದ್ದಾಗಲೇ 1934ರಂದು ಮಹಾತ್ಮ ಗಾಂಧೀಜಿಯವರನ್ನನು ಭೇಟಿ ಮಾಡಿದ ಹೆಗ್ಗಳಿಕೆ ಅವರದ್ದು.
ಎಸ್. ಎಮ್ ಕೃಷ್ಣರವರ ಮೂಲ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮೇ,1-1932ರಂದು ಜನಿಸಿದ್ದು , ತಂದೆ ಎಸ್ ಸಿ ಮಲ್ಲಯ್ಯ ಹಾಗೂ ತಾಯಿ ತಾಯಮ್ಮ, ಅವರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮಕ್ಕೆ ಸೇರಿದವರು.