12ವರ್ಷಗಳ ಬಳಿಕ ಪಿತೃ ಪಕ್ಷದಲ್ಲಿ ಗಜಕೇಸರಿ ರಾಜಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್ ಲಕ್ಷ್ಮಿ ಕೃಪೆಯಿಂದ ಹಠಾತ್ ಸಂಪತ್ತು

Written ByYashaswini V
Published: Sep 09, 2025, 07:06 AM IST|Updated: Sep 09, 2025, 07:06 AM IST

Gajakesari Yoga: ಪಿತೃ ದೋಷ ನಿವಾರಣೆಗೆ ಪಿತೃ ಪಕ್ಷವನ್ನು ತುಂಬಾ ಪ್ರಾಶಸ್ತ್ಯವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಮಾಡುವ ಕೆಲವು ಕೆಲಸಗಳು ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ನಿವಾರಿಸಿ ಸುಖದ ಹಾದಿಯನ್ನು ಸುಗಮಗೊಳಿಸಲಿವೆ ಎನ್ನಲಾಗುತ್ತದೆ. 2025ರ ಪಿತೃ ಪಕ್ಷದ ಸಂದರ್ಭದಲ್ಲಿ ಅತ್ಯಂತ ಮಂಗಳಕರ ಗಜಕೇಸರಿ ರಾಜಯೋಗ ನಿರ್ಮಾಣವಾಗಲಿದ್ದು ತುಂಬಾ ವಿಶೇಷವಾಗಿದೆ. 

Pitru Paksha1/6

ಪಿತೃಪಕ್ಷ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 07 ಸೆಪ್ಟೆಂಬರ್ 2025ರಿಂದ ಪಿತೃಪಕ್ಷ ಆರಂಭವಾಗಿದೆ. ಸುಮಾರು 15ದಿನಗಳ ಕಾಲ ಪಿತೃ ಪಕ್ಷ ಇರಲಿದ್ದು ಸೆಪ್ಟೆಂಬರ್ 21ರಂದು ಕೊನೆಗೊಳ್ಳಲಿದೆ. ಈ ಸಮಯದಲ್ಲಿ ಪಿತೃಗಳಿಗೆ ತರ್ಪಣ ಬಿಡುವುದರಿಂದ ಪಿತೃದೋಷ ನಿವಾರಣೆಯಾಗುತ್ತದೆ. ಮನೆಯಲ್ಲಿ ಧನಾತ್ಮಕತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. 

Gajakesari Yog In Pitru Paksha2/6

ಪಿತೃಪಕ್ಷದಲ್ಲಿ ಗಜಕೇಸರಿ ಯೋಗ

2025ರ ಪಿತೃಪಕ್ಷ ತುಂಬಾ ವಿಶೇಷವಾಗಿದ್ದು, ಸೆಪ್ಟೆಂಬರ್ 14ರಂದು ಮನಸ್ಸಿನ ಅಂಶವಾದ ಚಂದ್ರ ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇಲ್ಲಿ, ದೇವಗುರು ಬೃಹಸ್ಪತಿ ಜೊತೆಗೆ ಸೇರಿ ಅತ್ಯಂತ ಮಂಗಳಕರ ಗಜಕೇಸರಿ ಯೋಗವನ್ನು ನಿರ್ಮಿಸಲಿದ್ದಾನೆ. 

Gajakesari Yog Effect3/6

12 ವರ್ಷಗಳ ಬಳಿಕ ಪಿತೃಪಕ್ಷದಲ್ಲಿ ಗಜಕೇಸರಿ ಯೋಗ

ವೈದಿಕ ಜ್ಯೋತಿಷ್ಯದ ಪ್ರಕಾರ ಬರೋಬ್ಬರಿ 12 ವರ್ಷಗಳ ಬಳಿಕ ಪಿತೃಪಕ್ಷದಲ್ಲಿ ಮಿಥುನ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದೆ. ಇದರಿಂದ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ. 

Gajakesari Yog Effect4/6

ಮಿಥುನ ರಾಶಿ

ಪಿತೃಪಕ್ಷದ ವೇಳೆ ಮಿಥುನ ರಾಶಿಯಲ್ಲೇ ಗುರು-ಚಂದ್ರರ ಯುತಿಯಿಂದ ಗಜಕೇಸರಿ ರಾಜಯೋಗ ನಿರ್ಮಾಣವಾಗುವುದರಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಕೆಲಸಗಳಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಎಲ್ಲರೂ ತಲೆದೂಗುತ್ತಾರೆ. ವ್ಯವಹಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಮ್ಮ ಕನಸು ನನಸಾಗುವ ಸುವರ್ಣ ಸಮಯ ಇದಾಗಿದೆ. ಹಣಕಾಸಿನ ಸ್ಥಿತಿಯೂ ಸಹ ಉತ್ತಮಗೊಳ್ಳುತ್ತದೆ. 

Gajakesari Yog Effect5/6

ಕನ್ಯಾ ರಾಶಿ

ಈ ರಾಶಿಯವರ ಕರ್ಮ ಸ್ಥಾನದಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣವಾಗಿದ್ದು ವೃತ್ತಿ ಬ್ವದುಕಿನಲ್ಲಿ ಭರಪೂರ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ವೇಳೆ ಭೂಮಿ, ವಾಹನ ಖರೀದಿ ಯೋಗವಿದ್ದು ರಾಜವೈಭೋಗದ ಜೀವನವನ್ನು ನಡೆಸುವಿರಿ. ನಿಮ್ಮ ಬಹುದಿನಗಳ ಕನಸು ಕೈಗೂಡಲಿದ್ದು ಹೊಸ ವ್ಯವಹಾರ ಆರಂಭಿಸುವ ನಿಮ್ಮ ಉತ್ಸಾಹ ಇಮ್ಮಡಿಗೊಳ್ಳಲಿದೆ. 

Gajakesari Yog Effect6/6

ತುಲಾ ರಾಶಿ

ಪಿತೃಪಕ್ಷದಲ್ಲಿ ರೂಪುಗೊಳ್ಳಲಿರುವ ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಇಷ್ಟು ದಿನಗಳ ಸಮಸ್ಯೆಗಳಿಂದ ಪರಿಹಾರ ನೀಡಲಿದ್ದು ಮನೆಯಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ನಿಮ್ಮ ಪರವಾದ ತೀರ್ಪು ಬರಬಹುದು. ಇನ್ನೂ ಮದುವೆಯಾಗದವರಿಗೆ ವಿವಾಹ ಯೋಗವಿದೆ. ಮಕ್ಕಳಿಂದ ಸಂತಸದ ವಾರ್ತೆಯನ್ನು ಕೇಳುವಿರಿ.ಪಾಲುದಾರಿಕೆ ವ್ಯವಹಾರದಲ್ಲಿ ಭರ್ಜರ ಲಾಭವಾಗಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.