Gajakesari Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸಂಧಿಸಿದಾದ ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅಂತೆಯೇ, ಗುರು-ಚಂದ್ರರ ಯುತಿ ಏರ್ಪಟ್ಟಾಗ ಗಜಕೇಸರಿಯಂತಹ ಮಹಾ ರಾಜಯೋಗ ನಿರ್ಮಾಣವಾಗುತ್ತದೆ. ಅಕ್ಟೋಬರ್ ಕೊನೆಯ ಮೂರು ದಿನಗಳು ಗಜಕೇಸರಿ ಯೋಗ ಇರಲಿದ್ದು ಆರು ರಾಶಿಯವರ ಬದುಕನ್ನು ಬಂಗಾರವಾಗಿಸಲಿದೆ.
Gajakesari Rajyog: ವೈದಿಕ ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 29, 30, 31ರ ಮೂರು ದಿನಗಳ ಕಾಲ ಗುರು ಚಂದ್ರರ ಅಪರೂಪದ ಸಂಯೋಗದಿಂದ ಗಜಕೇಸರಿ ಯೋಗ ರೂಪುಗೊಳ್ಳಲಿದೆ. ಈ ಗಜಕೇಸರಿ ಯೋಗದ ಪ್ರಭಾವ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ. ಆದರೆ, ಈ ವೇಳೆ ಆರು ರಾಶಿಯವರ ಬದುಕಿನಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲಿದೆ. ಈ ರಾಶಿಯವರಿಗೆ ಗುರು ಬಲದೊಂದಿಗೆ ಮನಸ್ಸಿನಕಾರಕನಾದ ಚಂದ್ರನ ವಿಶೇಷ ದಯೆ ಇರಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
1/6ಅಕ್ಟೋಬರ್ ಅಂತ್ಯದಲ್ಲಿ ರೂಪುಗೊಳ್ಳಲಿರುವ ಅಪರೂಪದ ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಬಂಪರ್ ಆದಾಯವನ್ನು ಹೊತ್ತು ತರಲಿದೆ. ವೃತ್ತಿಪರರಿಗೆ ನಿಮ್ಮ ಶ್ರಮವನ್ನು ಗುರುತಿಸುವ ಸಮಯ. ಆಸ್ತಿ ವಿವಾದಗಳಲ್ಲಿ ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ ಸಾಧಿಸುವಿರಿ. ಕೌಟುಂಬಿಕ ಸುಖ ಹೆಚ್ಚಾಗಲಿದೆ.
2/6ಉಚ್ಚ ರಾಶಿಯಲ್ಲಿರುವ ಗುರು ಈ ರಾಶಿಯವರಿಗೆ ಹೆಚ್ಚಿನ ಬಲ ನೀಡಲಿದ್ದಾನೆ. ಚಂದ್ರನ ಕೃಪಾಕಟಾಕ್ಷವೂ ಇರಲಿದ್ದು ಆರೋಗ್ಯದಲ್ಲಿ ಧನಾತ್ಮಕ ಫಲಗಳನ್ನು ಕಾಣುವಿರಿ. ಶತ್ರುಗಳ ವಿರುದ್ಧ ಜಯ ಸಾಧಿಸುವ ಸಮಯ ಇದಾಗಿದೆ. ಜೀವನದಲ್ಲಿ ಎದುರಾಗಿರುವ ನಾನಾ ಬಗೆಯ ಸಮಸ್ಯೆಗಳಿಂದಲೂ ಮುಕ್ತಿ ಪಡೆಯುವಿರಿ.
3/6ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಅಧಿಕ ಲಾಭಾಂಶವನ್ನು ನೀಡಲಿದೆ. ನಿರುದ್ಯೋಗಿಗಳಿಗೆ ಕನಸಿನ ಉದ್ಯೋಗ ದೊರೆಯಲಿದೆ. ಹೊಸ ಮನೆ, ಭೂಮಿ ಖರೀದಿಸಲು ಯೋಚಿಸುತ್ತಿರುವವರಿಗೆ ಗುರು ಬಲ ಇರಲಿದೆ. ಆಸ್ತಿ ಮಾರಾಟ ಮಾಡಲು ಚಿಂತಿಸುತ್ತಿರುವವರಿಗೂ ಕೂಡ ಉತ್ತಮ ಲಾಭ ದೊರೆಯಲಿದೆ.
4/6ಗುರು ಚಂದ್ರರ ಪರಸ್ಪರ ದೃಷ್ಟಿಕೋನದಿಂದ ರೂಪುಗೊಳ್ಳಲಿರುವ ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭಾರೀ ಆದಾಯವನ್ನು ನೀಡಲಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯಲಿದ್ದು ಮನೆಯಲ್ಲಿ ಮಂಗಳ ಕಾರ್ಯಗಳು ಮನಸ್ಸಿನ ಸಂತೋಷವನ್ನು ಇಮ್ಮಡಿಗೊಳಿಸಲಿವೆ.
5/6ಅದೃಷ್ಟದ ಸ್ಥಾನದಲ್ಲಿ ಶುಭ ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಹೆಜ್ಜೆ ಹೆಜ್ಜೆಗೂ ಭಾರೀ ಯಶಸ್ಸು, ಗೌರವವನ್ನು ನೀಡಲಿದೆ. ಉದ್ಯೋಗಿಗಳಿಗೆ ವಿದೇಶ ಪ್ರಯಾಣ ಸಾಧ್ಯತೆ ಇದ್ದು ಅಷ್ಟ ದಿಕ್ಕುಗಳಿಂದಲೂ ಆದಾಯ ಹರಿದುಬರಲಿದೆ. ವೃತ್ತಿಯಲ್ಲಿ ಉನ್ನತ ಹುದ್ದೆ ಅಲಂಕರಿಸುವ ಸಂಭವವಿದ್ದು, ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಮನೆಯಲ್ಲಿ ಮದುವೆಯಂತಹ ಮಂಗಳ ಕಾರಿಗಳು ನಡೆಯಬಹುದು.
6/6ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅಗಾಧ ಯಶಸ್ಸನ್ನು ನೀಡಲಿದ್ದಾನೆ. ನೀವು ತುಂಬಾ ದಿನದಿಂದ ಪ್ರಯತ್ನಿಸುತ್ತಿದ್ದ ವ್ಯವಹಾರದಲ್ಲಿ ಜಯ ಸಾಧಿಸುವಿರಿ. ಶತ್ರುಭಾದೆಯಿಂದ ಪರಿಹಾರ ದೊರೆಯಲಿದೆ. ಈ ವೇಳೆ ನಿಮ್ಮ ಕನಸಿನ ವಾಹನವನ್ನು ಖರೀದಿಸುವ ಸುಯೋಗವೂ ಇದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.