White Hair: ಇತ್ತೀಚಿನ ದಿನಗಳಲ್ಲಿ ಅನೇಕರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಬೂದು ಬಣ್ಣಕ್ಕೆ ತಿರುಗುವುದರಿಂದ, ನಾಲ್ಕು ಜನರ ಎದುರು ಹೋಗಿ ನಿಲ್ಲಲ್ಲು ಮುಜುಗರವೆನಿಸುತ್ತದೆ.
White Hair: ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಯುವಜನರಲ್ಲಿ ಈ ನಡುವೆ ಬಿಳಿ ಕೂದಲಿನ ಸಮಸ್ಯೆ ಬಹಳ ಸಾಮಾನ್ಯವಾಗಿದೆ. ಅಕಾಲಿಕ ಬೂದು ಕೂದಲು ಅನಾರೋಗ್ಯದ ಸಂಕೇತವಾಗಿರಬಹುದು. ಸರಿಯಾದ ಪೋಷಣೆಯ ಕೊರತೆಯಿಂದ ಕೂದಲಿನ ಬಣ್ಣ ಬದಲಾಗುತ್ತದೆ.
ಈ ಬೂದು ಕೂದಲನ್ನು ಕಡಿಮೆ ಮಾಡಲು ಅನೇಕ ಜನರು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವು ಖಂಡಿತವಾಗಿಯೂ ಅಡ್ಡಪರಿಣಾಮಗಳನ್ನು ಬೀರುತ್ತವೆ.
ನೀವು ಮನೆಯಲ್ಲಿಯೇ ಕೆಲವು ನೈಸರ್ಗಿಕ ವಿಧಾನಗಳ ಮೂಲಕ ಬಿಳಿ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಕೊಬ್ಬರಿ ಎಣ್ಣೆಯೊಂದಿಗೆ ಈ ಎರಡು ಪದಾರ್ಥಗಳನ್ನು ಬೆರೆಸಿ ಅಚ್ಚುವ ಮೂಲಕ ನಿಮ್ಮ ಕೂದಲನ್ನು ಕಪ್ಪಾಗಿಸಬಹುದು.
ಆಮ್ಲಾ ಆರೋಗ್ಯಕ್ಕೆ ಮಾತ್ರವಲ್ಲ, ಕೂದಲಿನ ಸಮಸ್ಯೆಗಳನ್ನು ಸಹ ಕಡಿಮೆ ಮಾಡುವಲ್ಲಿ ಸಹಾಯಕಾರಿ, ರಾತ್ರಿಯಿಡೀ ತೆಂಗಿನ ಎಣ್ಣೆಯಲ್ಲಿ ಆಮ್ಲಾ ತುಂಡುಗಳನ್ನು ನೆನೆಸಿ, ಬೆಳಿಗ್ಗೆ ಆ ಎಣ್ಣೆಯಿಂದ ನಿಮ್ಮ ಕೂದಲಿಗೆ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಸ್ನಾನ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಇದು ಅಲ್ಲದೆ ಇದ್ದರೂ ಆಮ್ಲಾ ಪುಡಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ಬೇರಿನಿಂದಲೇ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಕರಿಬೇವು ಕೂದಲನ್ನು ಆರೋಗ್ಯಕರವಾಗಿಡಲು ಮತ್ತು ಕಪ್ಪಾಗಿಸಲು ತುಂಬಾ ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಡಬಲ್-ಬಾಯ್ಲಿಂಗ್ ವಿಧಾನವನ್ನು ಬಳಸಿ ಕುದಿಸಿ ತಣ್ಣಗಾಗಲು ಬಿಡಿ. ನಂತರ ಅದನ್ನು ನಿಮ್ಮ ಕೂದಲಿಗೆ ಹಚ್ಚಿ, ಮಸಾಜ್ ಮಾಡಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
ಈರುಳ್ಳಿ ರಸವನ್ನು ತೆಗೆದುಕೊಂಡು ಅದನ್ನು ನಿಮ್ಮ ಕೂದಲಿಗೆ ಸ್ವಲ್ಪ ಸಮಯ ಹಚ್ಚಿ ಸುಮಾರು 40 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ನಿಮ್ಮ ತಲೆಯನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಈರುಳ್ಳಿ ರಸ ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ.
ಮೆಹಂದಿ ಮತ್ತು ಕಾಫಿ ಪೇಸ್ಟ್ ಬೆರೆಸಿ ಕೂದಲಿಗೆ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುತ್ತದೆ. ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ ಮತ್ತು ಒಂದು ಗಂಟೆ ಹಾಗೆಯೇ ಬಿಡಿ. ಅದರ ನಂತರ, ನಿಮ್ಮ ತಲೆಯನ್ನು ಸಾಮಾನ್ಯ ಶಾಂಪೂ ಬಳಸಿ ತೊಳೆಯಿರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತಪಡಿಸುವುದಿಲ್ಲ.