5 ವಾರಗಳ ಗರಿಷ್ಠ ಮಟ್ಟದಿಂದ ಇಳಿದ ಚಿನ್ನದ ಬೆಲೆ !ಬಲು ಅಗ್ಗವಾಯಿತು ಬೆಳ್ಳಿ
ಈ ವಾರದ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಜಿಗಿತ ಕಂಡು ಬಂದಿತ್ತು. ಆದರೆ ವಾರಾಂತ್ಯವಾಗುತ್ತಿದ್ದ ಹಾಗೆ ಮತ್ತೆ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಂಡು ಬರುತ್ತಿದೆ.
ಡಾಲರ್ ಬಲದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಒತ್ತಡಕ್ಕೆ ಒಳಗಾಗಿರುವುದು ಕಂಡುಬಂದಿದೆ. ಮುಂದಿನ ವಾರ ಫೆಡ್‌ನ ನೀತಿಗೆ ಮುಂಚಿತವಾಗಿ ಮಾರುಕಟ್ಟೆಯಲ್ಲಿ ಈ ಪರಿಸ್ಥಿತಿ ಕಂಡುಬರುತ್ತಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್‌ನ ಅಧಿಕೃತ ವೆಬ್‌ಸೈಟ್ (ibjarates.com) ಪ್ರಕಾರ, 999 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 767 ರೂಪಾಯಿಗಳಷ್ಟು ಕುಸಿದು ಕಂಡು ಬಂದಿದೆ.
ಬೆಳ್ಳಿ ಬೆಲೆಯಲ್ಲಿ ಕೂಡಾ ಇಂದು 3,100 ರೂಪಾಯಿಯಷ್ಟು ಕುಸಿದಿದ್ದು, ಕೆ.ಜಿಗೆ 90,200 ರುಪಾಯಿ ಆಗಿದೆ.
MCX ನಲ್ಲಿ ಚಿನ್ನವು 8 ರೂ.ಗಳಷ್ಟು ಕಡಿಮೆಯಾಗಿ 10 ಗ್ರಾಂಗೆ 77,961 ರೂ.ಗೆ ಸ್ಥಿರವಾಯಿತು. ಇಂದು ಬೆಳಗ್ಗೆ ಬೆಳ್ಳಿ ಪ್ರತಿ ಕೆಜಿಗೆ 343 ರೂಪಾಯಿ ಇಳಿಕೆಯಾಗಿ 92,290 ರೂಪಾಯಿಗಳಿಗೆ ತಲುಪಿದೆ.
ನಿಮ್ಮ ನಗರದಲ್ಲಿ ಈಗ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್‌ನ ಅಧಿಕೃತ ವೆಬ್‌ಸೈಟ್ ibjarates.com ಮೂಲಕ ತಿಳಿದುಕೊಳ್ಳಬಹುದು.